ಜಾತ್ರೆಯಲ್ಲಿ ಬಾಯಿಬೀಗ ಹಾಕಿಕೊಂಡು ಭಕ್ತಿಯ ಪಾರಕಾಷ್ಠೆ

KannadaprabhaNewsNetwork |  
Published : Apr 04, 2024, 01:00 AM IST
3ಸಿಎಚ್‌ಎನ್‌53ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವದ ಪ್ರಯುಕ್ತ ಬುಧವಾರ ದೊಡ್ಡ ಬಾಯಿ ಬೀಗ ಹಾಕಿಕೊಂಡು ಭಕ್ತಿಯ ಪರಾಕಾಷ್ಠೆ ಮೆರೆದದರು. | Kannada Prabha

ಸಾರಾಂಶ

ಇತಿಹಾಸ ಪ್ರಸಿದ್ಧಿ ಪಡೆದಿರುವ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ನಡೆದ ಪೂಜಾ ಕಾರ್ಯಕ್ರಮಗಳ ನಂತರ ದೊಡ್ಡ ಬಾಯಿ ಬೀಗ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಹನೂರುಇತಿಹಾಸ ಪ್ರಸಿದ್ಧಿ ಪಡೆದಿರುವ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ನಡೆದ ಪೂಜಾ ಕಾರ್ಯಕ್ರಮಗಳ ನಂತರ ದೊಡ್ಡ ಬಾಯಿ ಬೀಗ ಕಾರ್ಯಕ್ರಮ ಜರುಗಿತು. ಆದಿ ದೇವತೆ ಶಕ್ತಿ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಹರಕೆ ಹೊತ್ತ 104 ಮಾರಮ್ಮನ ಭಕ್ತರು ಕಳೆದ ಒಂದು ವಾರದಿಂದ ಮಾಲೆ ಧರಿಸಿ ಅರಶಿನ ಬಣ್ಣದ ಬಟ್ಟೆಯಲ್ಲಿ ದೇವಾಲಯದ ಕೆಲಸ ಕಾರ್ಯಗಳನ್ನು ಮಾಡುವ ಭಕ್ತರಲ್ಲಿ ಮಹಿಳಾ ಭಕ್ತರು 12 ಉಳಿದಂತೆ ಪುರುಷ ಭಕ್ತರು 92 ದೊಡ್ಡ ಬಾಯಿ ಬೇಗ ಹಾಕಿಕೊಂಡು ಭಕ್ತಿಯ ಪರಾಕಾಷ್ಠೆ ಮೆರೆದರು.

ಗ್ರಾಮ ದೇವತೆ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವ ಮೂರನೇ ದಿನ ಬುಧವಾರ ನಡೆದ ಸಣ್ಣ ಬಾಯಿ ಬೀಗ ಬೆಳಗ್ಗೆಯಿಂದಲೇ ನಡೆಯಿತು. ಈ ವೇಳೆಯಲ್ಲಿ ದೊಡ್ಡ ಬಾಯಿ ಭಕ್ತರು 18, 20 ಅಡಿ ಉದ್ದದ ಸರಳುಗಳನ್ನು ಬಾಯಿಗೆ ಚುಚ್ಚಿಕೊಂಡು ಹೋಗುವುದನ್ನು ನೋಡಲು ಬಾರಿ ಸಂಖೆಯಲ್ಲಿ ಭಕ್ತರು ನೆರದಿದ್ದರು.

ದೊಡ್ಡ ಬಾಯಿ ಬೀಗ ನೋಡಲು ನೆರದಿದ್ದ ಭಕ್ತರನ್ನು ತಡೆಯಲು ಪಟ್ಟಣದ ಪೊಲೀಸರು ಹರ ಸಾಹಸ ಪಡುವಂತಾಯಿತು. ಆಂಜನೇಯ ಸ್ವಾಮಿ ದೇವಾಲಯದ ಬಳಿ, ಬಾಯಿ ಬೀಗ ಹಾಕಿಕೊಂಡು ಮಠದ ಬೀದಿ ಮೂಲಕ ತೆರಳುವ ದೊಡ್ಡ ಬಾಯಿ ಬೀಗ ಬಸ್ ನಿಲ್ದಾಣದ ಮೂಲಕ ದೇವಾಲಯಕ್ಕೆ ಬಂದು ಸೇರುತ್ತದೆ ಎಲ್ಲಾ ಕಡೆ ಕಟ್ಟುನಿಟ್ಟಿನಿಂದ ಪೊಲೀಸರು ಯಾವುದೇ ಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತ ಕ್ರಮವಾಗಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಂಗೆ ಸಿಎಂ ಸ್ಥಾನ ನೀಡದಿದ್ದರೆ ರಾಜ್ಯಕ್ಕೆ ಅಪಮಾನ ಮಾಡಿದಂತೆ
ಮೀಸಲು ವರ್ಗೀಕರಣದ ವಿರುದ್ಧ ಇಂದು ಬೆಳಗಾವಿ ಚಲೋ