ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನ ತೆರಕಣಾಂಬಿ ಬಳಿಯ ಕಂಪನ ಮಾದೇಶ್ವರ ದೇವಸ್ಥಾನದಿಂದ ಹುತ್ತೂರು ಕೆರೆ ಕೋಡಿ ಹಳ್ಳದ ರಸ್ತೆ ಹಾಗೂ ಮೂರು ಸೇತುವೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಕಡಬೂರು ಮಂಜು ಆರೋಪಿಸಿದ್ದಾರೆ.
ಕಳಪೆ ಕಾಮಗಾರಿ ಬಗ್ಗೆ ಗುಂಡ್ಲುಪೇಟೆ ಲೋಕೋಪಯೋಗಿ ಇಲಾಖೆಯ ಎಇಇ ರವಿಕುಮಾರ್ ಅವರ ಗಮನಕ್ಕೆ ತಂದರೂ ಸ್ಥಳ ಪರಿಶೀಲನೆ ಮಾಡಲು ಇದು ನಮಗೆ ಬರುವುದಿಲ್ಲ ಎಂದು ಹೇಳುತ್ತಾರೆ. ಮೇಲ್ವಿಚಾರಣೆ ಮಾತ್ರ ಇರೋದು ಎಂದು ಉಡಾಫೆ ಉತ್ತರ ನೀಡಿದ್ದಾರೆ ಎಂದರು. ಹಣದಾಹಿ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿದ್ದು, ಕೂಡಲೇ ಎಸ್ಟಿಮೇಟ್‌ನಂತೆ ಕೆಲಸ ಮಾಡಲು ಅಧಿಕಾರಿಗಳು ಸೂಚಿಸಬೇಕು. ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲು ಅವಕಾಶ ಮಾಡಬೇಕು ಇಲ್ಲದಿದ್ದಲ್ಲಿ ಕಾಮಗಾರಿಯನ್ನೇ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯವಾಗಿದ್ದು, ಗುತ್ತಿಗೆದಾರರ ಜೊತೆ ಯಾರೇ ಶಾಮೀಲಾಗಿದ್ದರೂ ಹೋರಾಟವಂತು ನಿಲ್ಲಿಸುವುದಿಲ್ಲ ಎಂದಿದ್ದಾರೆ.