ಮುಂಗಾರು ಮಳೆಯ ಭೋರ್ಗರೆತದೊಂದಿಗೆ ಹಲವು ಜಲಪಾತಗಳು ಮನಸೆಳೆಯುತ್ತವೆ. ಅವುಗಳಲ್ಲಿ ಮಾದಂಡ ಅಬ್ಬಿ ಜಲಪಾತವೂ ಒಂದು. ಕೊಡಗಿನಲ್ಲಿ ಅತೀ ಎತ್ತರವಾದ ತಡಿಯಂಡಮೋಳ್ ಬೆಟ್ಟಸಾಲುಗಳ ಕಣಿವೆಗಳಿಂದ ಹಲವಾರು ನದಿಗಳು ಉಗಮಿಸಿ ಹರಿದು ಬರುತ್ತಿದ್ದು ಅವುಗಳಲ್ಲೊಂದು ನದಿಯಿಂದ ಉದ್ಬವಿಸಿದ ಮಾದಂಡ ಅಬ್ಬಿ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದೆ.
ದುಗ್ಗಳ ಸದಾನಂದ ನಾಪೋಕ್ಲು: ಮುಂಗಾರು ಮಳೆಯ ಭೋರ್ಗರೆತದೊಂದಿಗೆ ಹಲವು ಜಲಪಾತಗಳು ಮನಸೆಳೆಯುತ್ತವೆ. ಅವುಗಳಲ್ಲಿ ಮಾದಂಡ ಅಬ್ಬಿ ಜಲಪಾತವೂ ಒಂದು. ಕೊಡಗಿನಲ್ಲಿ ಅತೀ ಎತ್ತರವಾದ ತಡಿಯಂಡಮೋಳ್ ಬೆಟ್ಟಸಾಲುಗಳ ಕಣಿವೆಗಳಿಂದ ಹಲವಾರು ನದಿಗಳು ಉಗಮಿಸಿ ಹರಿದು ಬರುತ್ತಿದ್ದು ಅವುಗಳಲ್ಲೊಂದು ನದಿಯಿಂದ ಉದ್ಬವಿಸಿದ ಮಾದಂಡ ಅಬ್ಬಿ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದೆ.
ಬಂಡೆಗಲ್ಲುಗಳ ಮೇಲಿನಿಂದ ಧುಮುಕುವ ಈ ಜಲಪಾತ ಮನಮೋಹಕ. ಹಸಿರುರಾಶಿಯ ನಡುವೆ ಬೆಳ್ನೊರೆಯ ಈ ಜಲಪಾತದ ಸೊಬಗು ವರ್ಣಿಸಲಸದಳ. ವೀಕ್ಷಕರ ನೋಟಕ್ಕೆ ಸುಲಭದಲ್ಲಿ ಸಿಕ್ಕದೇ ದೂರವೇ ಉಳಿದಿರುವ ಜಲಪಾತ ಈಗ ರಭಸದಿಂದ ಧುಮ್ಮಿಕ್ಕುತ್ತಿದೆ.ತಡಿಯಂಡಮೋಳ್ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಎತ್ತರೆತ್ತರಕ್ಕೇರುತ್ತಿದ್ದಂತೆ ಬಲಕ್ಕೆ ತಿರುಗಿ ಸಾಗಿದರೆ ಮಾದಂಡ ಅಬ್ಬಿ ತಲುಪಬಹುದು. ಮಳೆಗಾಲದಲ್ಲಿ ಸಂತೋಷದಿoದ ಜಲಧಾರೆಯ ಸೊಬಗು ಸವಿಯಬಹುದು. ಎಲ್ಲೆಲ್ಲೂ ಹಸಿರು ಸಿರಿ. ನಡುವೆ ಮಾದಂಡ ಅಬ್ಬಿಯ ಬೆಳ್ನೊರೆ.ಇದರ ನೋಟ ದೂರದ ಇಗ್ಗುತ್ತಪ್ಪ ಬೆಟ್ಟಕ್ಕೂ ಕಾಣಸಿಗುತ್ತದೆ. ಹಸಿರು ವೃಕ್ಷಗಳ ನಡುವೆ ಸಿಕ್ಕ ಇಳಿಜಾರಿನಲ್ಲಿ ಬಂಡೆಗಲ್ಲುಗಳ ಮೇಲೆ ಚೆಂದದ ನೋಟ ಸವಿಯಲು ಎರಡು ಕಣ್ಣುಗಳು ಸಾಲವು. ಜಲಪಾತಕ್ಕೆ ತೆರಳುವ ರಸ್ತೆಗಳು ಉತ್ತಮವಾಗಿಲ್ಲ. ಪ್ರವಾಸಿಗರಿಗೆ ದಾರಿ ಸೂಚಕಗಳಿಲ್ಲ. ಸ್ಥಳಿಯರಿಗೆ ಮಾತ್ರ ಈ ಜಲಪಾತ ಹೊರಸೂಸುವ ಚೆಲುವು ಮಾತ್ರ ನಿತ್ಯನೂತನ. ಸಾಹಸಪ್ರಿಯರು ಮಾತ್ರ ಪ್ರಯತ್ನಪಟ್ಟು ಸಾಗಿದರೆ ಮಾದಂಡ ಅಬ್ಬಿಯ ಚೆಲುವು ಆಸ್ವಾದಿಸಬಹುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.