ಸಾಮಾಜಿಕ ಜವಾಬ್ದಾರಿ ಬೆಳೆಸುವಲ್ಲಿ ಎನ್‌ಎಸ್‌ಎಸ್ ಪಾತ್ರ ಪ್ರಮುಖ

KannadaprabhaNewsNetwork |  
Published : Oct 12, 2026, 02:15 AM IST
ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ಗ್ರಾಮದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ನಿವೃತ್ತ ಪ್ರಾಚಾರ್ಯ ಡಿ ಎ ಗೊಬ್ಬರಗೊಂಪಿ ಉದ್ಘಾಟಿಸಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು, ನಾಯಕತ್ವದ ಗುಣ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಎನ್‌ಎಸ್‌ಎಸ್ ಶಿಬಿರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಿವೃತ್ತ ಪ್ರಾಚಾರ್ಯ ಡಿ.ಎ. ಗೊಬ್ಬರಗೊಂಪಿ ಹೇಳಿದರು.

ಶಿಗ್ಗಾಂವಿ: ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು, ನಾಯಕತ್ವದ ಗುಣ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಎನ್‌ಎಸ್‌ಎಸ್ ಶಿಬಿರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಿವೃತ್ತ ಪ್ರಾಚಾರ್ಯ ಡಿ.ಎ. ಗೊಬ್ಬರಗೊಂಪಿ ಹೇಳಿದರು.ತಾಲೂಕಿನ ಕಡಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ಥಳೀಯ ರಂಭಾಪುರಿ ಕಾಲೇಜಿನ ವತಿಯಿಂದ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನ ಉದ್ಘಾಟಿಸಿ ಮಾತನಾಡಿದರು.

ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜ್ಞಾನದ ಜತೆಗೆ ಪ್ರಾಯೋಗಿಕ ಅನುಭವವನ್ನು ಒದಗಿಸುತ್ತದೆ. ಉನ್ನತ ಶಿಕ್ಷಣದ ಕೊರತೆಯನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಶಿಗ್ಗಾಂವಿಯಲ್ಲಿ ೧೯೮೪ರಲ್ಲಿ ಶ್ರೀ ರಂಭಾಪುರಿ ಕಾಲೇಜು ಪ್ರಾರಂಭವಾಯಿತು, ನಾಡಿನ ಜನತೆ ಸುಸಂಸ್ಕೃತರಾಗಿರಬೇಕೆಂಬ ಮಹಾದಾಸೆ ಜಗದ್ಗುರುಗಳದಾಗಿದೆ. ವಿದ್ಯಾರ್ಥಿ ಜೀವನ ಕೇವಲ ನಾಲ್ಕು ಗೋಡೆಗಳ ಮಧ್ಯದ ಜೀವನವಲ್ಲ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು, ಎನ್‌ಎಸ್‌ಎಸ್ ವಿದ್ಯಾರ್ಥಿ ಜೀವನದ ಒಂದು ಭಾಗವೂ ಆಗಿದೆ, ಎನ್‌ಎಸ್‌ಎಸ್ ಕೇವಲ ಸೇವೆಯಲ್ಲ, ಮತ್ತೊಬ್ಬರ ಬದುಕಿನಲ್ಲಿ ಭರವಸೆಯನ್ನು ಮೂಡಿಸುವುದಾಗಿದೆ ಎಂದರು.ಹುಬ್ಬಳ್ಳಿಯ ಆದರ್ಶ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸುರೇಶ ಕುನ್ನೂರ ಮಾತನಾಡಿ, ಇಂದಿನ ಶಿಕ್ಷಣ ಉಪಯುಕ್ತ ಶಿಕ್ಷಣವಾಗಿಲ್ಲ, ಜ್ಞಾನ, ಸಹನೆ, ಶಾಂತತೆ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು, ಉನ್ನತ ಮಟ್ಟದ ಯೋಚನೆಗಳು ಇದ್ದಾಗ ಗುರಿ ಸಾಧನೆ ಸಾಧ್ಯವಾಗುತ್ತದೆ ಎಂದರು.ಕಾರ್ಯಕ್ರಮದ ಅದ್ಯಕ್ಷತೆಯನ್ನು ಕಾಲೇಜಿನ ಆಡಳಿತಾಧಿಕಾರಿ ಲಿಂಗಯ್ಯ ಹಿರೇಮಠ ವಹಿಸಿ ಮಾತನಾಡಿದರು. ಕಾರ್ಯಕ್ರಮಾಧಿಕಾರಿ ಎಂ.ಎಸ್. ಸಂಗಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಶಿಧರ ಸುರಗೀಮಠ, ಪ್ರಕಾಶ ಹಿರೇಮಠ, ಶಿವಲಿಂಗಪ್ಪ ಹುಬ್ಬಳ್ಳಿ, ಶಂಕ್ರಣ್ಣ ಮುಂದಿನಮನಿ, ಮಜೂರಪ್ಪ ಮಾದರ, ಶಾಲೆಯ ಮುಖೋಪಾಧ್ಯಾಯ ಭರಮಗೌಡ್ರ ಪಾಟೀಲ, ಪ್ರೊ. ಎಸ್.ವಿ. ಕುಲಕರ್ಣಿ, ಎಂ.ಎಸ್. ಸಿದ್ದಪ್ಪವರ, ಬಿ.ಸಿ. ಹೊನ್ನಣ್ಣವರ, ಪ್ರೊ. ಎನ್.ಸಿ. ನಾಯಕ್ ಸೇರಿದಂತೆ ಕಾಲೇಜಿನ ಸಿಬ್ಬಂದಿ, ಗ್ರಾಮ ಮುಖಂಡರು ಹಾಗೂ ಶಿಬಿರಾರ್ಥಿಗಳು ಇದ್ದರು, ಪ್ರಾಚಾರ್ಯ ಎಫ್ .ಎಸ್. ಶಿವಣ್ಣವರ ಸ್ವಾಗತಿಸಿದರು. ಪ್ರೊ. ಶಿವಪ್ರಕಾಶ ಬಳಿಗಾರ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಕಾವ್ಯಕ್ಕೆ ಹೊಸ ಹೊಳಪು ತಂದ ಕವಿ ಬೇಂದ್ರೆ: ಡಾ. ಶಿವಪ್ಪ
ದಸರಾ ಉತ್ಸವ: ದುರ್ಗಾದೌಡ ಕಾರ್ಯಕ್ರಮಕ್ಕೆ ಚಾಲನೆ