ಕನ್ನಡಪ್ರಭ ವಾರ್ತೆ ಶಿಕಾರಿಪುರ
ಜಮಾಅತೆ ಇಸ್ಲಾಮಿ ಹಿಂದ್, ಶಿಕಾರಿಪುರ ಘಟಕ, ಕುಲ್ಮಿಕೇರಿಯ ಶಾದಿ ಮಹಲ್ ನಲ್ಲಿ ಆಯೋಜಿಸಿದ ಕ್ರಾಂತಿಯ ಜ್ಯೋತಿ ಪ್ರವಾದಿ ಮಹಮ್ಮದ್ (ಸ) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಡುಕು ಮುಕ್ತ ಸಮಾಜ ನಿರ್ಮಿಸಿ, ಮನುಷ್ಯರಲ್ಲಿ ಸಹ ಬಾಳ್ವೆ , ಸಹಿಷ್ಣುತೆ ತರುವುದು, ದೂರವಿದ್ದವರನ್ನು ಹತ್ತಿರ ಮಾಡುವುದು. ಮನಸು, ಕುಟುಂಬ, ಸಮಾಜ, ರಾಷ್ಟ್ರವನ್ನು ಬೆಸೆದು, ಕರುಣೆ ಮತ್ತು ಕ್ಷಮೆಯನ್ನು ಸಮಾಜದಲ್ಲಿ ಮೂಡಿಸುವ ದೊಡ್ಡ ಕ್ರಾಂತಿಯನ್ನು ಮಾಡಿದವರು ಪ್ರವಾದಿ ಮುಹಮ್ಮದ್ (ಸ) ಎಂದರು.
ಇನ್ನೊರ್ವ ಅತಿಥಿ ಕೆ.ಎಚ್. ಪುಟ್ಟಪ್ಪ ಬಿಳವಾಣಿ ಉಪನ್ಯಾಸಕ ಹಾಗೂ ಲೇಖಕ ಮಾತನಾಡಿ, ಪ್ರತಿಯೊಂದು ಧರ್ಮವು ಮಾನವನ ಘನತೆಯನ್ನು, ಸಮಾನತೆಯನ್ನು, ಹಕ್ಕನ್ನು ಎತ್ತಿ ಹಿಡಿದು, ಸುಂದರ, ಸ್ವಸ್ಥ ಸಮಾಜ ನಿರ್ಮಾಣದ ಉದ್ದೇಶ ಹೊಂದಿವೆ. ಮಾನವನ ಒಳಗಿನ ದ್ವೇಷ, ಅಸೂಯೆ ಬದಿಗಿಟ್ಟು ಪ್ರತಿಯೊಬ್ಬರ ಜೀವನ ವಿಧಾನಗಳನ್ನು ಗೌರವಿಸಬೇಕೆಂದರು.ಬಾಪೂಜಿ ಸಂಸ್ಥೆಯ ಅಧ್ಯಕ್ಷ ಬಿ. ಪಾಪಯ್ಯ ಮಾತನಾಡಿ, ಸರ್ವಧರ್ಮ ಸಮನ್ವಯತೆ ಇಂದು ಹೆಚ್ಚು ಪ್ರಸ್ತುತವಾಗಿದೆ ಎಂದರು.
ಅಧ್ಯಕ್ಷತೆಯನ್ನು ಶಿವಮೊಗ್ಗ ವಲಯ ಸಂಚಾಲಕ ಮೌಲಾನ ಸಲೀಂ ವಹಿಸಿದ್ದರು.
ತನ್ವೀರ್ ಅಹ್ಮದ್ ಕುರಾನ್ ಪಠಿಸಿ, ಶಿಕ್ಷಕ ಮಹಮ್ಮದ್ ಆಸಿಫ್ ನಿರೂಪಿಸಿದರು.
ಫೋಟೋ: 05ಎಸ್‌ಕೆಪಿ02