ಹರಪನಹಳ್ಳಿ: ಸಹಕಾರಿ ಸಂಘಗಳ ಬೆಳವಣಿಗೆಯಲ್ಲಿ ಷೇರುದಾರರ ಪಾತ್ರ ಬಹುಮುಖ್ಯ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಹಳೆ ಬಸ್ ನಿಲ್ದಾಣ ಬಳಿಯ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಗೋದಾಮು ಮತ್ತು ವ್ಯಾಪಾರಿ ಮಳಿಗೆಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.ಯಾವುದೇ ಸಂಘವು ವ್ಯಾವಹಾರಿಕವಾಗಿ ಉತ್ತಮ ಸಾಧನೆ ಮಾಡಿದ್ದಲ್ಲಿ ಆ ಸಂಘಕ್ಕೆ ಹೆಚ್ಚು ಸಾಲ ಸೌಲಭ್ಯ ದೊರೆಯಲಿದೆ. ರೈತರಿಗೆ ಸಮಯಕ್ಕೆ ಸರಿಯಾಗಿ ಸಾಲ ನೀಡುವ ಮೂಲಕ ರೈತರ ಹಿತ ಕಾಯಬೇಕು. ಸಂಘದ ಷೇರುದಾರರ ಜೊತೆ ಸೌಜನ್ಯದಿಂದ ನಡೆದುಕೊಳ್ಳಬೇಕೆಂದು ಸಂಘದ ಠೇವಣಿದಾರರ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದು ಎಂದು ಸಂಘದ ಆಡಳಿತ ಮಂಡಳಿಗೆಯವರಿಗೆ ಸಲಹೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಂಘದ ನಿರ್ದೇಶಕ ಎಂ.ವಿ. ಅಂಜಿನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, 1976ರಲ್ಲಿ ಆರಂಭವಾದ ಈ ಸಂಘವು ಪ್ರಾರಂಭದಲ್ಲಿ ಕೇವಲ 50 ಷೇರುದಾರರನ್ನು ಹೊಂದಿತ್ತು. ಇಂದು 5 ಸಾವಿರಕ್ಕೂ ಹೆಚ್ಚು ಷೇರುದಾರರನ್ನು ಒಳಗೊಂಡು ₹10 ಕೋಟಿಗೂ ಹೆಚ್ಚು ವ್ಯವಹಾರ ಹೊಂದಿದೆ ಎಂದು ತಿಳಿಸಿದರು.ಸಂಘವು ಆರ್ಥಿಕವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಸಕಾಲದಲ್ಲಿ ಸಾಲ ಪಡೆದ ರೈತರು ಸಾಲ ಮರುಪಾವತಿಸುವ ಮೂಲಕ ಸಂಘದ ಅಭಿವೃದ್ಧಿಗೆ ಕೈಜೊಡಿಸಬೇಕು ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ ಮಾತನಾಡಿ, ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಬಿಡಿಸಿಸಿ ಬ್ಯಾಂಕ್‌ನಿಂದ ಮಂಜೂರು ಹಣದಲ್ಲಿ ನಿಗದಿತ ಸಮಯದಲ್ಲಿ ಗುಣಮಟ್ಟದ ಸುಸಜ್ಜಿತ ಕಟ್ಟಡ ನಿರ್ಮಿಸಿ ರೈತರ ಅನುಕೂಲಕ್ಕೆ ಶ್ರಮಿಸಬೇಕು ಎಂದು ಹೇಳಿದರು.ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಗೋಳ ಚಿದಾನಂದ ಮಾತನಾಡಿ, ಸಹಕಾರಿ ಸಂಘಗಳು ಸಕಾಲದಲ್ಲಿ ರೈತರಿಗೆ ಸಾಲ ನೀಡಿದರೆ ಅವರು ಸಾಲದ ಸುಳಿಗೆ ಸಿಲುಕುವುದಲ್ಲ ಎಂದು ಹೇಳಿದರು.
ಸಂಘದ ಅಧ್ಯಕ್ಷ ದಂಡಿನ ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಸಂಘದ ಸಹಾಯಕ ನಿಬಂಧಕ ಶರಣಬಸಪ್ಪ, ಲೆಕ್ಕ ಪರಿಶೋಧನ ಸಹಾಯಕ ನಿರ್ದೇಶಕ ಷಣ್ಮುಖ, ಸಂಘದ ಉಪಾಧ್ಯಕ್ಷ ಗಣಾಚಾರಿ ದುರುಗಪ್ಪ, ನಿರ್ದೇಶಕರಾದ ಪೂಜಾರ ದಕ್ಷಿಣಮೂರ್ತಿ, ಹತಕುಣಿ ಚಮನವಲಿ, ಗಿಡ್ಡಳ್ಳಿ ನಾಗರಾಜ ಕೆ.ಮೆಹಬೂಬ್ ಬಾಷ, ಚಿಕ್ಕೇರಿ ವೆಂಕಟೇಶ, ಎಂ.ವಿ. ಕೃಷ್ಣಕಾಂತ, ಟಿ.ಎಚ್.ಎಂ. ಮಂಜುನಾಥ, ಎಂ.ಸುಮಂಗಲ, ಜಿ.ಸುಜಾತ, ಗಾಟಿನ ಬಸವರಾಜ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಬಸವರಾಜ ಪುರಸಭಾ ಸದಸ್ಯರಾದ ರೆಹಮಾನ್, ಲಾಟಿದಾದಪೀರ, ಗಣೇಶ, ಭರತೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಕಂಚಿಕೇರಿ ಜಯಲಕ್ಷ್ಮಿ, ಅಡವಿಹಳ್ಳಿ ಗ್ರಾಪಂ ಅಧ್ಯಕ್ಷೆ ಅನುಷಾ ನಾಗರಾಜ, ಫಕ್ರುದ್ದೀನ್, ಬಾರ್ಕಿ ಶೇಖರಪ್ಪ, ಕಟ್ಟಿ ರಂಗನಾಥ, ಅಂಬ್ಲಿ ಮಂಜುನಾಥ ಸೇರಿದಂತೆ ಇತರರು ಇದ್ದರು.