ಮಕ್ಕಳ ಪ್ರತಿಭೆ ಪ್ರೋತ್ಸಾಹಿಸುವದೇ ‘ಕಾರಂಜಿ’ ಉದ್ದೇಶ

KannadaprabhaNewsNetwork |  
Published : Sep 01, 2024, 01:50 AM IST
ಸಿಕೆಬಿ-3 ತಾಲೂಕಿನ ಎಸ್.ಗೊಲ್ಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವಿಧ ವೇಷ ಭೂಷಣಗಳನ್ನ ಧರಿಸಿದ ಮಕ್ಕಳೊಂದಿಗೆ ಗಣ್ಯರು | Kannada Prabha

ಸಾರಾಂಶ

ಪ್ರತಿಭಾ ಕಾರಂಜಿ ವೇದಿಕೆಯಲ್ಲಿ ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸುತ್ತಾರೆ. ಇಲ್ಲಿ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಬೇಕಾಗುವ ಎಲ್ಲ ರೀತಿಯ ಚಟುವಟಿಕೆಯಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಂಡು ಸಂತಸ ಪಡುತ್ತೇವೆ. ಗ್ರಾಮೀಣ ಭಾಗದ ಮಕ್ಕಳಲ್ಲೂ ಪ್ರತಿಭೆ ಉತ್ತಮ ಆಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಕ್ಕಳ ಮನಸ್ಸನ್ನು ಅರಳಿಸಲು ಪ್ರತಿಭಾ ಕಾರಂಜಿ ದಿನಕರ ಇದ್ದಂತೆ, ಮೊಗ್ಗು ಸುಂದರ ಹೂವಾಗಿ ಅರಳಿ ಸುವಾಸನೆ ಬೀರಲು ಸೂರ್ಯ ಹೇಗೆಯೋ ಹಾಗೆ ಮಕ್ಕಳ ಮನಸ್ಸು ಮುದಗೊಳ್ಳಲು ಮತ್ತು ಅವರ ಪ್ರತಿಭೆಗೆ ಸೂಕ್ತವಾದ ವೇದಿಕೆ ಕಾರ್ಯಕ್ರಮ ಪ್ರತಿಭಾ ಕಾರಂಜಿ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಹರೀಶ್ ಅಭಿಪ್ರಾಯಪಟ್ಟರು.

ತಾಲೂಕಿನ ಎಸ್.ಗೊಲ್ಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಎಸ್ ಗೊಲ್ಲಹಳ್ಳಿ ಮಾದರಿ ನ್ಯಾಷನಲ್ ಸಂಯುಕ್ತ ಪ್ರೌಢಶಾಲೆಯ ರಂಗ ಮಂದಿರದಲ್ಲಿ ಉದ್ಘಾಟಿಸಿ ಮಾತನಾಡಿದರು.

ಗ್ರಾಮಗಳಲ್ಲಿ ಉತ್ತಮ ಪ್ರತಿಭೆ

ಇಂತಹ ವೇದಿಕೆಯಲ್ಲಿ ಮಕ್ಕಳು ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸುತ್ತಾರೆ. ಇಲ್ಲಿ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಬೇಕಾಗುವ ಎಲ್ಲ ರೀತಿಯ ಚಟುವಟಿಕೆಯಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಂಡು ಸಂತಸ ಪಡುತ್ತೇವೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆ ಉತ್ತಮ ಆಗಿದೆ. ಸರ್ಕಾರದ ಇಂತಹ ಕಾರ್ಯಕ್ರಮಗಳು ಮಕ್ಕಳ ಮಾನಸಿಕ ಒತ್ತಡ ಕಡಿಮೆ ಮಾಡಿ ಕಲಿಕೆಗೆ ಉತ್ತಮ ಪ್ರೇರಕ ಎಂದರು.ಎಸ್.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಂತಮ್ಮ ತಿಪ್ಪಾರೆಡ್ಡಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಬಲವರ್ಧನೆ ಜೊತೆಗೆ ಪಠ್ಯೇತರ ಚಟುವಟಿಕೆ ಕಾರ್ಯಕ್ರಮಗಳಾದ ಕಂಠಪಾಠ, ಕಥೆ, ಕವನ, ಚಿತ್ರಕಲೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಾಧಕರಾಗಿ ಮಾಡುವ ಮಕ್ಕಳ ಪ್ರತಿಭೆ ಕಾರ್ಯಕ್ರಮ ಆಗಿದೆ ಎಂದರು.

ಕಾರಂಜಿಯಲ್ಲಿ 160 ಮಕ್ಕಳು ಭಾಗಿ

ಎಸ್ ಗೊಲ್ಲಹಳ್ಳಿ ಸಮೂಹ ಸಂಪನ್ಮೂಲ ವ್ಯಕ್ತಿ ಮಂಜುನಾಥ ಮಾತನಾಡಿ, ನಮ್ಮ ಕ್ಲಸ್ಟರ್ ನಲ್ಲಿರುವ 14 ಶಾಲೆಗಳಿಂದ ಛದ್ಮವೇಷ, ಅಭಿನಯ ಗೀತೆ, ಧಾರ್ಮಿಕ ಪಠಣ , ಮಣ್ಣಿನ ಮಾದರಿ, ಪ್ರಬಂಧ ರಚನೆ, ಕವನ ಪದ್ಯ ವಾಚನ ಸೇರಿದಂತೆ ಒಟ್ಟು 27 ಸ್ಪರ್ಧೆಗಳಲ್ಲಿ 160 ಕ್ಕೂ ಹೆಚ್ಚು ಮಕ್ಕಳು ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ನಿಜಕ್ಕೂ ಸಂತಸದ ವಿಚಾರ.ಪ್ರಥಮ ಸ್ಥಾನ ಪಡೆದ ಮಕ್ಕಳು ಮಾತ್ರ ತಾಲ್ಲೂಕು ಹಂತಕ್ಕೆ ಆಯ್ಕೆ ಆಗುತ್ತಾರೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ವರ್ಗಾವಣೆ ಆದ ಕಠಾರಿ ಕದಿರೇನಹಳ್ಳಿ ಶಾಲೆಯ ಶಿಕ್ಷಕರಾದ ಮಂಜುನಾಥ ಮತ್ತು ಇಟ್ಟಪ್ಪನಹಳ್ಳಿ ಶಾಲೆಯ ಆಂಥೋನಿ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಶಾಲಾ ಮಕ್ಕಳಿಂದ ಮೆರವಣಿಗೆ

ಕಾರ್ಯಕ್ರಮಕ್ಕೂ ಮೊದಲು ಶಾಲಾ ಮಕ್ಕಳು ವಾದ್ಯ ಘೋಷಗಳಿಂದ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮುಖೇನ ಕಾರ್ಯಕ್ರಮದ ಬಗ್ಗೆ ಊರಿನ ಗ್ರಾಮಸ್ಥರಿಗೆ ಅರಿವು ಮೂಡಿಸಲಾಯಿತು.ಬಳಸಿದ ಹಾಲಿನ ಪಾಕೆಟ್ ಗಳಲ್ಲಿ ಗಿಡ ನೆಟ್ಟು ಸಸಿಗಳನ್ನು ಅತಿಥಿ ಹಾಗೂ ಗ್ರಾಮಸ್ಥರಿಗೆ ವಿತರಣೆ ಮಾಡಲಾಯಿತು. ಅಂತಿಮವಾಗಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜ ಸೇವಕ ಉತ್ತಮ್ ಚಂದ್ ಜೈನ್, ತಿಪ್ಪಾರೆಡ್ಡಿ, ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಸುನಿಲ್, ಮಾದರಿ ನ್ಯಾಷನಲ್ ಸಂಯುಕ್ತ ಪ್ರೌಢಶಾಲೆಯ ಸಂಸ್ಥಾಪಕ ನರಸಿಂಹ ಮೂರ್ತಿ, ಬಡ್ತಿ ಮುಖ್ಯಶಿಕ್ಷಕರಾದ ರಾಮಚಂದ್ರಪ್ಪ ಮತ್ತು ನಳಿನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರಾದ ನಾಗರಾಜ್, ನಜೀರ್, ಮರಿಯಪ್ಪ, ಅಪ್ಸರ, ವಹೀದಾ ಬಾನು, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ನಾರಾಯಣ ಸ್ವಾಮಿ, ಸೌಮ್ಯ, ಉಮಾದೇವಿ, ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ