ಶಿವನ ಅವತರಣೆಯ ಸತ್ಯ ಸಂದೇಶ ಸಾರುವುದೇ ಶಿವರಾತ್ರಿಯ ಉದ್ದೇಶ

KannadaprabhaNewsNetwork |  
Published : Feb 28, 2025, 12:50 AM IST
ಕಂಪ್ಲಿಯ ಈಶ್ವರಿ ವಿಶ್ವವಿದ್ಯಾಲಯದ ಆವರಣದಲ್ಲಿ ಶಿವ ಧ್ವಜಾರೋಹಣ ಜರುಗಿತು. | Kannada Prabha

ಸಾರಾಂಶ

ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಮಹಾ ಶಿವರಾತ್ರಿಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಶಿವ ರಥ ಯಾತ್ರೆ ಕಾರ್ಯಕ್ರಮವು ಬುಧವಾರ ಸಂಭ್ರಮದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಕಂಪ್ಲಿ

ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಮಹಾ ಶಿವರಾತ್ರಿಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಶಿವ ರಥ ಯಾತ್ರೆ ಕಾರ್ಯಕ್ರಮವು ಬುಧವಾರ ಸಂಭ್ರಮದಿಂದ ಜರುಗಿತು.

ಇಲ್ಲಿನ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಸಕಲೇಶ್ವರಿ ಅಕ್ಕನವರು ಮಾತನಾಡಿ, ಮನುಷ್ಯನಲ್ಲಿರುವಂತಹ ಅಜ್ಞಾನದ ಕತ್ತಲನ್ನು ದೂರ ಮಾಡುವುದಕ್ಕೆ ಜ್ಞಾನದ ಪ್ರಕಾಶವನ್ನು ಬೀರುವುದಕ್ಕೆ ಪರಂ ಜ್ಯೋತಿ ಸ್ವರೂಪನಾದ ಶಿವ ಪರಮಾತ್ಮ ಈ ಧರೆಗೆ ಬಂದಿರುವುದೇ ಶಿವರಾತ್ರಿಯಾಗಿದೆ. ಶಿವನನ್ನು ಅರಿತು ನಿರಂತರ ದ್ಯಾನಿಸುವುದು ಅಥವಾ ಅವನ ಬಳಿ ವಾಸ ಮಾಡುವುದೇ ಸತ್ಯ ಉಪವಾಸ. ದುಸ್ಸಂಗ, ದುಶ್ಚಟ, ದುರ್ಗುಣ, ದುರಾಭ್ಯಾಸದಿಂದ ನಮ್ಮನ್ನು ರಕ್ಷಿಸುವಂತೆ ಸದಾ ಎಚ್ಚರಿಕೆಯಲ್ಲಿರುವುದೇ ಜಾಗರಣೆಯಾಗಿದೆ. ಶಿವನ ಅವತರಣೆಯ ಸತ್ಯ ಸಂದೇಶ ಸಾರುವುದು ಈ ಶಿವರಾತ್ರಿಯ ಉದ್ದೇಶ. ಸರ್ವ ಧರ್ಮದವರಿಗೂ ಪರಮಾತ್ಮ ಒಬ್ಬನೇ ಅವನೇ ಶಿವ, ಅಲ್ಲ, ಬುದ್ಧ, ಮಹಾವೀರ, ಗಾಡ್ ಅರಿಹಂತ್. ಸರ್ವರೂ ಪರಮಾತ್ಮನನ್ನು ಪಿತ ಎನ್ನುತ್ತಾರೆ. ಎಲ್ಲರ ದೇವರು ತಂದೆ ಎಂದ ಮೇಲೆ ನಾವೆಲ್ಲರೂ ಸಹೋದರ-ಸಹೋದರಿಯರು. ವಿಶ್ವ ಭ್ರಾತೃತ್ವವನ್ನು ಜಾಗೃತಿಗೊಳಿಸುವುದು ಸಹ ಶಿವರಾತ್ರಿಯಾಗಿದೆ. ಪ್ರತಿಯೊಬ್ಬರೂ ಶಿವನತ್ತ ಏಕಚಿತ್ತಾರಾಗಿ ದ್ಯಾನಿಸುವ ಮೂಲಕ ಸರ್ವರೂ ಒಂದು ಎನ್ನುವ ಒಗ್ಗಟ್ಟಿನ ಮಂತ್ರ ಸಾರಬೇಕು ಎಂದು ತಿಳಿಸಿದರು.

ಇದೇ ವೇಳೆ ಈಶ್ವರಿ ವಿಶ್ವವಿದ್ಯಾಲಯದ ಆವರಣದಲ್ಲಿ ಶಿವ ಧ್ವಜಾರೋಹಣ ಜರುಗಿತು. ವಿದ್ಯಾಲಯದ ಆವರಣದಿಂದ ಆರಂಭಗೊಂಡ ರಥ ಯಾತ್ರೆಯು ಡಾ. ಪುನೀತ್ ರಾಜಕುಮಾರ ರಸ್ತೆ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ರಾಜಕುಮಾರ ರಸ್ತೆ ಸೇರಿ ವಿವಿಧ ಮುಖ್ಯ ರಸ್ತೆಗಳ ಮಾರ್ಗವಾಗಿ ಸಂಚರಿಸಿ ವಿದ್ಯಾಲಯದ ಬಳಿ ಸಮಾವೇಶಗೊಂಡಿತು.

ಈ ಸಂದರ್ಭ ಪ್ರಮುಖರಾದ ಜೆ.ಪಿ. ಶಾಸ್ತ್ರಿ, ವೆಂಕಟಸ್ವಾಮಿ ರೆಡ್ಡಿ, ಅಚ್ಚಪ್ಪ ಶರಣ ಬಸಪ್ಪ, ರವಿಗೌಡ್ರು, ಸರಸ್ವತಿ ಶಾಸ್ತ್ರಿ, ಪಾರ್ವತಿ ರೆಡ್ಡಿ ಸೇರಿದಂತೆ ಸರ್ವಧರ್ಮಗಳ ಸದ್ಭಕ್ತರು ಪಾಲ್ಗೊಂಡಿದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ