ಛಾಯಾಗ್ರಾಹಕನಿಗೆ ಇತಿಹಾಸ ತಿಳಿಸುವ ಶಕ್ತಿ: ಗವಿಮಠ ಶ್ರೀ

KannadaprabhaNewsNetwork |  
Published : Aug 25, 2025, 01:00 AM IST
24ಜೆಎಲ್ಆರ್ 1: ಜಗಳೂರು ಪಟ್ಟಣದಲ್ಲಿ ನಡೆದ ಛಾಯಾಗಾಹಕರ ದಿನಾಚರಣೆಯಲ್ಲಿ ಕಣ್ವಕುಪ್ಪೆ ಸ್ವಾಮೀಜಿ, ಶಾಸಕ ಬಿ.ದೇವೇಂದ್ರಪ್ಪ ಇದ್ದರು. | Kannada Prabha

ಸಾರಾಂಶ

ಜಗತ್ತಿನ ಇತಿಹಾಸ, ಸನಾತನ ಪರಂಪರೆಯನ್ನು ಭವಿಷ್ಯದ ಪೀಳಿಗೆಗೆ ತೋರಿಸಿದ ಶಕ್ತಿ ಛಾಯಾಗ್ರಾಹಕನದು ಎಂದು ಶ್ರೀ ಕ್ಷೇತ್ರ ಕಣ್ವ ಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕನ್ನಪ್ರಭವಾರ್ತೆ ಜಗಳೂರು

ಜಗತ್ತಿನ ಇತಿಹಾಸ, ಸನಾತನ ಪರಂಪರೆಯನ್ನು ಭವಿಷ್ಯದ ಪೀಳಿಗೆಗೆ ತೋರಿಸಿದ ಶಕ್ತಿ ಛಾಯಾಗ್ರಾಹಕನದು ಎಂದು ಶ್ರೀ ಕ್ಷೇತ್ರ ಕಣ್ವ ಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ವಾಲ್ಮೀಕಿ ಭವನದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು

ಭಾರತ ದೇಶದ ಸನಾತನ ಪರಂಪರೆ, ಇತಿಹಾಸ, ಭೂತ ಮತ್ತು ವರ್ತಮಾನಗಳನ್ನು ಲೋಕಕ್ಕೆ ಬಿಚ್ಚಿಡುವ ಕಾರ್ಯಮಾಡುತ್ತಿರುವ ಛಾಯಾಗ್ರಹಕರ ಕಾರ್ಯ ಇತಿಹಾಸ ಪುಟಗಳಲ್ಲಿ ಈಗಲೂ ಅಚ್ಚಳಿಯದೇ ಉಳಿಯುವಂತೆ ಮಾಡುವ ಕ್ರಿಯೆ ನಿಜಕ್ಕೂ ಸಾರ್ಥಕ ಜಗತ್ತಿನಲ್ಲಿ ಸೂರ್ಯ ಚಂದ್ರ ಇಲ್ಲದಿದ್ದರೆ ಕತ್ತಲು ಆವರಿಸುತ್ತದೆ. ಇವರ ಅನುಪಸ್ಥಿತಿಯಲ್ಲಿ ನಕ್ಷತ್ರಗಳು ಬೆಳಕು ನೀಡುತ್ತವೆ. ನಕ್ಷತ್ರಗಳ ಅನುಪಸ್ಥಿತಿಯಲ್ಲಿ ದೀಪವು ಬೆಳಕು ನೀಡುತ್ತದೆ. ಛಾಯಾಗ್ರಹಕ ಸೀಮಿತ ಜಾಗದಲ್ಲಿ ಛಾಯಾಚಿತ್ರದ ಮೂಲಕ ಒಂದು ಲಕ್ಷ ಜನತೆಯನ್ನು ಸೆರೆ ಹಿಡಿಯವ ಕೆಲಸ ಮಾಡುತ್ತಾರೆ. ಒಂದು ಚಿತ್ರ ಸಾವಿರ ಪದಗಳಿಗೆ ಸಮನಾಗಿರುತ್ತದೆ ಎಂದರು.

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ. ಛಾಯಾಗ್ರಾಹಕರು ಒತ್ತಡದ ಕೆಲಸದ ನಡುವೆ ತಮ್ಮ ಆರೋಗ್ಯ ಮತ್ತು ಕುಟುಂಬದ ಕಡೆ ಗಮನ ಹರಿಸದೆ ಇರುವಂತ ಉದಾಹರಣೆಗಳು ಇವೆ. ಮೊದಲು ನೀವು ನಿಮ್ಮ ಆರೋಗ್ಯ ಮತ್ತು ಕುಟುಂಬದ ಕಡೆ ಹೆಚ್ಚಿನ ಗಮನ ಹರಿಸಬೇಕು ರಾಜ್ಯದಲ್ಲಿ 1 ಲಕ್ಷಕ್ಕೂ ಅಧಿಕ ಛಾಯಾಗ್ರಾಹಕರಿದ್ದು ಇವರಿಗೆ ಸರ್ಕಾರದ ಸೌಲಭ್ಯ ಒದಗಿಸುವ ಒದಗಿಸುವ ಉದ್ದೇಶದಿಂದ ಮುಂಬರುವ ಅಧಿವೇಶನದಲ್ಲಿ ಛಾಯಾಚಿತ್ರ ಅಕಾಡೆಮಿ ಸ್ಥಾಪಿಸಲು ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ್, ತಾಲೂಕು ಛಾಯಾ ಗ್ರಾಹಕರ ಸಂಘದ ಗೌರವಾಧ್ಯಕ್ಷ ಡಿ.ಟಿ.ಆದಮ್, ಕಾಂಗ್ರೆಸ್ ಮುಖಂಡ ಕೆ.ಪಿ.ಪಾಲಯ್ಯ ಮಾತನಾಡಿದರು.

ಛಾಯಾಗ್ರಾಹಕ ಸಂಘದ ಅಧ್ಯಕ್ಷ ಹನುಮಂತಪ್ಪ, ಸಮಾಜ ಸೇವಕ ಬರಕತ್ ಆಲಿ, ಶಿವಲಿಂಗಪ್ಪ, ಸಮಾಜ ಕಲ್ಯಾಣ ನಿವೃತ್ತ ಅಧಿಕಾರಿ ಬಿ.ಮಹೇಶ್, ಪತ್ರಕರ್ತ ಸಂಘದ ಅಧ್ಯಕ್ಷ ಜಿ.ಎಸ್.ಚಿದಾನಂದ , ಛಾಯ ಗ್ರಾಹಕ ಸಂಘದ ಉಪಾಧ್ಯಕ್ಷ ಪ್ರಸನ್ನ, ಕಾರ್ಯದರ್ಶಿ ವೆಂಕಟೇಶ್, ಕಾರ್ಯದರ್ಶಿ ರಾಮು ಸಹ ಕಾರ್ಯದರ್ಶಿ ಶ್ರೀಪಾದ, ಖಜಾಂಚಿ ಬಾಬು ಸುಲ್ತಾನ್, ಸದಸ್ಯರಾಧ ರುದ್ರಮುನಿ, ತಿಪ್ಪೇಸ್ವಾಮಿ, ಪವನ್ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮತ್ತೊಂದು ಖಾಸಗಿ ಸ್ಲೀಪರ್‌ ಬಸ್‌ ಬೆಂಕಿಗೆ ಆಹುತಿ!
ಸರ್ಕಾರಿ ಅಧಿಕಾರಿ, ನೌಕರರಿಗೆ ಖಾದಿ ದಿರಿಸು ಕಡ್ಡಾಯ ?