ರಾಣಿಬೆನ್ನೂರು: ನೇಕಾರ ಸಮಾಜದ ಜನರು ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಗೌರವಾಧ್ಯಕ್ಷ ಡಾ. ಬಸವರಾಜ ಕೇಲಗಾರ ಹೇಳಿದರು. ನಗರದ ಸಾಲೇಶ್ವರ ಸಭಾಭವನದಲ್ಲಿ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ನಾವುಗಳು ಒಂದಾದರೆ ಸರ್ಕಾರಗಳು ನಮ್ಮನ್ನು ಗುರುತಿಸುತ್ತವೆ ಎಂದರು. ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪಟ್ಟಶಾಲಿ ಸಮಾಜದ ಅಧ್ಯಕ್ಷ ರಮೇಶ ಗುತ್ತಲ ಮಾತನಾಡಿದರು. ದೇವರ ದಾಸಿಮಯ್ಯನವರ ಚರಿತ್ರೆ ಕುರಿತು ನಿವೃತ್ತ ಶಿಕ್ಷಕ ಸೋಮಶೇಖರ್ ದುರ್ಗಸಿಮಿ ಉಪನ್ಯಾಸ ನೀಡಿದರು.ಶಂಕ್ರಣ್ಣ ನ್ಯಾಮತಿ, ಹನುಮಂತಪ್ಪ ಅಮಾಸಿ, ಹನುಮಂತಪ್ಪ ಪೂಜಾರಿ, ಶಿವಣ್ಣ ಬಡೇಂಕಲ್, ಅಶೋಕ ದುರ್ಗಸಿಮಿ, ಗಣೇಶ ಶಿರಗೂರ, ನೀಲಪ್ಪ ಕುಮಾರಪ್ಪನವರ, ಪಾಂಡಪ್ಪ ವಗ್ಗಾ, ಮಂಜುನಾಥ ಹುಬ್ಬಳ್ಳಿ, ಬಸವರಾಜ ಮೈಲಾರ, ಗಣೇಶ ಹಾವನೂರು, ಎಲ್ಲಪ್ಪ ಗುತ್ತಲ, ಪರಶುರಾಮ ಅಗಡಿ, ವೆಂಕಟೇಶ ಪೆನಗೊಂಡಲ, ವಾಸಪ್ಪ ನೇಕಾರ, ನಾಗರಾಜ ಕಾಸಲ, ವೀರಣ್ಣ ಕೋಳಿವಾಡ, ವೆಂಕಟೇಶ ಕಾಕಿ, ಅರವಿಂದ ಏಕಬೋಟೆ, ದೇವರಾಜ, ಚಿದಾನಂದ, ಶಶಿಕಲಾ ಬಡೆಂಕಲ, ಶಾರದಾ ಆನ್ವೇರಿ, ಲಕ್ಷ್ಮಿ ಎಡಕಿ, ಸುಮಾ ಹಳ್ಳಿ, ಜಯಶ್ರೀ ಕುಂಚೂರು, ಚಂದ್ರಪ್ಪ ರಿತ್ತಿ, ಆನಂದ ಕದರಮಂಡಲಗಿ, ಶಂಕರ ಇದ್ದರು.ದಾಸಿಮಯ್ಯ ಜಯಂತಿ ಆಚರಣೆ: ಹಾವೇರಿ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಸರಳವಾಗಿ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯ ಜಯಂತಿಯನ್ನು ಆಚರಿಸಲಾಯಿತು.ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ದಾಸಿಮಯ್ಯ ಅವರ ಭಾವ ಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್ ವಿ ಚಿನ್ನಿಕಟ್ಟಿ, ತಾಲ್ಲೂಕು ಅಧ್ಯಕ್ಷ ಮಹೇಶ ಕುದರಿ, ನಗರ ಅಧ್ಯಕ್ಷ ಸೋಮನಾಥ ಕುದರಿ, ಎಂ. ಜಿ. ದೇವಾಂಗಮಠ, ರಾಜಶೇಖರ ಕುದರಿ ಇದ್ದರು.