ಹಿಂದೂಗಳನ್ನು ಒಗ್ಗಟ್ಟಿಸುವುದು ಸಮಾವೇಶದ ಉದ್ದೇಶ

KannadaprabhaNewsNetwork |  
Published : Jan 27, 2026, 04:15 AM IST
ಸಾನ್ನಿಧ್ಯವಹಿಸಿದ್ದ ದತ್ತಾತ್ರಯಬೋಧ ಸ್ವಾಮೀಜಿ ಪ್ರತಿಜ್ಞಾವಿಧಿ ಬೋಧಿಸಿದರು | Kannada Prabha

ಸಾರಾಂಶ

ಪ್ರತಿ ಭಾರತೀಯರಲ್ಲಿ ಹಿಂದೂತ್ವ ಜಾಗೃತಿಗೊಳಿಸಿ ಎಲ್ಲ ಹಿಂದೂಗಳನ್ನು ಒಗ್ಗಟ್ಟಿಸುವುದು ಹಿಂದೂ ಸಮಾವೇಶದ ಮುಖ್ಯ ಉದ್ದೇಶವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಂಜಯ ನಾಯಕ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಪ್ರತಿ ಭಾರತೀಯರಲ್ಲಿ ಹಿಂದೂತ್ವ ಜಾಗೃತಿಗೊಳಿಸಿ ಎಲ್ಲ ಹಿಂದೂಗಳನ್ನು ಒಗ್ಗಟ್ಟಿಸುವುದು ಹಿಂದೂ ಸಮಾವೇಶದ ಮುಖ್ಯ ಉದ್ದೇಶವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಂಜಯ ನಾಯಕ ಹೇಳಿದರು.

ಇಲ್ಲಿಯ ಬಸವ ರಂಗಮಂಟಪದ ಬಳಿಯಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯಿಂದ ಆಯೋಜಿಸಿದ ಬೃಹತ್ ಹಿಂದೂ ಸಮ್ಮೇಳನದಲ್ಲಿ ದಿಕ್ಕೂಚಿ ಭಾಷಣ ಮಾಡಿದ ಅವರು, ಯಾರನ್ನೋ ತೆಗಳುವುದಾಗಲಿ, ರಾಜಕೀಯ ಪಕ್ಷಕ್ಕಾಗಲಿ, ಜಾತಿ, ಮತ, ಪಂಥಕ್ಕೆ ಸಂಘಟನೆಯು ಸೀಮಿತವಾಗಿರುವುದಿಲ್ಲ. ಪ್ರತಿಯೊಬ್ಬರಲ್ಲಿಯೂ ದೇಶಭಕ್ತಿಯನ್ನು ಜಾಗೃತಿಗೊಳಿಸಿ ಹಿಂದೂ ಪರಂಪರೆಯ ವೈಭವವನ್ನು ಸಂರಕ್ಷಿಸುವುದಾಗಿದೆ. ಹಿಂದೂಗಳ ಒಟ್ಟೂಗೂಡಿಸುವುದು ಆರ್‌ಎಸ್‌ಎಸ್‌ದ ಉದ್ದೇಶವಾಗಿದೆ ಹೊರತು ತನ್ನ ಯಾವುದೇ ಪ್ರಚಾರಕ್ಕಾಗಿ ಅಲ್ಲ. ಸಾಮರಸ್ಯ, ಕುಟುಂಬ ಪ್ರಭೋಧನ, ಪರಿಸರ ಸಂರಕ್ಷಣೆ, ನಾಗರಿಕ ಕರ್ತವ್ಯ ಹಾಗೂ ಸ್ವದೇಶಿ ಭಾವ ಪಂಚ ಪರಿವರ್ತನೆಗಳ ಮೂಲಕ ಭಾರತವನ್ನು ವಿಶ್ವ ಗುರುವನ್ನಾಗಿಸುವ ನಿಟ್ಟಿನಲ್ಲಿ ದೇಶವನ್ನು ಸಜ್ಜುಗೊಳಿಸುವುದಾಗಿದೆ. ಪ್ರತಿ ಭಾರತೀಯನು ಪಂಚ ಪರಿವರ್ತನೆಗಳ ಅನುಸರಿಸಲು ಜಾಗೃತರಾಗಬೇಕು ಎಂದರು.ದಿಕ್ಕೂಚಿ ಭಾಷಣಕಾರ ಯುವಾ ಬ್ರಿಗೇಡ್ ಮಾತನಾಡಿ, ಭಾರತಕ್ಕೆ ಪ್ರಾಚೀನ ಇತಿಹಾವಿದೆ. ಪರಕೀಯರ ಮೋಸದ ದಾಳಿಗೆ ಸಿಲುಕಿಕೊಂಡು, ಕಷ್ಟಗಳನ್ನು ಎದುರಿಸಿದ್ದರೂ ಸಹ ಹಿಂದೂತ್ವಕ್ಕೆ ಎಲ್ಲಿಯೂ ಚ್ಯುತಿ ಬಾರದಂತೆ ಉಳಿಸಿಕೊಂಡು ಬಂದಿದೆ. ಭಾರತವು ಯಾರ ವಕ್ರದೃಷ್ಟಿಗೆ ಬೀಳದಂತೆ ಹಿಂದೂ ಸಂಸ್ಕೃತಿ, ಪರಪಂರೆಯ ನಲೆಯಲ್ಲಿ ಗಟ್ಟಿಗೊಳಿಸುವುದಕ್ಕೆ ಜಾಗೃತಿಯಾಗಬೇಕಾಗಿದೆ ಎಂದರು.ಶ್ರೀಧರಬೋಧ ಸ್ವಾಮೀಜಿ ಪ್ರಾಸ್ತಾವಿಕ ಮಾತನಾಡಿ, ಅಭಿವೃದ್ಧಿಯ ಧಾವಂತದಲ್ಲಿ ಹಿಂದೂ ದೇಶದ ಇತಿಹಾಸ, ಪರಂಪರೆ ಮರೆಯುತ್ತಿರುವೆವು. ಹಾಗಾಗದಂತೆ ಜನರಲ್ಲಿ ಜಾಗೃತಿಗೊಳಿಸುವುದು ಇಂದಿನ ಅನಿವಾರ್ಯತೆ ಇದೆ ಎಂದರು.ದತ್ತಾತ್ರಯಬೋಧ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಪ್ರತಿಜ್ಞಾವಿಧಿ ಬೋಧಿಸಿದರು. ಏಷಿಯಿನ್ ಪ್ಯಾರಾ ಟೇಂಕ್ವಾಡೋದಲ್ಲಿ ಕಂಚಿನ ಪದಕ ಪಡೆದ ಲಕ್ಷ್ಮೀ ರಡರಟ್ಟಿ ಹಾಗೂ ಶಿಕ್ಷಣ ಇಲಾಖೆಯ ರಾಷ್ಟ್ರಮಟ್ಟದ ಹಾಕಿ ಟೂರ್ನಿಗೆ ಆಯ್ಕೆಯಾಗಿರುವ ಲಕ್ಷ್ಮೀ ಸಂಜು ಢವಳೇಶ್ವರ ಅವರನ್ನು ಸನ್ಮಾನಿಸಿದರು. ಸುಣಧೋಳಿಯ ಶಿವಾನಂದ ಸ್ವಾಮೀಜಿ, ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ, ಶಿವಾಪೂರ (ಹ)ದ ಅಡವಿಸಿದ್ದರಾಮ ಸ್ವಾಮೀಜಿ, ಜೋಕಾನಟ್ಟಿಯ ಬಿಳಿಯಾನಸಿದ್ದ ಸ್ವಾಮೀಜಿ, ಮುನ್ಯಾಳದ ಲಕ್ಷ್ಮಣ ದೇವರು ಇದ್ದರು. ಈರಣ್ಣ ಕೊಣ್ಣೂರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಧರ್ಮಟ್ಟಿ ನಿರೂಪಿಸಿದರು. ಶೋಭಾಯಾತ್ರೆ, ಸಮಾರಂಭದ ಪೂರ್ವದಲ್ಲಿ ಶಿವಬೋಧರಂಗ ಮಠದಿಂದ ಶೋಭಾಯಾತ್ರೆ ಪ್ರಾರಂಭಗೊಂಡಿತು. ವಿವಿಧ ಸಂಪ್ರದಾಯ ವಾದ್ಯಗಳ ವಾದನ, ದಾರಿಯುದ್ದಕ್ಕೂ ರಂಗೋಲಿಗಳ ಚಿತ್ತಾರ, ಎಲ್ಲೆ ಕಡೆಯಲ್ಲಿ ಭಗವಾಧ್ವಜ ಹಾರಾಟವು ಗಮನಸೆಳೆಯಿತ್ತು. ಶೋಭಾಯಾತ್ರೆಯು ಬಸವ ರಂಗಮಂಟಪ ಬಳಿಯಲ್ಲಿ ಸಮಾವೇಶಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

₹400 ಕೋಟಿ ದರೋಡೆ ಕೇಸ್‌ನ ಸಂಭಾಷಣೆ ಆಡಿಯೋ ವೈರಲ್‌!
ಇಂದಿನಿಂದ ಮತ್ತೆ ಕಲಾಪ : ಭಾರೀ ಕೋಲಾಹಲ ನಿರೀಕ್ಷೆ