ಚಾರ್ಮಾಡಿ ಘಾಟಿಯಲ್ಲಿ ಹಾಸನ ಮೂಲದ ಎಳೆನೀರು ಸಾಗಣೆ ವಾಹನದ ಚಾಲಕ
ಚಾರ್ಮಾಡಿ ಘಾಟಿಯಲ್ಲಿ ಕಸ ಎಸೆದು ಹೋಗಿದ್ದ ವಾಹನವನ್ನು ಪತ್ತೆ ಹಚ್ಚಿ ಕೆಪಿ ಆಕ್ಟ್ ಪ್ರಕಾರ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
ಚಾರ್ಮಾಡಿ ಘಾಟಿಯಲ್ಲಿ ಮಂಗಳವಾರ ಹಾಸನ ಮೂಲದ ಎಳೆನೀರು ಸಾಗಾಣಿಕೆಯ ವಾಹನದ ಚಾಲಕ ವಾಹನದಲ್ಲಿದ್ದ ಕಸವನ್ನು ಘಾಟಿಯಲ್ಲಿ ಬಿಸಾಕಿ ಮಂಗಳೂರಿನಿಂದ ಕೊಟ್ಟಿಗೆಹಾರದ ಕಡೆಗೆ ತೆರಳಿದ್ದ.ಘಾಟಿಯಲ್ಲಿ ಗಸ್ತು ತಿರುಗುತ್ತಿದ್ದ ಬಣಕಲ್ ಪೊಲೀಸ್ ಸಬ್ ಇನ್ ಸ್ಪೆಕ್ಚರ್ ಡಿ.ವಿ ರೇಣುಕಾ ಅವರು, ಅದರ ಜಾಡು ಹಿಡಿದು ವಾಹನವನ್ನು ಗೇಟ್ ನಲ್ಲಿ ಹಿಡಿದು ವಾಪಾಸ್ ಕರೆ ತಂದು ಅದೇ ಕಸವನ್ನು ತುಂಬಿಸಿ ಚಾಲಕನಿಗೆ ಬಣಕಲ್ ಠಾಣೆಯಲ್ಲಿ ಕೆಪಿ ಆಕ್ಟ್ ಪ್ರಕಾರ ಕೇಸು ದಾಖಲಿಸಿ ದಂಡ ವಿಧಿಸಿ ಕಸವನ್ನು ಅಲ್ಲಿಂದ ಅವರಿಂದಲೇ ತೆರವು ಗೊಳಿಸಿ ಚಾಲಕನಿಗೆ ತಾನು ಮಾಡಿದ ತಪ್ಪಿನ ಅರಿವು ಮೂಡಿಸಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.