- ವಲಯಮಟ್ಟದ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಕೆ.ತೀರ್ಥಪ್ಪ ಅಭಿಮತ - - - ಕನ್ನಡಪ್ರಭ ವಾರ್ತೆ, ಮಲೇಬೆನ್ನೂರು
ಪಟ್ಟಣದ ಭಾನು ಹೈಟೆಕ್ ಪ್ರೌಢಶಾಲಾ ಆವರಣದಲ್ಲಿ ಮಲೇಬೆನ್ನೂರು ವಲಯಮಟ್ಟದ ಪ್ರೌಢಶಾಲಾ ಹಂತದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾಲ್ಕು ಗೋಡೆಗಳ ಮಧ್ಯೆ ಕಾಣದ ಪ್ರತಿಭೆಯನ್ನು ಹೊರ ಜಗತ್ತಿಗೆ ಅನಾವರಣ ಮಾಡುವುದೇ ಕಲೋತ್ಸವ ಕಾರ್ಯಕ್ರಮ ಉದ್ದೇಶವಾಗಿದೆ ಎಂದರು.
ಕಸಾಪ ಸಂಘಟನಾ ಕಾರ್ಯದರ್ಶಿ ಸದಾನಂದ ಮಾತನಾಡಿ, ಕಳೆದ ಒಂದೂವರೆ ವರ್ಷದಲ್ಲಿ ಶಿಕ್ಷಣ ಇಲಾಖೆಯ ಕ್ರೀಡೆಗಳು ಮತ್ತು ಕಾಲು ಚೆಂಡು ಆಟ ಸ್ಪರ್ಧೆ ಗಮನಿಸಿದ್ದೇನೆ. ಕೆಲ ದೈಹಿಕ ಶಿಕ್ಷಣ ಶಿಕ್ಷಕರೇ ತೀರ್ಪು ನೀಡುವಾಗ ತಾರತಮ್ಯ ಮಾಡುವುದನ್ನೂ ಕಂಡಿದ್ದೇನೆ. ನಮ್ಮ ಶಾಲೆ ಮಕ್ಕಳು ಎಂದು ಅಭಿಮಾನದ ಅಂಧರಾಗಿ ಅಂಕ ನೀಡುವವರಿದ್ದಾರೆ. ಅವರ ಶಾಲೆ ಮಕ್ಕಳಿರುವಾಗ ಅದೇ ಶಾಲೆ ಶಿಕ್ಷಕರಿಗೆ ಕ್ರೀಡೆ ಆವರಣದಲ್ಲಿ ಪ್ರವೇಶ ನಿರ್ಬಂಧಿಸಬೇಕು. ತೀರ್ಪುಗಾರರು ಆತ್ಮದ್ರೋಹ ಮಾಡಿಕೊಳ್ಳದೇ ತೀರ್ಪು ನೀಡಬೇಕು ಎಂದು ಸಲಹೆ ನೀಡಿದರು.ಸಮೂಹ ಸಂಪನ್ಮೂಲ ವ್ಯಕ್ತಿ ಕರಿಬಸಪ್ಪ ಬಸಲಿ ಪ್ರತಿಭಾ ಕಾರಂಜಿಯ ನಿಯಮಗಳು ಮತ್ತು ತೀರ್ಪುಗಾರರಿಗೆ ಸೂಚನೆಗಳನ್ನು ತಿಳಿಸಿ, ತೀರ್ಪುಗಾರರಿಗೆ ನಿಯಮಾವಳಿಯ ಫೈಲ್ ಹಸ್ತಾಂತರಿಸಿದರು.
ಮಲೇಬೆನ್ನೂರಿನ ವಿವಿಧ ಎಂಟು ಪ್ರೌಢಶಾಲೆಗಳ ಎರಡು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ರಸಪ್ರಶ್ನೆ, ಮಿಮಿಕ್ರಿ, ಪ್ರಬಂಧ, ಭಾಷಣ, ಚರ್ಚಾ ಸ್ಪರ್ಧೆ, ಕವನ, ಚಿತ್ರಕಲೆ, ಭಾವಗೀತೆ, ಭರತ ನಾಟ್ಯ, ಜಾನಪದ ನೃತ್ಯ, ಖವ್ವಾಲಿ, ಆಶು ಭಾಷಣ, ಧಾರ್ಮಿಕ ಪಠಣ, ಚಲನ ಚಿತ್ರಗೀತೆ ಮತ್ತಿತರೆ ಸ್ಪರ್ಧೆಗಳಲ್ಲಿ ಭಾಗವಹಿಸಿದರು.ಎನ್‌ವಿ ವಿದ್ಯಾಸಂಸ್ಥೆ ಮುಖ್ಯಸ್ಥ ಮಾಲತೇಶ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿಗಳಾದ ಚೈತ್ರಾ, ಜ್ಯೋತಿ, ಎಸ್‌ಡಿಎಂಸಿ ತಾಲೂಕು ಅಧ್ಯಕ್ಷ ಬಿ.ಬಸವರಾಜ್, ವಿವಿಧ ಸಂಘಟನೆಗಳ ಶಿಕ್ಷಕರಾದ ರೇವಣ ಸಿದ್ದಪ್ಪ ಅಂಗಡಿ, ಬಿ.ಅಚ್ಯುತಾನಂದ, ವೈ.ಪಿ.ಸಾಕಮ್ಮ, ಶಿವಕುಮಾರ್, ಎಚ್.ಶಶಿಕುಮಾರ್, ಕೆ.ಭೀಮಪ್ಪ, ಕೆ.ಟಿ. ಮಂಜಪ್ಪ, ಸಾಗರ್, ಶೃತಿ, ಮುಖ್ಯಶಿಕ್ಷಕ ಫಕ್ಕೀರಪ್ಪ, ನೂರಾರು ಮಕ್ಕಳು ಇದ್ದರು.
- - - -೩೦ಎಂಬಿಆರ್೧:ಕಲೋತ್ಸವದಲ್ಲಿ ಮಕ್ಕಳು ಕಂಸಾಳೆ ನೃತ್ಯವನ್ನು ಪ್ರದರ್ಶನ ನೀಡಿದರು.