ರಂಗಿನ ಓಕುಳಿಯಲ್ಲಿ ಮಿಂದೆದ್ದ ಹಾನಗಲ್ಲಿನ ಜನತೆ

KannadaprabhaNewsNetwork |  
Published : Apr 01, 2024, 12:53 AM IST
ಪೋಟೋ ಇದೆ. | Kannada Prabha

ಸಾರಾಂಶ

ರಂಗು ರಂಗಿನ ಆಟದ ಕುಣಿದಾಟ, ಬಣ್ಣ ಬಳಿದಾಟ ಸೇರಿದಂತೆ ಹಾನಗಲ್ಲಿನ ರಂಗಿನ ಹಬ್ಬ ಹರ್ಷೋಧ್ಗಾರಗಳೊಂದಿಗೆ ಮಕ್ಕಳು ಮಹಿಳೆಯರೂ ಸೇರಿದಂತೆ ಯುವಕರು ಉತ್ಸಾಹದಲ್ಲಿ ಮಿಂದೆದ್ದು ವಿಶೇಷ ಆಚರಣೆಯಾಗಿತ್ತಲ್ಲದೆ, ಅಂಗಡಿ ಮುಂಗಟ್ಟುಗಳೆಲ್ಲ ಬಂದ್ ಆಗಿ ಎಲ್ಲರೂ ಒಂದಾಗಿ ಹಬ್ಬ ಆಚರಿಸಿ ಶಾಂತ ಓಕಳಿಗೆ ಸಾಕ್ಷಿಯಾದರು.

ಹಾನಗಲ್ಲ: ರಂಗು ರಂಗಿನ ಆಟದ ಕುಣಿದಾಟ, ಬಣ್ಣ ಬಳಿದಾಟ ಸೇರಿದಂತೆ ಹಾನಗಲ್ಲಿನ ರಂಗಿನ ಹಬ್ಬ ಹರ್ಷೋದ್ಗಾರಗಳೊಂದಿಗೆ ಮಕ್ಕಳು ಮಹಿಳೆಯರೂ ಸೇರಿದಂತೆ ಯುವಕರು ಉತ್ಸಾಹದಲ್ಲಿ ಮಿಂದೆದ್ದು ವಿಶೇಷ ಆಚರಣೆಯಾಗಿತ್ತಲ್ಲದೆ, ಅಂಗಡಿ ಮುಂಗಟ್ಟುಗಳೆಲ್ಲ ಬಂದ್ ಆಗಿ ಎಲ್ಲರೂ ಒಂದಾಗಿ ಹಬ್ಬ ಆಚರಿಸಿ ಶಾಂತ ಓಕಳಿಗೆ ಸಾಕ್ಷಿಯಾದರು.ಭಾನುವಾರ ಬೆಳಗಿನಿಂದಲೇ ಹಾನಗಲ್ಲಿನಲ್ಲಿ ಆರಂಭವಾದ ಓಕಳಿ, ಓಣಿ ಓಣಿಯಲ್ಲೆಲ್ಲ ಮಕ್ಕಳಿಂದ ಬಣ್ಣಾಟದ ಮೂಲಕ ಆರಂಭವಾಯಿತು. ಯುವಕರು ಹಲಗೆ ಬಾರಿಸುತ್ತ, ಸೋಗು ಹಾಕಿದವರೊಂದಿಗೆ ಖುಷಿ ಪಟ್ಟು, ಗೆಳೆಯರು ಹಿರಿಯರಿಗೆ ಬಣ್ಣ ಬಳಿದು ಸಂತಸಪಟ್ಟರು.ನಡು ಮಧ್ಯಾಹ್ನದ ಹೊತ್ತಿಗೆ ಸಂಪ್ರದಾಯದಂತೆ ಹಾನಗಲ್ಲಿನ ಚಾವಡಿ ಕತ್ತರಿಯಲ್ಲಿರುವ ಕಾಮ ದಹನದ ನಂತರ ಇಡೀ ಊರಿನ ೧೮ ಕಡೆಗಳಲ್ಲಿ ಪೂಜಿಸಿದ ಕಾಮ ದಹನ ನಡೆಯಿತು. ಹಿರಿಯರು ಯುವಕರು ಒಟ್ಟಾಗಿ ಸೇರಿ ಹಲಗೆ ಬಡಿಯುತ್ತ ಎಲ್ಲ ಕಾಮನನ್ನು ಸ್ಥಾಪಿಸಿದ ಸ್ಥಳಗಳಲ್ಲಿಗೆ ಹೋಗಿ ಕಾಮ ದಹನ ಮಾಡಿದರು. ಶನಿವಾರ ಸಂಜೆಯಿಂದಲೇ ಹಾನಗಲ್ಲಿನಲ್ಲಿ ಪೊಲೀಸ್ತ್ ಬಂದೋಬಸ್ತ ಏರ್ಪಡಿಸಲಾಗಿತ್ತು. ಊರಿನ ಕೆಲವೆಡೆ ಪೊಲೀಸ್ ಸಿಬ್ಬಂದಿ ಶಾಂತ ಹೋಳಿಗಾಗಿ ಕಾವಲಾಗಿದ್ದರು.ರಂಗಿನ ಹಬ್ಬ ಶಾಂತವಾಗಿ ನಡೆಸಿದ ಹಾನಗಲ್ಲಿನ ಎಲ್ಲ ಹಿರಿ ಕಿರಿಯರು, ಮಹಿಳೆಯರು, ಮಕ್ಕಳಿಗೆ ಅಭಿನಂದನೆಗಳು. ನಾಲ್ಕು ದಿನಗಳ ಕಾಲ ಅತ್ಯುತ್ತಮ ಸಾಂಸ್ಕೃತಿಕ ವಾತಾವರಣ ಸೃಷ್ಟಿ ಮಾಡಿ, ಅರ್ಥಪೂರ್ಣ ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಸಿ, ಎಲ್ಲರೂ ಒಟ್ಟಿಗೆ ಸೇರಿ ಆಚರಿಸಿದ ಈ ಹಬ್ಬ ಸಂಬಂಧಗಳನ್ನು ಬೆಸೆಯುವ ಸಂಕಲ್ಪದ ಹಬ್ಬವಾಗಿತ್ತು. ಎಲ್ಲ ಹಬ್ಬಗಳನ್ನು ಹರ್ಷದಿಂದ ಆಚರಿಸೋಣ. ಒಂದಾಗಿ ಬಾಳೋಣ ಎಂದು ತಹಸೀಲ್ದಾರ್‌ ಎಸ್. ರೇಣುಕಾ ಹೇಳಿದರು.ನಿಜವಾದ ಸಾಂಸ್ಕೃತಿಕತೆಯನ್ನು ಮೆರೆದ ಹಾನಗಲ್ಲ ಕಾಮನ ಹಬ್ಬ ಖುಷಿ ನೀಡಿದೆ. ಎಲ್ಲಿಯೂ ಅಸಂಬದ್ಧತೆಗೆ ಅವಕಾಶವಿಲ್ಲದಂತೆ. ಅರ್ಥಪೂರ್ಣ ಅಚರಣೆಗಳನ್ನೊಳಗೊಂಡು ಸಂಭ್ರಮಿಸಿರುವುದು ಹಾನಗಲ್ಲ ಜನತೆ ತಂದು ಕೊಟ್ಟ ಏಕತೆ ಹಾಗೂ ಧಾರ್ಮಿಕತೆ. ಹಬ್ಬದ ಹೆಸರಿನಲ್ಲಿ ಒಳ್ಳೆಯ ಸಾಂಸ್ಕೃತಿಕ ಹಿರಿಮೆಯನ್ನು ಯುವಕರು, ಹಿರಿಯರು ಕೂಡಿ ತಂದು ಕೊಟ್ಟಿದ್ದಾರೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಎಂ.ಬಿ. ಕಲಾಲ ಹೇಳಿದರು.

PREV

Recommended Stories

ಬಡವರ ಜೇಬಿಗೆ ನಮ್ಮ ಸರ್ಕಾರ ₹1 ಲಕ್ಷ ಕೋಟಿ ಹಾಕಿದೆ : ಡಿಕೆಶಿ
ಒಳ ಮೀಸಲು ಸಿದ್ದರಾಮಯ್ಯ ಚಿತ್ರಕ್ಕೆ ಹಾಲಿನ ಅಭಿಷೇಕ