ಬೂತ್ ಮಟ್ಟದ ಪದಾಧಿಕಾರಿಗಳ ಜವಾಬ್ದಾರಿ ದೊಡ್ಡದು: ಸಂತೋಷ್

KannadaprabhaNewsNetwork |  
Published : May 05, 2024, 02:11 AM IST
4ಕೆಪಿಎಲ್25 ಕೊಪ್ಪಳ  ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಬಿಜೆಪಿ ಶಕ್ತಿ ಪ್ರಮುಖರ ಸಭೆಯಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಅವರು ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಬೂತ್ ಮಟ್ಟದ ಪದಾಧಿಕಾರಿಗಳು ಮತದಾನ ದಿನ ಮತ್ತು ಮತದಾನದ ಹಿಂದಿನ ದಿನ ಶಕ್ತಿಮೀರಿ ಶ್ರಮಿಸಬೇಕಾಗಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಪ್ರಚಾರ ಕಾರ್ಯ ಬಹುತೇಕ ಮುಗಿದಿದೆ. ಈಗೇನಿದ್ದರೂ ಮತದಾನ ಮಾಡಿಸುವುದು. ಹೀಗಾಗಿ, ಬೂತ್ ಮಟ್ಟದ ಪದಾಧಿಕಾರಿಗಳು ಮತದಾನ ದಿನ ಮತ್ತು ಮತದಾನದ ಹಿಂದಿನ ದಿನ ಶಕ್ತಿಮೀರಿ ಶ್ರಮಿಸಬೇಕಾಗಿದೆ. ಅವರ ಜವಾಬ್ದಾರಿ ಬಹಳ ದೊಡ್ಡದಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್.‌ ಸಂತೋಷ್‌ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಕೊಪ್ಪಳ ಜಿಲ್ಲಾ ಶಕ್ತಿ ಕೇಂದ್ರ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರತಿ ಮತದಾರನನ್ನು ಭೇಟಿಯಾಗಿ, ಅವರ ಮನವೊಲಿಸಿ, ಅವರು ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಮಾಡುವ ಜವಾಬ್ದಾರಿ ನಿಮ್ಮದಾಗಿದೆ. ಹೀಗಾಗಿ, ಮತದಾನ ಹಿಂದಿನ ದಿನವೂ ಮನೆ ಮನೆಗೆ ಹೋಗಿ ಮನವಿ ಮಾಡಿ, ಮತ್ತು ಬಿಜೆಪಿಗೆ ಮತಚಲಾಯಿಸುವಂತೆಯೂ ಕೋರಬೇಕು. ಅಲ್ಲದೆ, ಮತದಾನದ ದಿನವೂ ಸಹ ಮತದಾರರಿಗೆ ಸಹಕಾರಿಯಾಗುವಂತೆ ಕಾರ್ಯ ನಿರ್ವಹಿಸಬೇಕು. ಅವರನ್ನು ಮತಗಟ್ಟೆಗೆ ಬಂದಾಗಲೂ ಅವರನ್ನು ಹೊರಗೆ ನಿಂತು ಸ್ವಾಗತಿಸಬೇಕು. ಮತಗಟ್ಟೆ ವ್ಯಾಪ್ತಿಯಲ್ಲಿ ಇದ್ದು, ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು.

ಇಷ್ಟು ದಿನಗಳ ಕಾಲ ಪಕ್ಷದ ನಾಯಕರು ಪ್ರಚಾರ ಮಾಡಿ, ಮನವೊಲಿಸಿರುತ್ತಾರೆ. ಆದರೆ, ಮತದಾನದ ದಿನ ಈ ಬಗ್ಗೆ ನಿರ್ಲಕ್ಷ್ಯವಾದರೇ ಹಿನ್ನಡೆಯಾಗುತ್ತದೆ. ಹೀಗಾಗಿ, ಬೂತ್ ಮಟ್ಟದ ಪದಾಧಿಕಾರಿಗಳು ಬಹಳ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಎಂದರು.

ಇದಲ್ಲದೆ ಉಸ್ತುವಾರಿಯನ್ನು ಜಿಲ್ಲಾಮಟ್ಟದ ಪದಾಧಿಕಾರಿಗಳು ನೋಡಿಕೊಳ್ಳಬೇಕು. ಪ್ರತಿ ಬೂತ್ ನಲ್ಲಿಯೂ ಮತಗಟ್ಟೆ ಏಜೆಂಟರ್ ಇರುವಂತೆ ನೋಡಿಕೊಳ್ಳಬೇಕು. ಈ ದಿಸೆಯಲ್ಲಿ ಸಿದ್ಧತೆ ಕೈಗೊಳ್ಳಿ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಡಾ‌. ಬಸವರಾಜ ಕ್ಯಾವಟರ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ, ರಾಜ್ಯಸಭಾ ಸದಸ್ಯ ಹಾಗೂ ಕೊಪ್ಪಳ ಲೋಕಸಭಾ ಪ್ರಭಾರಿ ನಾರಾಯಣ ಭಾಂಡಗೆ, ಲೋಕಸಭಾ ಕ್ಷೇತ್ರದ ಸಂಚಾಲಕ ಗಿರೇಗೌಡ ಹೊಸಕೇರಾ, ಬಳ್ಳಾರಿ ವಿಭಾಗ ಸಂಘಟನಾ ಪ್ರಭಾರಿ ಪೂಜಪ್ಪ, ಸಹ ಪ್ರಭಾರಿ ಚಂದ್ರಶೇಖರ್ ಗೌಡ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಮೇಶ ನಾಡಿಗೇರ್, ಸುನೀಲ್ ಹೇಸರೂರು, ಶಿವಕುಮಾರ್ ಅರಕೇರಿ, ಖಜಾಂಚಿಗಳಾದ ನರಸಿಂಗ್ ರಾವ್ ಕುಲಕರ್ಣಿ ಹಾಗೂ ಜಿಲ್ಲಾ ಶಕ್ತಿ ಕೇಂದ್ರದ ಪ್ರಮುಖರು, ಮುಖಂಡರು ಉಪಸ್ಥಿತರಿದ್ದರು.

PREV

Recommended Stories

.ಜಮಖಂಡಿಯಲ್ಲಿ ವಿನಾಕನಿಗೆ ಅದ್ಧೂರಿ ವಿದಾಯ
ರೈತರ ಹಿತ ಕಾಪಾಡುವುದು ಮುಖ್ಯ: ಹನಮಂತ ನಿರಾಣಿ