ಧಾರವಾಡ:
ಹು-ಧಾ ನಾಗರಿಕ ಪರಿಸರ ಸಮಿತಿ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಇಲ್ಲಿಯ ಆಲೂರು ಭವನದಲ್ಲಿ ಗುರುವಾರ ಆಯೋಜಿಸಿದ್ದ ಪರಿಸರ ಮಿತ್ರ ಪ್ರಶಸ್ತಿ ಬಹುಮಾನ ವಿತರಣೆ ಉದ್ಘಾಟಿಸಿದ ಅವರು, ಗುರು ಸಮಾಜವನ್ನು ಸರಿದಾರಿಯಲ್ಲಿ ನಡೆಯುವ ಸಾರ್ಥಕ ಬದುಕನ್ನು ತೋರಿಸುತ್ತಾನೆ. ಶಿಕ್ಷಕರಾದವರು ಗುರು ಸ್ಥಾನವನ್ನು ಹೊಂದಿ ತಮ್ಮ ಶಿಷ್ಯಂದಿರನ್ನು ಪರಿಸರ ಪ್ರೇಮಿಗಳನ್ನಾಗಿ ಮಾಡುವ ಸತ್ಕಾರ್ಯಕ್ಕೆ ಪರಿಸರ ನಾಗರಿಕ ಸಮಿತಿ ಈ ಯೋಜನೆಯನ್ನು ಶಿಕ್ಷಕರ ಮುಖಾಂತರ ಮುನ್ನಡೆಸುತ್ತಿರುವುದು ಶ್ಲಾಘನೀಯ. ಉತ್ತಮ ಪರಿಸರ ಪಶು, ಪಕ್ಷಿ, ಕ್ರಿಮಿ-ಕೀಟಗಳಿಂದ ಹಿಡಿದು ಮನುಷ್ಯನ ಪ್ರತಿಯೊಂದು ಸಾಧನೆಗೂ ಪರಿಸರ ಪೂರಕವಾಗಿದೆ .ಈ ಪರಿಸರವನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಜಯಶ್ರೀ ಕಾರೇಕರ "ಧರೆ ಕಾಯುವ ಮಕ್ಕಳು " ಕಿರುಹೊತ್ತಿಗೆ ಬಿಡುಗಡೆ ಮಾಡಿ, ಪರಿಸರ ಮಿತ್ರ ಶಾಲಾ ಯೋಜನೆ ನಮ್ಮ ಇಲಾಖೆಯ ಗುಣಾತ್ಮಕ ಶಿಕ್ಷಣದ ಕಲಿಕೆಗೆ ಪೂರಕ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ವಿಭಾಗ ಮಟ್ಟದಲ್ಲಿ ವಿಸ್ತರಿಸಬೇಕು ಎಂದು ಹೇಳಿದರು.ಶಿಕ್ಷಣ ಅಧಿಕಾರಿ ಎಸ್.ಎಂ. ಹುಡೇದಮನಿ, ಡಾ. ರೇಣುಕಾ ಅಮಲಝರಿ ಮಾತನಾಡಿದರು. ಶಂಕರ ಕುಂಬಿ ಅಧ್ಯಕ್ಷತೆ ವಹಿಸಿದ್ದರು. ಕೆ.ಎಚ್. ನಾಯಕ ಸ್ವಾಗತಿಸಿದರು. ಪ್ರಮೀಳಾ ಜಕನ್ನವರ ಪ್ರಾರ್ಥಿಸಿದರು. ಬಾಲ ಬಳಗ ಶಾಲಾ ಮಕ್ಕಳು ಪರಿಸರ ಗೀತೆ ಹಾಡಿದರು. ಬಸವರಾಜ ಕಪಲಿ, ಐ.ಎಲ್. ಪಾಟೀಲ, ಡಾ. ಜಗದೀಶ ಗುಡದಳ್ಳಿ, ಡಾ. ವಿಲಾಸ ಕುಲಕರ್ಣಿ ಇದ್ದರು. ಪರಿಸರ ಮಿತ್ರ ಶಾಲೆ ಪ್ರಥಮ ಬಹುಮಾನವನ್ನು ಕುಂದಗೋಳ ತಾಲೂಕಿನ ಕಿತ್ತೂರ್ ರಾಣಿ ಚೆನ್ನಮ್ಮ ವಸತಿ ಶಾಲೆ, ದ್ವಿತೀಯ ಬಹುಮಾನ ಕಿವುಡಬೈಲ್ ಸರ್ಕಾರಿ ಶಾಲೆಯ ಹಾಗೂ ಕೇಶ್ವಾಪೂರದ ಕಾನ್ವೆಂಟ್ ಹೈಸ್ಕೂಲ್ ಶಾಲೆ ಪಡೆದವು. ತೃತೀಯ ಬಹುಮಾನವನ್ನು ದಾಸ್ತಿಕೊಪ್ಪದ ಸರ್ಕಾರಿ ಆದರ್ಶ ವಿದ್ಯಾಲಯ, ನಲವಡಿಯ ವಿವೇಕಾನಂದ್ ವಿದ್ಯಾಸಂಸ್ಥೆ, ಹಾಗೂ ಗುಡೇನಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡೆದವು. ಸಮಾಧಾನಕರ ಬಹುಮಾನವನ್ನು ಕಲಘಟಗಿಯ ಬಿಸರಳ್ಳಿ, ಕೋಟೂರು, ಯರಿಬೂದಿಹಾಳ, ತಬಕದ ಹೊನ್ನಳ್ಳಿ, ಗಿರಿಯಾಲ ಸರ್ಕಾರಿ ಶಾಲೆಗಳು ಸೇರಿದಂತೆ ಒಟ್ಟು 11 ಬಹುಮಾನ ನೀಡಲಾಯಿತು.