ಮಹಿಳಾ ಸಬಲೀಕರಣವೇ ಪ್ರತಿಷ್ಠಾನದ ಉದ್ದೇಶ

KannadaprabhaNewsNetwork |  
Published : Feb 01, 2025, 12:01 AM IST

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಅತಿ ಹೆಚ್ಚು ಶೋಷಣೆಗೆ ಒಳಗಾಗುತ್ತಿದ್ದಾರೆ ಆದರಿಂದ ಮಹಿಳೆಯರು ಸ್ವಾಭಿಮಾನದಿಂದ ಜೀವಿಸುವಂತಾಗಲು ಹಾಗೂ ಸಬಲರನ್ನಾಗಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರಲು ಚುಂಚುಶ್ರೀ ಮಹಿಳಾ ಪ್ರತಿಷ್ಠಾನ ಸ್ಥಾಪಿಸಲಾಗಿದೆ. ಪ್ರತಿಷ್ಠಾನ ಒಂದು ವರ್ಗಕ್ಕೆ ಸೀಮಿತವಾಗಬಾರದು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಆದಿಚುಂಚನಗಿರಿ ಮಠದಿಂದ ಉತ್ತಮ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಶೋಷಿತ ವರ್ಗದವರಿಗೆ ನೆರವಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಮಾಜಿ ಸಂದಸ ಎಸ್.ಮುನಿಸ್ವಾಮಿ ಶ್ಲಾಘಿಸಿದರು.

ಪಟ್ಟಣದ ಕೆಂಪೇಗೌಡ ಸಮುದಾಯಭವನದಲ್ಲಿ ತಾಲೂಕು ಒಕ್ಕಲಿಗರ ಸಂಘ ಹಾಗೂ ಚುಂಚಶ್ರೀ ಮಹಿಳಾ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಸಂಕ್ರಾಂತಿ ಉತ್ಸವದಲ್ಲಿ ಮಾತನಾಡಿ, ಸಮಾಜದಲ್ಲಿ ಮಹಿಳೆಯರು ಶ್ರಮಿಜೀವಿಗಳಾಗಿದ್ದು ಅವರಿಂದಲೇ ಪುರುಷರು ಶಕ್ತಿಶಾಲಿಗಳಾಗಿ ಜೀವಿಸುವಂತಾಗಿದೆ ಎಂದರು.ಚುಂಚಶ್ರೀ ಮಹಿಳಾ ಪ್ರತಿಷ್ಠಾನ

ಜೀವನ ಎಂಬ ಪಯಣದಲಿ ಮಹಿಳೆಯ ಪಾತ್ರ ಅನನ್ಯವಾಗಿದ್ದು ಸಂಸಾರವೆಂಬ ಸಾಗರವನ್ನು ಎಳೆಯುತ್ತಾರೆ ದೇಶದಲ್ಲಿ ಮಹಿಳೆಯರಿಗೆ ಮಾತೃಸ್ಥಾನವನ್ನು ನೀಡಲಾಗಿದೆ ಇದರೊಟ್ಟಿಗೆ ಮಹಿಳೆಯರನ್ನೂ ತಾಯಿ, ತಂಗಿ, ಹೆಂಡತಿ, ರೂಪದಲ್ಲಿ ಕಾಣಲಾಗುತ್ತದೆ ಬಹುತೇಕ ನದಿಗಳಿಗೆ ಸ್ತ್ರೀಯರ ಹೆಸರುಗಳನ್ನು ಇಡಲಾಗಿದೆ ಇದರ ಪ್ರತಿರೂಪವಾಗಿ ಅದಿ ಚುಂಚನ ಮಠದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸಲು ಚುಂಚುಶ್ರೀ ಮಹಿಳಾ ಪ್ರತಿಷ್ಠಾನ ಸ್ಥಾಪಿಸಲಾಗಿದೆ ಎಂದರು.

ಒಂದು ವರ್ಗಕ್ಕೆ ಸೀಮಿತವಲ್ಲ

ಈ ಮಹಿಳಾ ಪ್ರತಿಷ್ಠಾನ ಒಂದು ವರ್ಗಕ್ಕೆ ಸೀಮಿತವಾಗಬಾರದು ಕಾರಣ ಮಠದಲ್ಲಿ ಎಲ್ಲಾ ವರ್ಗ ಧರ್ಮ ಜಾತಿ ಜನಾಂಗದ ವಿದ್ಯಾರ್ಥಿಗಳು ವ್ಯಾಸಾಂಗ ಮಾಡಲಾಗುತ್ತಿದೆ ಅದರಿಂದ ಸನಾತನದ ಧರ್ಮದ ರಕ್ಷಣೆ ಪರಿಕಲ್ಪನೆಯೊಂದಿಗೆ ಮಹಿಳಾ ಪ್ರತಿಷ್ಠಾನ ಕಾರ್ಯನಿರ್ವಹಿಸಲಿ. ರಾಜ್ಯಾದ್ಯಂತ ಚುಂಚಶ್ರೀ ಮಹಿಳಾ ಪ್ರತಿಷ್ಠಾನ ಸದಸ್ಯತ್ವ ಅಭಿಯಾನ ಆರಂಭಿಸಿರುವುದರಿಂದ ಮಹಿಳೆಯರು ಧರ್ಮ ರಕ್ಷಣೆಯ ಪ್ರತೀಕವಾಗಿ ದ್ದು ತಮ್ಮ ಮಕ್ಕಳಿಗೆ ಆಧ್ಯಾತ್ಮಿಕತೆ ಸಂಸ್ಕಾರ ಕಳುಹಿಸುವ ಜವಾಬ್ದಾರಿ ನಿರ್ವಹಿಸುತ್ತಾರೆ ಎಂದರು.

ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಅತಿ ಹೆಚ್ಚು ಶೋಷಣೆಗೆ ಒಳಗಾಗುತ್ತಿದ್ದಾರೆ ಆದರಿಂದ ಮಹಿಳೆಯರು ಸ್ವಾಭಿಮಾನದಿಂದ ಜೀವಿಸುವಂತಾಗಲು ಹಾಗೂ ಸಬಲರನ್ನಾಗಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರಲು ಚುಂಚುಶ್ರೀ ಮಹಿಳಾ ಪ್ರತಿಷ್ಠಾನ ಸ್ಥಾಪಿಸಲಾಗಿದೆ ಎಂದರು.

ಸಂಸ್ಕಾರ ಬೆಳೆಸಲು ಸಹಕಾರಿ

ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂಥ ಸ್ವಾಮಿಜಿ ಮಾತನಾಡಿ ತಾಯಿಯು ಮಕ್ಕಳ ಅಡಕವಾಗಿರುವ ಶಾರೀರಿಕ ಹಾಗೂ ಅಂತರಿಕ ಶುದ್ಧಿ ಕರಣಕ್ಕೆ ನಾಂದಿಯಾಗಿದ್ದಾರೆ. ತಾಯಿ ದೇವರಾಗಬಹುದು ಆದರೆ ದೇವರು ತಾಯಿ ಆಗಲು ಸಾಧ್ಯವಿಲ್ಲ. ಶಿಷ್ಟಾಚಾರ ಹಾಗೂ ಸಂಸ್ಕಾರದ ಉತ್ತಮ ಬೆಳವಣಿಗೆಗೆ ಮಹಿಳಾ ಪ್ರತಿಷ್ಠಾನ ಸಹಕಾರಿಯಾಗಿದೆ ಎಂದರು.ಮಹಿಳೆಯರು ಐಕ್ಯತೆಯೊಂದಿಗೆ ಸಂಘಟನಾತ್ಮಕವಾಗಿ ಬೆಳೆಯಬೇಕು ಎಂದರು. ಮಹಿಳಾ ಪ್ರತಿಷ್ಟಾನದ ರಾಜ್ಯ ಉಪಾಧ್ಯಕ್ಷ ಉಷಾ, ಅನುಸೂಯ, ಶಾಂತಮ್ಮ ಒಕ್ಕಲಿಗರ ಸಂಘದ ಅಧ್ಯಕ್ಷ ಶಿವಕುಮಾರ್,ಮಾರ್ಕಂಡೇಗೌಡ, ಸುನೀತಾ, ಸುಬ್ಬರಾಯಪ್ಪ, ಪ್ರಕಾಶ್, ಹನುಮಪ್ಪ, ವಕ್ಕಲೇರಿ ರಾಮು, ಡಾಃಉಮಾ,ಹನುಮಪ್ಪ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಳಸಾ-ಬಂಡೂರಿ: ಪಕ್ಷಭೇದ ಮರೆತು ಒಗ್ಗಟ್ಟು ಪ್ರದರ್ಶಿಸಲಿ: ಸಿ.ಸಿ. ಪಾಟೀಲ
ಉತ್ತಮ ಪ್ರತಿಭೆ ಗುರುತಿಸಲು ಕಲಾ ಪ್ರತಿಭೋತ್ಸವ ಕಾರ್ಯಕ್ರಮ ಸಹಕಾರಿ