- ಜಗಳೂರು ತಾಲೂಕುಮಟ್ಟ ಕಾರ್ಯಕ್ರಮ ಉದ್ಘಾಟನೆ
- - -ಕನ್ನಡಪ್ರಭ ವಾರ್ತೆ ಜಗಳೂರು
ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಪಿಯು ಕಾಲೇಜಿನ ಆವರಣದಲ್ಲಿ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ೨೦೨೪ನೇ ಸಾಲಿನ ತಾಲೂಕುಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸ್ಥಳೀಯ ಜನಪದ ನೃತ್ಯ ಮತ್ತು ಗಾಯನ, ಚಿತ್ರಕಲೆ, ಪ್ರಬಂಧ, ಚರ್ಚಾಸ್ಪರ್ಧೆ, ಏಕಾಪಾತ್ರಾಭಿನಯ, ಸಾಮಾಜಿಕ- ಪೌರಾಣಿಕ ನಾಟಕಗಳು, ಅನೇಕ ಕಲಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಮಗುವಿನ ವ್ಯಕ್ತಿತ್ವ ವಿಕಸ ಮತ್ತು ಅನ್ವೇಶಣೆಗೆ ಪ್ರತಿಭಾ ಕಾರಂಜಿ ಸಾಬೀತು ಮಾಡುವ ವೇದಿಕೆಯಾಗಿದೆ. ಕ್ಲಸ್ಟರ್ ಮತ್ತು ಜಿಲ್ಲಾ ಮತ್ತು ರಾಜ್ಯ ಮಟ್ಟದವರೆಗೆ ಸ್ಪರ್ಧೆ ಇರುವುದರಿಂದ ಶಾಲಾ ಶಿಕ್ಷಕರು ಉತ್ತಮ ತರಬೇತಿ ನೀಡಿ ಸಜ್ಜುಗೊಳಿಸಬೇಕು. ಎಂದು ತಿಳಿಸಿದರು.
ಡಯಟ್ ಉಪನಿರ್ದೇಶಕಿ ಗೀತಾ ಮಾತನಾಡಿದರು. ಬಿಇಒ ಈ.ಹಾಲಮೂರ್ತಿ, ಶಿಕ್ಷಣ ಸಮನ್ವಯ ಅಧಿಕಾರಿ ಡಿ.ಡಿ. ಹಾಲಪ್ಪ, ಸಾಹಿತಿ ಎನ್.ಟಿ. ಎರ್ರಿಸ್ವಾಮಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಮಾತನಾಡಿದರು.ಪಪಂ ಅಧ್ಯಕ್ಷ ಕೆ.ಎಸ್.ನವೀನ ಕುಮಾರ್, ಪಪಂ ಸದಸ್ಯ ಶಕೀಲ್ ಅಹಮದ್, ಗೌರಿಪುರ ಶಿವಣ್ಣ, ಮಂಜಣ್ಣ, ತಾಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ವೀರೇಶ್, ಎಲ್.ಈರಪ್ಪ, ಇ.ಸತೀಶ್, ಕೆ.ಎಸ್.ಮಂಜಣ್ಣ, ರಮೇಶ್, ಬಾಲರಾಜು, ಬಸವರಾಜು, ಕರಿಬಸಪ್ಪ, ದಾದಾಪೀರ್, ಹನುಮಂತಪ್ಪ, ಮಹಮದ್ ಗೌಸ್, ಪಲ್ಲಾಗಟ್ಟೆ ಶೇಖರಪ್ಪ, ಬರ್ಖತ್ ಅಲಿ ಇತರರು ಇದ್ದರು.
- - - -2ಜೆಎಲ್ಆರ್ ಚಿತ್ರ1:ಜಗಳೂರು ಪಟ್ಟಣದ ಸರಕಾರಿ ಪಿಯು ಕಾಲೇಜಿನ ಆವರಣದಲ್ಲಿ ತಾಲೂಕುಪಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಸಕ ಬಿ.ದೇವೇಂದ್ರಪ್ಪ ಉದ್ಘಾಟಿಸಿದರು.