ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಪಠ್ಯೇತರ ಚಟುವಟಿಕೆ ಅಗತ್ಯ
ಶಿಕ್ಷಕರು ಕೇವಲ ಪಠ್ಯಬೋಧನೆಗೆ ಮಾತ್ರ ಸೀಮಿತವಾಗದೆ, ಮಕ್ಕಳಲ್ಲಿ ಅಂತರ್ಗತವಾಗಿರುವ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಬೇಕು. ಇದನ್ನು ಮನಗಂಡೇ ಸರ್ಕಾರ ಪ್ರತಿಭಾಕಾರಂಜಿ ಎಂಬ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು, ವಿಶೇಷವಾಗಿ ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ ಆಸರೆಯಾಗಿದೆ. ಸಾಂಸ್ಕೃತಿಕ ಸಾಹಿತ್ಯಕ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾಗುವುದರಿಂದ ಅವರ ಸರ್ವಾಂಗಿಣ ಬೆಳವಣಿಗೆ ನೆರವಾಗಲಿದೆ ಎಂದರು.ಶಿಕ್ಷಕ ಹಾಗೂ ಸಾಹಿತಿ ಪಾತಮುತ್ತುಕದಹಳ್ಳಿ ಚಲಪತಿಗೌಡ ಮಾತನಾಡಿ, ಪ್ರತಿಭಾ ಕಾರಂಜಿ ಮನರಂಜನೆ ನೀಡಿ ಕಲಿಯಲು ಆಸಕ್ತಿ ಮೂಡಿಸಲಿದೆ. ಜನಪದ ಕಲೆ, ಚಿತ್ರಕಲೆ, ಕ್ಲೇ ಮಾಡೆಲಿಂಗ್, ಜತೆಗೆ ನಮ್ಮ ನಾಡಿನ ಭವ್ಯ ಸಂಸ್ಕೃತಿಯ ಬಗ್ಗೆ ತಿಳವಳಿಕೆ ಮೂಡಿಸಿ ಮುಂದಿನ ಪೀಳಿಗೆಗೆ ಸಾಗಿಸಲು ಸಹಕಾರಿಯಾಗಲಿದೆ ಎಂದರು.ಸ್ಪರ್ಧಾತ್ಮಕ ಮನೋಭಾವ: ಸ್ವಾಮಿ ವಿವೇಕಾನಂದರು ಹೇಳಿದಂತೆ ಅವಕಾಶಗಳು ದೊರೆತಾಗ ಬಳಸಿಕೊಂಡರೆ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಸ್ಪರ್ಧಾತ್ಮಕ ಮನೋಭಾವ ವಿರಲಿ, ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ ಎಂದ ಅವರು ಕ್ಲಸ್ಟರ್ ಮಟ್ಟದಲ್ಲಿ ಆಯ್ಕೆಯಾದವರು ಹೋಬಳಿ ಹಂತಕ್ಕೆ, ಹೋಬಳಿ ಹಂತದಲ್ಲಿ ವಿಜಯಶಾಲಿಯಾದವರು ತಾಲೂಕು, ತಾಲೂಕು ಹಂತದಿAದ ಜಿಲ್ಲೆ, ವಿಭಾಗದ ಹಂತ ಅಂತಿಮವಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಾರೆ ಎಂದು ತಿಳಿಸಿದರು.ಇಂಡಿಯನ್ ಪಬ್ಲಿಕ್ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ಚಿತ್ರಕಲೆ, ಆಶುಭಾಷಣ, ಚರ್ಚಾ ಸ್ಪರ್ಧೆ,ಪ್ರಬಂಧ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮಿಮಿಕ್ರಿ, ಧಾರ್ಮಿಕ ಪಠಣ, ರಸಪ್ರಶ್ನೆ, ಗುಂಪು ನೃತ್ಯ, ಗಜಲ್,ಭರತನಾಟ್ಯ, ಕನ್ನಡ, ಇಂಗ್ಲೀಷ್, ಹಿಂದಿ ಭಾಷಣ, ಖವ್ವಾಲಿ, ಜನಪದಗೀತೆ ಗಾಯನ ಇತ್ಯಾದಿ ಸ್ಪರ್ಧೆಗಳಲ್ಲಿ ೧೪ ಶಾಲೆಗಳ ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಾತಮುತ್ತುಕಪಲ್ಲಿ ಚಲಪತಿಗೌಡ, ಚಿತ್ರಕಲಾ ಶಿಕ್ಷಕರಾದ ಸಂತೋಷ್‌ಕುಮಾರ್, ನಂದೀಶ್ವರಪ್ಪ,ಇಂಡಿಯನ್ ಪಬ್ಲಿಕ್ ಶಾಲೆಯ ಗಿರೀಶ್, ನಂದಿ ಸಿಆರ್‌ಪಿ ನಾರಾಯಣಸ್ವಾಮಿ, ನಂದಿ ಹೋಬಳಿ ಎಲ್ಲಾ ಸಿಆರ್‌ಪಿಗಳು, ತೀರ್ಪುಗಾರರು ಇದ್ದರು.