ನನೆಗುದಿಗೆ ಬಿದ್ದಿದ್ದ ರಸ್ತೆಗೆ ₹5.90 ಕೋಟಿ ವೆಚ್ಚದಲ್ಲಿ ಡಾಂಬರೀಕರಣ: ಕೆ. ಎಸ್. ಆನಂದ್

KannadaprabhaNewsNetwork |  
Published : May 08, 2025, 12:31 AM IST
7ಕೆಕೆಡಿಯು1. | Kannada Prabha

ಸಾರಾಂಶ

ಕಡೂರು, ತಂಗಲಿಯ ಬೈಪಾಸ್ ಗೇಟಿನಿಂದ ಜೋಡಿ ತಿಮ್ಮಾಪುರದ ರೈಲ್ವೆ ಗೇಟಿನವರೆಗೆ ಹಾಳಾಗಿದ್ದ 11.8 ಕಿಲೋ ಮೀಟರ್‌ ರಸ್ತೆಗೆ ಎರಡು ಲೇಯರ್ ಡಾಂಬರೀಕರಣ ಕಾಮಗಾರಿ ನಡೆಯಲಿದೆ ಎಂದು ಶಾಸಕ ಕೆ. ಎಸ್. ಆನಂದ್ ತಿಳಿಸಿದರು.

ತಂಗಲಿ ಬೈಪಾಸ್‌ ಗೇಟಿನಿಂದ ಜೋಡಿ ತಿಮ್ಮಾಪುರದ ರೈಲ್ವೆ ಗೇಟಿನವರೆಗೆ 11.8 ಕಿ.ಮೀ. ರಸ್ತೆ ಕಾಮಗಾರಿಗೆ ಚಾಲನೆ

ಕನ್ನಡ ಪ್ರಭ ವಾರ್ತೆ,ಕಡೂರು

ತಂಗಲಿಯ ಬೈಪಾಸ್ ಗೇಟಿನಿಂದ ಜೋಡಿ ತಿಮ್ಮಾಪುರದ ರೈಲ್ವೆ ಗೇಟಿನವರೆಗೆ ಹಾಳಾಗಿದ್ದ 11.8 ಕಿಲೋ ಮೀಟರ್‌ ರಸ್ತೆಗೆ ಎರಡು ಲೇಯರ್ ಡಾಂಬರೀಕರಣ ಕಾಮಗಾರಿ ನಡೆಯಲಿದೆ ಎಂದು ಶಾಸಕ ಕೆ. ಎಸ್. ಆನಂದ್ ತಿಳಿಸಿದರು.

ಬುಧವಾರ ತಂಗಲಿ ಗೇಟಿನಿಂದ ₹5.90 ಕೋಟಿ ವೆಚ್ಚದಲ್ಲಿ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಬೈ ಪಾಸ್ ಬಿಟ್ಟು ಉಳಿದ ರಸ್ತೆಗೆ ಮರು ಡಾಂಬರೀಕರಣ ಮಾಡಲಾಗುತ್ತಿದೆ. ಬಹಳ ದಿನಗಳಿಂದ ಶಿವಮೊಗ್ಗ-ಬೆಂಗಳೂರು ಸಂಚರಿಸುವ ಈ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಈ ರಸ್ತೆ ತುಂಬಾ ಹಾಳಾಗಿತ್ತು. ಹಾಗಾಗಿ ಇಲ್ಲಿಂದ 11.8 ಕಿಲೋಮೀಟರ್ ಮರು ಡಾಂಬರೀಕರಣ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಈ ರಸ್ತೆ ಗುಂಡಿ ಬಿದ್ದು ತುಂಬಾ ಹಾಳಾಗಿರುವ ಕಾರಣ ತಂಗಲಿ ಗೇಟಿನಿಂದ ಮಸಾಲ ಹೋಟೆಲ್ ವರೆಗೆ ಎರಡು ಲೇಯರ್ ಡಾಂಬರೀಕರಣ ಮಾಡಲಾಗುವುದು. ಉಳಿದಂತೆ ಮಾಮೂಲಿ ಡಾಂಬರೀಕರಣ ಆಗಲಿದೆ.ಇನ್ನು ಮಧ್ಯ ಭಾಗದಿಂದ ರಸ್ತೆ ವಿಸ್ತರಣೆ ಆಗಬೇಕಿದ್ದು, ಮುಂದಿನ ದಿನಗಳಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುವುದು. ಇದಕ್ಕೆ ಅನುದಾನ ತರುವ ಪ್ರಯತ್ನ ನಡೆಯುತ್ತಿದ್ದು ಆದಷ್ಟು ಬೇಗ ರಾಜ್ಯ ಸರ್ಕಾರದಿಂದ ಅನುದಾನ ತರಲಾಗುವುದು ಎಂದು ಹೇಳಿದರು.

ಈ ರಸ್ತೆ ಹೈವೇ ವಿಭಾಗದಿಂದ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರವಾಗುವ ಜೊತೆ ಇಲಾಖೆಯಿಂದ ಅನುದಾನ ಕೂಡ ದೊರೆತಿದೆ. ಹಿರಿಯ ಗುತ್ತಿಗೆದಾರ ಹಾಲಪ್ಪ ಗುಣಮಟ್ಟದ ಕಾಮಗಾರಿ ಮಾಡುವ ವಿಶ್ವಾಸವಿದೆ. ಲೋಕೋಪಯೋಗಿ ಇಲಾಖೆ ಮೂಲಕ ಉತ್ತಮ ರಸ್ತೆಗಳ ನಿರ್ಮಿಸಿ ಅಪಘಾತ ತಡೆದು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿದ್ದ ಸಾರ್ವಜನಿಕರು ವೇದಾಹಳ್ಳದ ಸೇತುವೆ ಹಾಳಾಗಿ ನಿರಂತರ ಅಪಘಾತಗಳು ನಡೆಯುತ್ತಿವೆ. ಜನರ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಮಾಡಿದ ಮನವಿಗೆ ಉತ್ತರಿಸಿದ ಆನಂದ್, ಇದಕ್ಕೆ ಅಗತ್ಯ ಕ್ರಮ ಕೈಗೊಂಳ್ಳುವುದಾಗಿ ತಿಳಿಸಿದರು.

ಲೋಕೋಪಯೋಗಿ ಇಲಾಖೆ ಎಇಇ ಬಸವರಾಜನಾಯ್ಕ ಮಾತನಾಡಿ, 11.8 ಕಿ.ಮಿ ವರೆಗೆ ಈ ರಸ್ತೆಯ ಮರು ಡಾಂಬರೀಕರಣದಿಂದ ಎಲ್ಲ ರೀತಿಯ ಸಂಚಾರಕ್ಕೆ ಅನುಕೂಲವಾಗಲಿದೆ. ಈ ಕಾಮಗಾರಿ ತಂಗಲಿ ಗೇಟಿನಿಂದ ಬೀರೂರಿನ ಜೋಡಿ ತಿಮ್ಮಾಪುರ ರೈಲ್ವೆ ಗೇಟಿನವರೆಗೆ ಕಾಮಗಾರಿ ನಡೆಯಲಿದ್ದು ಮೇ 25ರೊಳಗೆ ಈ ಕಾಮಗಾರಿ ಮುಗಿಯಲಿದೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ತಂಗಲಿ ಗ್ರಾಪಂ ಅಧ್ಯಕ್ಷ ರಮೇಶ್, ಮಾಜಿ ಅಧ್ಯಕ್ಷರಾದ ಪಾಂಡಣ್ಣ, ನಾರಾಯಣ ನಾಯ್ಕ, ಗುತ್ತಿಗೆದಾರ ಹಾಲಪ್ಪ, ಮುಖಂಡರಾದ ಅರುಣ, ಗಿರೀಶ್, ಗೋವಿಂದಪ್ಪ, ಪ್ರಭು, ಪುಟ್ಟಪ್ಪ, ಶ್ರೀನಿವಾಸ್ ನಾಯ್ಕ ಸೇರಿದಂತೆ ಮತ್ತಿತರರು ಇದ್ದರು.

7ಕೆಕೆಡಿಯು1

ಶಾಸಕ ಕೆ. ಎಸ್. ಆನಂದ್ ಬುಧವಾರ ತಂಗಲಿ ಗೇಟಿನಿಂದ ಜೋಡಿ ತಿಮ್ಮಾಪುರದ ರೈಲ್ವೆ ಗೇಟಿನವರೆಗೆ 5.90 ಕೋಟಿ ರೂ ವೆಚ್ಚದಲ್ಲಿ 11.8 ಕಿಲೋಮೀಟರ್ ಮರು ಡಾಂಬರೀಕರಣ ಮಾಡುವ ಕಾಮಗಾರಿಗೆ ಚಾಲನೆ ನೀಡಿ ನೀಡಿದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ