ಕನ್ನಡಪ್ರಭವಾರ್ತೆ ಮಧುಗಿರಿ
ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ.ತಾಲೂಕು ಆಡಳಿತ ಹಾಗೂ ಪುರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವಾತಂತ್ರ್ಯ, ಗಣರಾಜ್ಯ ಕೇವಲ ಒಬ್ಬ ವ್ಯಕ್ತಿ ಹೋರಾಟದ ಫಲವಲ್ಲ, ಅಸಂಖ್ಯಾತ ಜನರ ಹೋರಾಟ,ಪರಿಶ್ರಮದ ಕೊಡುಗೆಯಾಗಿದೆ. ಇಂದು ಅವರೆನ್ನಲ್ಲರನ್ನೂ ನೆನಪಿಸಿಕೊಂಡು ಗೌರವ ಸಲ್ಲಿಸಬೇಕಿದೆ. ನಮ್ಮ ದೇಶದ ಲಿಖಿತ ಸಂವಿಧಾನ ವಿಶ್ವದ್ಲಲೇ ಅತ್ಯಂತ ಶಕ್ತಿ ಶಾಲಿ, ಶ್ರೇಷ್ಠ ಸಂವಿಧಾನ ಎಂಬ ಹಿರಿಮೆಗೆ ಪಾತ್ರವಾಗಿದೆ.ಸೋದರತ್ವ, ಸಹಭಾಳ್ವೆ ,ಸಹಕಾರದಿಂದ ಎಲ್ಲರೂ ಬಾಳಿ ಬದುಕಲು ಎಲ್ಲ ಅವಕಾಶಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಕಲ್ಪಿಸಿ ಕೊಟ್ಟಿದೆ. ದೇಶದ ಭವ್ಯತೆ ಭದ್ರತೆಯನ್ನು ರೂಪಿಸಲು ಎಲ್ಲರೂ ಕೈ ಜೋಡಿಸಬೇಕು. ಸಂವಿಧಾನದ ಆಶಯ ಅರಿತು ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಧ್ವಜಾರೋಹಣ ನೆರವೇರಿಸಿ ತಮ್ಮ ಸಂದೇಶದಲ್ಲಿ ,ಶತಮಾನಗಳ ಕಾಲ ದಾಸ್ಯದಲ್ಲಿದ್ದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಹುತಾತ್ಮರಿಗೆ ಗೌರವ ಸಲ್ಲಿಸಿವುದು ನಮ್ಮ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಚ್. ಶ್ರೀನಿವಾಸ್,ಇಓ ಲಕ್ಷ್ಮಣ್ ವರಂಗಪ್ಪ, ಮಾಧವರೆಡ್ಡಿ, ಕೆ.ಎನ್.ಹನುಮಂತರಾಯಪ್ಪ, ಸುರೇಶ್ , ಸುರೇಶ್ ,ಡಿವೈಎಸ್‌ಪಿ ಮಂಜುನಾಥ್, ಸಹನಾ ಧನಂಜಯ್, ಬಡವನಗಹಳ್ಳಿ ಚೌಡಪ್ಪ, ದೊಡ್ಡೇರಿ ಕಣಿಮಯ್ಯ, ಲಾಲಪೇಟೆ ಮಂಜುನಾಥ್, ಗೋಪಾಲಯ್ಯ,ಕೆಪಿಸಿಸಿ ಮೆಂಬರ್ ಸಿದ್ದಾಪುರ ರಂಗಶ್ಯಾಮಣ್ಣ. ಎಂ.ಎನ್.ರಾಜೇಂದ್ರಬಾಬು, ತಾಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ,ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.ನಂತರ ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜನ ಮೆಚ್ಚುಗೆಗೆ ಪಾತ್ರವಾದವು.