ಅನ್ನದಾನದಿಂದ ದೇವ ಸಾನಿಧ್ಯ ವೃದ್ಧಿ: ಶ್ರೀ ವಿಖ್ಯಾತಾನಂದ ಶ್ರೀ

KannadaprabhaNewsNetwork |  
Published : Mar 05, 2026, 02:45 AM IST
ನರಾವಿ | Kannada Prabha

ಸಾರಾಂಶ

ಜೀವಿತದ ಪ್ರತಿ ಹಂತದಲ್ಲೂ ಒಳಿತನ್ನೇ ಬಯಸುವ ಗುಣ ನಮ್ಮದಾಗಬೇಕು ಎಂದು ಸೋಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ನುಡಿದರು.

ಬೆಳ್ತಂಗಡಿ: ಜೀವಿತದ ಪ್ರತಿ ಹಂತದಲ್ಲೂ ಒಳಿತನ್ನೇ ಬಯಸುವ ಗುಣ ನಮ್ಮದಾಗಬೇಕು ಎಂದು ಸೋಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ನುಡಿದರು.

ಮಾ.1 ರಿಂದ 9 ರವರೆಗೆ ನಡೆಯುತ್ತಿರುವ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ಬ್ರಹ್ಮಕಲಶೋತ್ಸವ ಎರಡನೇ ದಿನ ಸೋಮವಾರ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ನಾರಾವಿ ಸಂತ ಅಂತೋನಿ ಚರ್ಚ್‌ ಧರ್ಮಗುರು ಜೆರೋಮ್ ಡಿ ಸೋಜ, ಎಲ್ಲ ಮತ ಧರ್ಮಗಳ ಗ್ರಂಥಗಳ ಅಧ್ಯಯನ ಸಾಮರಸ್ಯ ಜೀವನಕ್ಕೆ ಕಾರಣವಾಗಬಲ್ಲದು ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗದೀಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಸಿವಿಲ್ ಇಂಜಿನಿಯರ್ ದಿವಾಕರ ಶೆಟ್ಟಿ ಕಾರ್ಕಳ, ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತುಕಾರಾಮ, ಸರ್ಕಾರದ ಅಪರ ವಕೀಲ ಮನೋಹರ ಕುಮಾರ್, ವಲಯ ಅರಣ್ಯಾಧಿಕಾರಿ ಭರತ್ ಯು.ಜಿ., ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಡೊಂಕಬೆಟ್ಟು ನೀಲಮ್ಮ ಸಾಲಿಯಾನ್, ವೇಣೂರು ಸೂರ್ಯಚಂದ್ರ ಜೊಡುಕರೆ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್. ಕೋಟ್ಯಾನ್, ಶೀನಪೂಜಾರಿ ಕಂದಟ್ಟು, ವೇಣೂರು ಮಹಾಲಿಂಗೇಶ್ವರ ದೇವಸ್ಥಾನ, ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನ, ಪುದುವೆಟ್ಟು ಶ್ರೀ ವನದುರ್ಗಾ ಪರಮೇಶ್ವರಿ ದೇವಸ್ಥಾನ, ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನ, ಕಕ್ಕಿಂಜೆ ಶ್ರೀ ಇಷ್ಟದೇವತಾ ದೇವಸ್ಥಾನಾದ ವ್ಯವಸ್ಥಾಪನಾ ಸಮಿತಿಗಳ ಅಧ್ಯಕ್ಷ ಜಯರಾಮ ಶೆಟ್ಟಿ, ಸತೀಶ್ ಚಿಗುರು, ಬೊಮ್ಮಣ್ಣ ಗೌಡ, ದಿವಾಕರ ಪೂಜಾರಿ, ಜಯಪ್ರಸಾದ್ ಗೌಡ, ಉದ್ಯಮಿ ಸುರೇಶ್ ಪೂಜಾರಿ, ಶೀನ ಪೂಜಾರಿ, ಸಿವಿಲ್ ಇಂಜಿನಿಯರ್ ರಾಕೇಶ್ ಅಮೀನ್, ಸಾವ್ಯ ಸಿ.ಎ.ಬ್ಯಾಂಕ್ ನಿರ್ದೇಶಕ ವಿಠಲ ಪೂಜಾರಿ, ಪೂವಪ್ಪ ಪೂಜಾರಿ ಹರೋಲ್ದಡ್ಕ, ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ರವೀಂದ್ರ ಪೂಜಾರಿ ಬಾಂದೊಟ್ಟು, ಪ್ರಧಾನ ಕಾರ್ಯದರ್ಶಿ ವಿನಯ ಹೆಗ್ಡೆ, ಕಾರ್ಯಾಧ್ಯಕ್ಷರಾದ ಮಹಾವೀರ ಜೈನ್, ಶ್ರೀನಿವಾಸ ಕಿಣಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಗದೀಶ್ ಹೆಗ್ಡೆ, ದಿವಾಕರ ಭಂಡಾರಿ, ಲಕ್ಷ್ಮಣ ಬಂಗೇರ, ಶಂಕರ್ ತುಂಬೆಗುಡ್ಡೆ, ಯಶೋಧ, ರಶ್ಮಿ ಇದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ ಸ್ವಾಗತಿಸಿ, ಪ್ರಸ್ತಾವಿಸಿದರು. ಚಂದ್ರಹಾಸ ಬಳಂಜ ನಿರ್ವಹಿಸಿದರು.

ದೇವರ ಚಿತ್ರ ಪ್ರದರ್ಶನ: ದೇವಾಲಯದಲ್ಲಿ ವೃಷಭ ಲಗ್ನದಲ್ಲಿ ಅಷ್ಟಬಂಧ ಪ್ರತಿಷ್ಠೆ, ಸಂಜೆ ದೊಡ್ಡ ಶ್ರೀರಂಗಪೂಜೆ ನೆರವೇರಿತು. ರಾತ್ರಿ ಮೈಸೂರು ಶ್ರೀ ರಾಮಚಂದ್ರ ರಾವ್ ಅವರು ದೇವರ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ದಾಸರ ಹಾಡುಗಳ ಪ್ರಸ್ತುತಿ ಜನ ಮೆಚ್ಚುಗೆ ಗಳಿಸಿತು. ವಿವಿಧ ತಂಡಗಳಿಂದ ಭಜನಾ ಸತ್ಸಂಗ ನಡೆಯಿತು. ಸೂರ್ಯವಂದನೆಯ ಕುಣಿತ ಭಜನೆ: ಬೆಳ್ತಂಗಡಿ, ಮೂಡುಬಿದರೆ ಹಾಗೂ ಕಾರ್ಕಳ ತಾಲೂಕು ವ್ಯಾಪ್ತಿ ಹೊಂದಿರುವ ನಾರಾವಿ ಶ್ರೀ ಸೂರ್ಯನಾರಾಯಣ ದೇವರಿಗೆ ಅಷ್ಟಬಂಧ ಹಾಗೂ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಕ್ಕೆ ಮಾ.1ರಂದು ಚಾಲನೆ ದೊರೆತಿದೆ. ನಾನು ಇಲ್ಲಿದ್ದೇನೆ ( ನಾ-ರವಿ) ಎಂದು ಸಾರಿ ಹೇಳುತ್ತಿರುವ ಶ್ರೀ ಸೂರ್ಯನಾರಾಯಣನಿಗೆ ಮಾ.1ರಂದು ಸೂರ್ಯವಂದನೆಯ ಕುಣಿತ ಭಜನೆಯೊಂದಿಗೆ ಭವ್ಯವಾದ ಸ್ವಾಗತ ಕೋರಲಾಯಿತು. ಸಾವಿರಕ್ಕೂ ಮಿಕ್ಕಿ ಮಕ್ಕಳು, ಯುವಕರು, ಯುವತಿಯರು ಸುಮಾರು ಒಂದೂವರೆ ಗಂಟೆಗಳ ಕಾಲ ನೃತ್ಯಭಜನೆ ಮಾಡಿ ಕೃತಾರ್ಥರಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುತ್ತೂರು ನಗರದಲ್ಲಿ ವಿಮಾನ ಹಾರಾಟ ಆತಂಕ!
ಕುಂದಾಪುರ- ಎಂಸಿಎನ್‌ ವಿದ್ಯಾರ್ಥಿಗಳ ಲ್ಯಾಂಪ್ ಲೈಟಿಂಗ್