ಅರಿಶಿಣ ಬೆಳೆ ಮಧ್ಯದಲ್ಲಿ ಮಾದಕ ವಸ್ತು ಬೆಳೆದಿದ್ದ ವ್ಯಕ್ತಿ । 211 ಕೆಜಿ ತೂಕದ 185 ಗಾಂಜಾ ಗಿಡ ವಶ
ಕನ್ನಡಪ್ರಭ ವಾರ್ತೆ ಹನೂರುಅರಿಶಿಣ ಫಸಲಿನ ಮಧ್ಯದಲ್ಲಿ ಅಪಾರ ಪ್ರಮಾಣವಾದ ಗಾಂಜಾ ಬೆಳೆದಿದ್ದ ವ್ಯಕ್ತಿಯೊರ್ವನನ್ನು ರಾಮಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹನೂರು ತಾಲೂಕಿನ ರಾಮಪುರ ಪೊಲೀಸ್ ಠಾಣಾ ಸರಹದ್ದಿನ ಕುರಟ್ಟಿ ಹೊಸೂರು ಸಮೀಪದಲ್ಲಿ ಬರುವ ಎಲ್‌ಪಿಎಸ್ ಕ್ಯಾಂಪ್ ನ ಜಮೀನ್ ಒಂದರಲ್ಲಿ ಕೆಂಪನಟ್ಟಿ ಗ್ರಾಮದ ಮಾರ 68 ವರ್ಷ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವ ಕುರಿತು ಖಚಿತ ಮಾಹಿತಿಯನ್ನು ಆಧರಿಸಿ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಭೇಟಿ ಕವಿತಾ ಕೊಳ್ಳೇಗಾಲ ಉಪ ವಿಭಾಗ ಧರ್ಮೇಂದರ್ ಅವರ ಮಾರ್ಗದರ್ಶನದಲ್ಲಿ ರಾಮಪುರ ಪೊಲೀಸ್ ಇನ್ಸ್‌ಪೆಕ್ಟರ್ ಶೇಷಾದ್ರಿ ಹಾಗೂ ಪಿಎಸ್ಐ ಗಳಾದ ಈಶ್ವರ್ ಮತ್ತು ಲೋಕೇಶ್ ಸಿಬ್ಬಂದಿ ವರ್ಗದವರು ದಾಳಿ ನಡೆಸಿ ಅರಿಶಿನ ಫಸಲಿನ ಮಧ್ಯದಲ್ಲಿ ಬೆಳೆಯಲಾಗಿದೆ ಅಪಾರ ಪ್ರಮಾಣವಾದ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿಲಕ್ಷಾಂತರ ರು. ಬೆಲೆಬಾಳುವ 211 ಕೆಜಿ ತೂಕದ 185 ಗಾಂಜಾ ಗಿಡಗಳನ್ನು ಅರಿಶಿಣ ಫಸಲಿನ ಮಧ್ಯದಲ್ಲಿ ಬೆಳೆಯಲಾಗುತ್ತಿದ್ದನ್ನು ಪತ್ತೆ ಹಚ್ಚಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ:
ರಾಮಪುರ ಪೊಲೀಸ್ ಠಾಣೆಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಟಿ ಕವಿತಾ ಭೇಟಿ ನೀಡಿ ಎಲ್‌ಪಿಎಸ್ ಕ್ಯಾಂಪ್ ನ ಜಮೀನಿನಲ್ಲಿ ಗಾಂಜಾ ಬೆಳೆಯಲು ಸಹಕಾರ ನೀಡಿದ ಮಾದೇವ ಎಂಬ ವ್ಯಕ್ತಿಯನ್ನು ಸಹ ಈ ಪ್ರಕರಣದಲ್ಲಿ ಪರಿಗಣಿಸಿ ವ್ಯಕ್ತಿಯ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಕ್ರಮ ಕೈಗೊಳ್ಳಿ ಈ ಹಿಂದೆ ಸಹ ಗಾಂಜಾ ಪ್ರಕರಣದಲ್ಲಿ 2021 ರಲ್ಲಿ ಹನೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೊಳ್ಳೇಗಾಲ ಠಾಣೆಯಲ್ಲೂ ಸಹ ಗಾಂಜಾ ಸಾಗಣೆ ಪ್ರಕರಣ ದಾಖಲಾಗಿರುವುದು ಕಂಡು ಬಂದಿದೆ ಹೀಗಾಗಿ ಆ ವ್ಯಕ್ತಿ ಕಾರಾಗೃಹದಲ್ಲಿ ಇದ್ದಾನೆ ಗಾಂಜಾ ಬೆಳೆಯಲು ಪ್ರೇರಣೆ ನೀಡಿದ ಆತನ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವಂತೆ ತಿಳಿಸಿದರು.ಪೊಲೀಸ್ ವರಿಷ್ಠಾಧಿಕಾರಿ ಮೆಚ್ಚುಗೆ:
ರಾಮಪುರ ಪೊಲೀಸರು ಸಹ ಉತ್ತಮ ಕೆಲಸ ಮಾಡುವ ಮೂಲಕ ಅಪಾರ ಪ್ರಮಾಣವಾದ ಗಾಂಜಾ ಬೆಳೆದಿರುವ ಬಗ್ಗೆ ಮಾಹಿತಿ ಪಡೆದು ಅದನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿ ಸಿಬ್ಬಂದಿ ವರ್ಗದವರನ್ನು ಸಹ ಅಭಿನಂದಿಸಿದ್ದಾರೆ.ಕಟ್ಟುನಿಟ್ಟಿನ ಕ್ರಮ ಎಚ್ಚರಿಕೆ
ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಸೇರಿದಂತೆ ಗಾಂಜಾ ಪ್ರಕರಣಗಳು ಪತ್ತೆಯಾಗುತ್ತಿದ್ದು ಈ ಬಗ್ಗೆ ಅಂತಹ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ನಿರ್ದಾಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.