ದೇಶದಲ್ಲಿ ಮುದ್ರಣಾಲಯ ಬಹಳಷ್ಟು ಮುಂದುವರೆದಿದೆ

KannadaprabhaNewsNetwork |  
Published : Mar 05, 2026, 02:45 AM IST
(ಪೋಟೊ 4ಬಿಕೆಟಿ3, ಜೋಹನ್ಸ ಗುಟರ್ನ ಬರ್ಗ ಅವರ 626ನೇಯರ ಜನ್ಮದಿನದ ಅಂಗವಾಗಿ ಮುದ್ರಕರ ದಿನಾಚರಣೆ ಕಾರ್ಯಕ್ರಮ) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಮುದ್ರಣ ಕ್ಷೇತ್ರದಲ್ಲಿ ಎಷ್ಟೇ ಏಳು-ಬೀಳುಗಳು ಬಂದರೂ ಅಂಜದೇ ಗಟ್ಟಿ ತನದಿಂದ ದಿಟ್ಟ ಹೆಜ್ಜೆಯಿನ್ನಿಟ್ಟು ಭಾರತ ದೇಶದಲ್ಲಿ ಮುದ್ರಣಾಲಯ ಬಹಳಷ್ಟು ಮುಂದುವರೆದಿದೆ. ಅಷ್ಟೇ ವೇಗವಾಗಿ ಬೆಳವಣಿಗೆಯಾಗಿದೆ ಎಂದು ಮಲ್ಲಿಕಾರ್ಜುನ ಸಕ್ರೋಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮುದ್ರಣ ಕ್ಷೇತ್ರದಲ್ಲಿ ಎಷ್ಟೇ ಏಳು-ಬೀಳುಗಳು ಬಂದರೂ ಅಂಜದೇ ಗಟ್ಟಿ ತನದಿಂದ ದಿಟ್ಟ ಹೆಜ್ಜೆಯಿನ್ನಿಟ್ಟು ಭಾರತ ದೇಶದಲ್ಲಿ ಮುದ್ರಣಾಲಯ ಬಹಳಷ್ಟು ಮುಂದುವರೆದಿದೆ. ಅಷ್ಟೇ ವೇಗವಾಗಿ ಬೆಳವಣಿಗೆಯಾಗಿದೆ ಎಂದು ಮಲ್ಲಿಕಾರ್ಜುನ ಸಕ್ರೋಜಿ ಹೇಳಿದರು.ನಗರದ ವಾಸವಿ ಪ್ರಿಂಟರ್ಸ್‌ನಲ್ಲಿ ಕಾರ್ಯಾಲಯದಲ್ಲಿ ಜೋಹನ್ಸ್‌ ಗುಟರ್ನ್‌ ಬರ್ಗ್‌ ಅವರ 626ನೇ ಜನ್ಮದಿನದ ಅಂಗವಾಗಿ ಮುದ್ರಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೋಹನ್ಸ್‌ ಗುಟರ್ನ್‌ ಬರ್ಗ್‌ ಅವರು ಮುದ್ರಣ ಅಚ್ಚು ಹಾಗೂ ಮುದ್ರಣ ಯಂತ್ರವನ್ನು ಕಂಡುವಹಿಡಿಯದಿದ್ದಲ್ಲಿ ನಾವುಗಳು ಮುದ್ರಕರಾಗುತ್ತಿರಲಿಲ್ಲ. ಒಂದು ಕಾಲದಲ್ಲಿ ಅಚ್ಚು ಮುದ್ರಣಾಲಯವು ಅಂದವಾಗಿತ್ತು. ಆಪ್ಸೆಟ್ ಪ್ರಿಂಟ್ ಬಂದಿತು. ತದನಂತರ ಮಲ್ಟಿ ಕಲರ ಪ್ರಿಂಟ್‌ ಡಿಜಿಟಲ್ ಪ್ರಿಂಟ್ ಮುಂದುವರಿದಿದೆ. ಅಂದಿನಕ್ಕಿಂತ ಇಂದು ಅಂದ ಚಂದದ ಮುದ್ರಣವಾಗುತ್ತಿದೆ. ಇಂತಹ ಪವಿತ್ರ ಮುದ್ರಣ ಕ್ಷೇತ್ರವನ್ನು ನಾವೆಲ್ಲರು ಸೇರಿ ಉಳಿಸೋಣ ಬೆಳೆಸೋಣ ಎಂದು ತಿಳಿಸಿದರು.ಎನ್.ಬಿ.ಗಲಗಲಿ, ಬಿ.ಎ.ಗೌಡರ ಮತ್ತು ವಿ.ಡಿ.ಗಂಗಾವತಿ ಮಾತನಾಡಿ, ಮುದ್ರಣ ಕ್ಷೇತ್ರವು ಸುವರ್ಣ ಕ್ಷೇತ್ರವಾಗಿದೆ. ಮುದ್ರಣಕ್ಕೆ ವಾಕ್ ಸ್ವಾತಂತ್ರ್ಯವಿದೆ. ಈ ಕ್ಷೇತ್ರ ಗಟ್ಟಿತನದಿಂದ ಕೂಡಿದೆ ಮುದ್ರಣವು ಸಾಕಷ್ಟು ಸಾಧನೆಯನ್ನು ಮಾಡಿದೆ. ಮುದ್ರಣದಲ್ಲಿ ಹಲವಾರು ಮುದ್ರಣಗಳು ಬರುತ್ತವೆ. ಮೊದಲು ಅಚ್ಚು ಮುದ್ರಣ ಅಪ್ಸೆಟ್ ಮುದ್ರಣ ಸ್ಕ್ರೀನ್ ಪ್ರಿಂಟ್ ಡಿಜಿಟಲ್ ಪ್ರಿಂಟಗಳಿವೆ. ಇವುಗಳಲ್ಲಿ ಅಚ್ಚು ಮುದ್ರಣ ಹಾಗೂ ಸ್ಕ್ರೀನ ಪ್ರಿಂಟ್ ಮರೆಮಾಚಿವೆ ಆಪ್ಸೆಟ್ಪ್ರಿಂಟ ಮತ್ತು ಡಿಜಿಟಲ್ ಪ್ರಿಂಟ ಉಳಿದಿದೆ ಇವುಗಳನ್ನು ಮುಂದುವರಿಸಿಕೊಂಡು ಹೋಗೋಣ ಎಂದು ತಿಳಿಸಿದರು.ಶಿವಾನಂದ ಕುಂಬಾರ ಮಾತನಾಡಿ, ಮೊಟ್ಟ ಮೊದಲು ಮುದ್ರಣ ಅಚ್ಚು ಹಾಗೂ ಮುದ್ರಣ ಯಂತ್ರವನ್ನು ಕಂಡು ಹಿಡಿದ ಮೇಲೆ ಮೂರುನೂರು ಬೈಬಲ್ ಪುಸ್ತಕ ಪ್ರತಿಗಳನ್ನು ಮುದ್ರಿಸಿದ ಶ್ರೇಷ್ಠತೆ ಜೋಹನ್ಸ ಗುಟೆನ್ ಬರ್ಗ ಅವರಿಗೆ ಸಲ್ಲುತ್ತದೆ ಎಂದರು.ಸಂಘದ ಅಧ್ಯಕ್ಷ ಮಂತ್ರಪ್ಪ ರಾಜನಾಳ ಮಾತನಾಡಿ, ಈಗಿನ ಡಿಜಿಟಲ್ ಮುದ್ರಣ ಬಂದ ನಂತರ ಅವುಗಳ ಅಂದ ಚಂದದ ಮುದ್ರಣಕ್ಕೆ ಮಾರು ಹೋಗಿ ಹಳೆತನದ ಮುದ್ರಣ ಮರೆತು ಬಿಟ್ಟಿದ್ದೇವೆ. ಈಗ ಅವುಗಳು ಇತಿಹಾಸದ ಪುಟಗಳು ಸೇರಿವೆ. ಆದರೆ ಅವುಗಳನ್ನು ನೆನಪಿಸಿಕೊಂಡರೆ ಅದುವೆ ಚೆನ್ನಾಗಿತ್ತು. ಅನಿಸುತ್ತದೆ ಎಂದು ತಿಳಿಸಿದರು.ಪ್ರಧಾನ ಕಾರ್ಯದರ್ಶಿ ನಾಗರಾಜ ಹೊನ್ನುಟಗಿ ಸ್ವಾಗತಿ, ನಿರೂಪಿಸಿದರು. ಸಂಗಮೇಶ ಲಾಯದಗುಂದಿ ವಂದನಾರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಹಾಗೂ ಎಲ್ಲ ಮುದ್ರಣ ಬಾಂಧವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುತ್ತೂರು ನಗರದಲ್ಲಿ ವಿಮಾನ ಹಾರಾಟ ಆತಂಕ!
ಕುಂದಾಪುರ- ಎಂಸಿಎನ್‌ ವಿದ್ಯಾರ್ಥಿಗಳ ಲ್ಯಾಂಪ್ ಲೈಟಿಂಗ್