ಕನ್ನಡಪ್ರಭ ವಾರ್ತೆ ವಿಜಯಪುರ
ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ವಿ.ಎಸ್ ಖಾಡೆ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಪ್ರತಿ ಭಾನುವಾರವೂ ಸಹ ಅತ್ಯಂತ ಅನುಭವಜನ್ಯ ಚಿಂತನಾತ್ಮಕ ದತ್ತಿಗೋಷ್ಠಿಗಳನ್ನು ನಡೆಸುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸುವ ಕಾರ್ಯ ಮಾಡುತ್ತಿರುವುದು ಸ್ತುತ್ಯಾರ್ಹ ಎಂದರು. ರಾಮಾಯಣ ಮಹಾಕಾವ್ಯದ ಸಂದೇಶಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ, ರಾಮಾಯಣವು 24000 ಶ್ಲೋಕಗಳೊಂದಿಗೆ 7ಕಾಂಡಗಳಲ್ಲಿ ರಚಿಸಲ್ಪಟ್ಟ ಸೂರ್ಯ ವಂಶದ ರಾಜಪುತ್ರ ರಾಮನ ಆದರ್ಶ ಗುಣಗಳನ್ನು ಪ್ರತಿಪಾದಿಸುತ್ತದೆ. ಪಿತೃವಾಕ್ಯ ಪರಿಪಾಲಕ ಹಾಗೂ ಏಕಪತ್ನಿ ವೃತಸ್ಥ ರಾಮನ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಮೌಲ್ಯಗಳನ್ನು ಇಂದು ನಾವೆಲ್ಲ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸ್ವಾಸ್ಥ್ಯ ಸಮಾಜದ ನಿರ್ಮಾಣ ಮಾಡೋಣ ಎಂದರು.
ರಾಮಾಯಣದ ಹಿನ್ನೆಲೆಯಲ್ಲಿ ರಾಮನವಮಿಯ ಮಹತ್ವ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಸಾಹಿತಿ ಭಾಗ್ಯಲಕ್ಷ್ಮಿ ಭಗವಂತಗೌಡರ, ರಾಮನ ಬದುಕು ನಮಗೆಲ್ಲ ಆದರ್ಶ, ಜಗತ್ತಿಗೆ ಮಾನವತೆ ಪಾಠ ಹೇಳಿಕೊಟ್ಟ ರಾಮನ ನಡತೆ, ಅರಿವು, ಪ್ರಜ್ಞೆಗಳ ಹಿನ್ನೆಲೆ ರಾಮನವಮಿ ಮಹತ್ವವನ್ನು ಇಡೀ ಭಾರತದಾದ್ಯಂತ ಆಚರಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು.ವೇದಿಕೆಯಲ್ಲಿ ಚಂದ್ರಶೇಖರ ದೇವರಡ್ಡಿ, ಶಶಿಧರ ಗಾಯಕವಾಡ, ಶ್ರೀಧರ ಗಾಯಕವಾಡ, ಭಾಗೀರಥಿ ಸಿಂಧೆ, ರಾಜೇಸಾಬ ಶಿವನಗುತ್ತಿ ಉಪಸ್ಥಿತರಿದ್ದು ಮಾತನಾಡಿದರು. ಮಮತಾ ಮುಳಸಾವಳಗಿ ಸ್ವಾಗತಿಸಿದರು. ಡಾ.ಆನಂದ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಪರವೀನ ಶೇಖ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಕೋಶಾಧ್ಯಕ್ಷ ಡಾ.ಸಂಗಮೇಶ ಮೇತ್ರಿ, ಸಿದ್ರಾಮಯ್ಯ ಲಕ್ಕುಂಡಿಮಠ, ಅರ್ಜುನ ಶಿರೂರ, ಶಾಂತಪ್ಪ ರಾಣಾಗೋಳ, ಜಿ.ಎಸ್.ಬಳ್ಳೂರ, ಬಿ.ಎಂ.ಆಜೂರ, ಶಿವಲಿಂಗ ಶೆಟ್ಟೆಣ್ಣವರ, ಮೆಹತಾಬ ಕಾಗವಾಡ, ಶಾಂತಾ ವಿಭೂತಿ, ಬಿ.ವಿ.ಪಟ್ಟಣಶೆಟ್ಟಿ, ಲತಾ ವಾಲೀಕಾರ, ಸಿಮ್ರನ್ ವಾಲೀಕಾರ, ಗಂಗಮ್ಮ ರಡ್ಡಿ, ತೇಜಸ್ವಿನಿ ವಾಂಗಿ, ರಾಹುಲ ಚವ್ಹಾಣ, ಡಾ.ಮೆಹಬೂಬ ಮಾಲಬಾವಡಿ, ಎ.ಎಚ್ ಕೌಜಲಗಿ, ದಿಲೀಪ ಪ್ರಭಾಕರ, ರಿಜ್ವಾನ್ ಅಹ್ಮದ ಮುಲ್ಲಾ, ಖಾದರಬಾಷಾ ವಾಲೀಕಾರ, ಆರ್.ಎಂ.ದೊಡಮನಿ, ಶೋಭಾ ಬಡಿಗೇರ, ಎಸ್.ಜಿ.ಜಂಗಮಶೆಟ್ಟಿ, ಸಹನಾ ಬಿರಾದಾರ, ಸನ್ನಿಧಿ ಬಿರಾದಾರ, ಲಕ್ಷ್ಮೀ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.