ಹೊಳೆಆಲೂರ: ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಶಾಲೆ ಹಾಗೂ ಮನೆಯೇ ಪಾತ್ರ ಪ್ರಮುಖವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್. ತಿಳಿಸಿದರು.
ಸಮೀಪದ ಮೆಣಸಗಿ ಗ್ರಾಮದ ಶ್ರೀ ಲಿಂಗಬಸವೇಶ್ವರ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಪಂ. ಜವಾಹರ ಲಾಲ ನೆಹರೂ ಅವರ ಜನ್ಮ ದಿನಾಚರಣೆ ಅಂಗವಾಗಿ ಮಕ್ಕಳ ದಿನಾಚರಣೆ ಹಾಗೂ ಪೋಷಕರ-ಪಾಲಕರ ಮಹಾಸಭೆಯಲ್ಲಿ ಮಾತನಾಡಿದರು.ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ, ಅಧ್ಯಯನದ ಗುಣಮಟ್ಟ, ಪರೀಕ್ಷಾ ಫಲಿತಾಂಶ, ಪೋಷಕಾಂಶಯುಕ್ತ ಆಹಾರ, ಸ್ವಚ್ಛತೆ, ಆರೋಗ್ಯ, ಬಾಲ್ಯವಿವಾಹ, ಮಕ್ಕಳ ಮೇಲಿನ ಹಿಂಸೆ, ಬಾಲಕಾರ್ಮಿಕ ಪದ್ಧತಿ, ಪೋಕ್ಸೋ ಕಾಯ್ದೆ ಕುರಿತಂತೆ ಅರಿವು ಹೊಂದುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.ಶಾಲಾ ಅಭಿವೃದ್ಧಿಗೆ ಪಾಲಕರ ಸಕ್ರಿಯ ಸಹಕಾರ ಅತ್ಯಗತ್ಯ. ಮಕ್ಕಳು ಮಧ್ಯಾಹ್ನದ ಊಟ, ಕ್ರೀಡೆ, ಪುಸ್ತಕ ಓದು ಇತ್ಯಾದಿ ವಿಷಯಗಳಲ್ಲಿ ಸಂಪೂರ್ಣವಾಗಿ ಭಾಗವಹಿಸುವಂತೆ ಪೋಷಕರು ತಮ್ಮ ಮಕ್ಕಳಿಗೆ ಪ್ರೋತ್ಸಾಹಿಸಬೇಕು. ಹಾಗೂ ತಮ್ಮ ಮಕ್ಕಳ ಆಸಕ್ತಿಗನುಗುಣವಾಗಿ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳ ಸಾಧನೆಗೆ ಪಾಲಕರು ಹಾಗೂ ಶಿಕ್ಷಕರು ನಿರಂತರ ಶ್ರಮಿಸಬೇಕು ಎಂದರು.
ರೋಣ ತಹಸೀಲ್ದಾರರು, ಶಾಲಾ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಇದ್ದರು.ಅತಿರುದ್ರ ಮಹಾಯಜ್ಞಕ್ಕೆ ಜನಸಾಗರ
ಗದಗ: ನಗರದಲ್ಲಿ ಪ್ರಥಮ ಬಾರಿಗೆ ವಿದ್ಯಾದಾನ ಸಮಿತಿ ಆವರಣದಲ್ಲಿ ಸಹಾದೇವಾನಂದ ಗಿರಿಜಿ ಮಹಾರಾಜರ ನೇತೃತ್ವದಲ್ಲಿ ನಡೆಯುತ್ತಿರುವ ಕಿರಿಯ ಕುಂಭಮೇಳದಲ್ಲಿ ವಿಶೇಷ ಹೋಮ- ಹವನ ಪೂಜೆ ಕಾರ್ಯಕ್ರಮಗಳು ವೀಕ್ಷಿಸಿ ಶಿವಲಿಂಗುವಿನ ದರ್ಶನ ಪಡೆಯಲು ಜನಸಾಗರವೇ ಹರಿದು ಬಂದಿತ್ತು.ಲೋಕ ಕಲ್ಯಾಣಕ್ಕಾಗಿ ಜಾತ್ಯತೀತವಾಗಿ, ಪಕ್ಷಾತೀತವಾಗಿ ಮತ್ತು ಹಲವು ವಿಶೇಷತೆಯಿಂದ ಕೂಡಿದ ಈ ಧಾರ್ಮಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.ಕಾರ್ಯಕ್ರಮದಲ್ಲಿ ದೇಶದ ವಿವಿಧ ಮೂಲೆಗಳಿಂದ ಆಗಮಿಸಿದ ನಾಗಸಾಧುಗಳು ಜನತೆಗೆ ಆಶೀರ್ವದಿಸಿದರು. ನಾಗಸಾಧುಗಳನ್ನು ನಗರದ ಜನತೆ ಉತ್ಸಾಹದಿಂದ ನೋಡಿ ಕಣ್ಣು ತುಂಬಿಕೊಂಡರು.