ಕನ್ನಡಪ್ರಭ ವಾರ್ತೆ ಬಾಗೂರು
ಹೋಬಳಿ ಕೇಂದ್ರದಲ್ಲಿ ಹಲವು ವರ್ಷಗಳಿಂದ ನಿವೇಶನ ಹಾಗೂ ಮನೆ ಇಲ್ಲದೆ ವಾಸಿಸುತ್ತಿರುವ ಹಂದಿ ಜೋಗಿ ಸುಡುಗಾಡು ಸಿದ್ಧರು ಶಿಳ್ಳೆಖ್ಯಾತ ಸೋಲಿಗರು ಸೇರಿದಂತೆ ಇತರ ಜಾತಿಗಳ ಸುಮಾರು 15 ಕುಟುಂಬಗಳು ಸಮಸ್ಯೆ ಎದುರಿಸುತ್ತಿವೆ. ಗ್ರಾಮದ 445 ಸರ್ವೇ ನಂಬರ್‌ನಲ್ಲಿ ಇವರಿಗೆ 15 ದಿನಗಳೊಳಗೆ ಅತಿ ತುರ್ತಾಗಿ ನಿವೇಶನ ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಚನ್ನರಾಯಪಟ್ಟಣ ಹಾಗೂ ಅರಸೀಕೆರೆ ತಾಲೂಕುಗಳಲ್ಲಿ ಹೆಚ್ಚಾಗಿ ತೆಂಗು ಬೆಳೆಯುವುದರಿಂದ ಪಿವಿಜಿ ರಾಮ್ ಜಿ ಯೋಜನೆಯ ಮೂಲಕ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ತೋಟಗಾರಿಕಾ ಇಲಾಖೆ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಸಮಸ್ಯೆ ಆಗದ ರೀತಿಯಲ್ಲಿ ನೊಂದಣಿ ಪ್ರಕ್ರಿಯೆಗೆ ಅವಕಾಶ ಕಲ್ಪಿಸಿ ಯೋಜನೆಯ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲು ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಮಾಹಿತಿ ನೀಡುವಂತೆ ಹೇಳಿದರು ಸರ್ಕಾರದ ಪ್ರಜಾ ಸೇವೆ ಆಂದೋಲನದ ಸಭೆಗೆ ಹಾಜರಾಗದ ಹೋಬಳಿಯ ಎಂ ಶಿವರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಹೋಬಳಿಯ ತೋಟಗಾರಿಕಾ ಇಲಾಖೆ ಅಧಿಕಾರಿಗೆ ಅಶಿಸ್ತಿನ ಹಿನ್ನೆಲೆಯಲ್ಲಿ ತುರ್ತು ನೋಟಿಸ್ ನೀಡಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು. ಸಭೆಯಲ್ಲಿ ರಸ್ತೆ, ಕುಡಿಯುವ ನೀರು, ವೃದ್ಧಾಪ್ಯ ವೇತನದ ಸಮಸ್ಯೆ, ಕಂದಾಯ ಇಲಾಖೆಯಾಗುತ್ತಿರುವ ತೊಂದರೆಗಳ ಕುರಿತು ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಅರ್ಜಿ ಸಲ್ಲಿಸಿದ್ದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರೀಶ್ ಮಾತನಾಡಿ, ಸರ್ಕಾರದ ಹೊಸ ಸುತ್ತೋಲೆಯಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಈ ಸ್ವತ್ತು ಮಾಡಲಾಗುತ್ತಿದೆ ಕೇಂದ್ರ ಸರ್ಕಾರದ ಆಶ್ರಯ ಮನೆ ಯೋಜನೆ ಸಮಗ್ರ ಅನುಷ್ಠಾನಕ್ಕೆ ಶಾಸಕರು ಆದೇಶಿಸಿದ್ದು ಎಲ್ಲಾ ಅಭಿವೃದ್ಧಿ ಅಧಿಕಾರಿಗಳು ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಫಲಾನುಭವಿಗಳನ್ನು ಭೇಟಿ ಮಾಡುವ ಮೂಲಕ ಸಂಬಂಧಪಟ್ಟ ದಾಖಲೆ ಹಾಗೂ ಮಾಹಿತಿ ನೀಡುವಂತೆ ಸಭೆಯಲ್ಲಿ ಹೇಳಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಬಿ ಎಚ್ ಶಿವಣ್ಣ ಮಾತನಾಡಿ ಕಾಟಾಚಾರಕ್ಕೆ ಸಭೆ ಮಾಡಿದರೆ ಪ್ರಯೋಜನಕ್ಕೆ ಬರುವುದಿಲ್ಲ, ಕಳೆದ ಅನೇಕ ವರ್ಷಗಳಿಂದ ಮನೆ ಇಲ್ಲದೆ ಪರಿಶಿಷ್ಟ ಪಂಗಡದ ಸುಮಾರು 15 ಕುಟುಂಬಗಳು ತೀವ್ರ ಸಮಸ್ಯೆಯನ್ನು ಎದುರಿಸುತ್ತಿವೆ, ಹಲವು ಬಾರಿ ಈ ಬಗ್ಗೆ ತಿಳಿಸಿದರು ಸಮಸ್ಯೆ ಬಗೆಹರಿದಿಲ್ಲ ಕೇವಲ ಸಭೆ ಚರ್ಚೆಗೆ ಮಾತ್ರ ಸೀಮಿತವಾಗದೆ ಅವರ ಸಮಸ್ಯೆ ಬಗೆರಿದರೆ ಮಾತ್ರ ಜನರಿಗೆ ನಂಬಿಕೆ ಬರಲು ಸಾಧ್ಯ ಎಂದರು.ಸಭೆಯಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಲೋಕೇಶ್, ಸೂಪರ್ವೈಸರ್ ಶಿವಶಂಕರ್, ಉಪತಹಸೀಲ್ದಾರ್ ವಿಜಯಕುಮಾರ್, ಕಂದಾಯ ಅಧಿಕಾರಿ ರಾಜು ಪ್ರೇಮ್ ಕುಮಾರ್, ಟಿಎಚ್ಒ ಹರೀಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಶಂಕರ ಕುಂಟೆ, ಮುಖಂಡರಾದ ಮನು, ಶ್ರೀನಿವಾಸ್, ಹುಲಿಕೆರೆ ಸಂಪತ್ ಕುಮಾರ್, ಮಂಜೇಗೌಡ, ಮಧು, ಅಣ್ಣೇಗೌಡ, ಗ್ರಾಮ ಲೆಕ್ಕಾಧಿಕಾರಿಗಳಾದ ಲಕ್ಷ್ಮೀಕಾಂತ್, ಓಮೇಶ್, ಸೇರಿದಂತೆ ಸಾರ್ವಜನಿಕರು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.