ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಆದಿವಾಲ ಗ್ರಾಮದಲ್ಲಿನ ನೆಹರೂ ಗ್ರಾಮಾಂತರ ಪ್ರೌಢಶಾಲೆಯ ನೂತನ ಕಟ್ಟಡದ ಉದ್ಘಾಟನೆ ಮತ್ತು ಗುರುವಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತೀಯ ಪರಂಪರೆಯಲ್ಲಿ ಗುರುವಿನ ಸ್ಥಾನ ಶಾಶ್ವತವಾದ ಗೌರವ ಪಡೆದಿದೆ. ಮಕ್ಕಳ ಪ್ರೀತಿ ಶಿಕ್ಷಕರಿಗೆ, ಶಿಕ್ಷಕರ ಪ್ರೀತಿ ಮಕ್ಕಳಿಗೆ ಹಂಚಿಕೆಯಾಗಬೇಕು. ಬೇದ ಭಾವಗಳು ತೊಲಗಿ ಸಾಧನೆ ರೂಪುಗೊಳ್ಳಬೇಕು. ಎಲ್ಲರನ್ನೂ ಗೌರವಿಸುವ, ಬೆಳೆಸುವ, ಗುರುತಿಸುವ ಪ್ರಕ್ರಿಯೆಗಳು ನಿರಂತರವಾಗಿರಬೇಕು. ಜ್ಞಾನಕ್ಕೆ ಸಮಾನವಾದ ವಸ್ತು ಯಾವುದೂ ಇಲ್ಲ. ಶಿಕ್ಷಣದ ಬೆಳವಣಿಗೆಗೆ ಶಿಕ್ಷಕರ ಪೋಷಕರ ಪಾತ್ರ ಸಮಾನವಾಗಿದ್ದು ಮಕ್ಕಳಲ್ಲಿ ನೈತಿಕ ಪಾಠಗಳನ್ನು ಬಿತ್ತಬೇಕು. ತಂದೆ ತಾಯಿ ಆದರ್ಶ ಮತ್ತು ಕಲಿಕೆಯ ಪ್ರೀತಿಗೆ ಮಕ್ಕಳು ಒತ್ತಾಸೆಯಾಗಿ ನಿಲ್ಲಬೇಕಿದೆ.ಹಳ್ಳಿ ಭಾಗದ ಜನರ ಶಿಕ್ಷಣದ ಅವಶ್ಯಕತೆ ಅರಿತು ಅಂದು ಆರಂಭವಾದ ನೆಹರೂ ಗ್ರಾಮಾಂತರ ಪ್ರೌಢಶಾಲೆ ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳ ಬದುಕನ್ನು ಹಸನು ಮಾಡುತ್ತಿದೆ. ಶ್ರೀ ಮಠವು ಸರ್ಕಾರದ ಜೊತೆ ಸೇರಿ ಶಿಕ್ಷಣಕ್ಕೆ ಆದ್ಯತೆ ನೀಡಿದ್ದು ನಾಡಿನಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಎಲ್ಲರೂ ಕಟಿಬದ್ದರಾಗಬೇಕು. ಶಿಕ್ಷಣಕ್ಕೆ ನಾಡಿನ ಮಠ ಮಾನ್ಯಗಳ ಕೊಡುಗೆ ಹೆಚ್ಚಿನದಾಗಿದ್ದು ಅಕ್ಷರದ ಜೊತೆಗೆ ದಾಸೋಹವೂ ಸೇರಿ ಲಕ್ಷಾಂತರ ಮನಸ್ಸುಗಳನ್ನು ಬೆಸೆಯಲಾಗಿದೆ. ಸಲವತ್ತುಗಳು ಕಡಿಮೆ ಇದ್ದ ಕಾಲದಲ್ಲಿ ಸಂಸ್ಕಾರಗಳು ಉತ್ತಮವಾಗಿದ್ದವು. ಇದೀಗ ಎಲ್ಲಾ ಸವಲತ್ತುಗಳು ದೊರಕಿದರು ಸಹ ಬದುಕುಗಳು ದುಸ್ತರವಾಗಿವೆ. ಆಂಗ್ಲ ಮಾಧ್ಯಮ ಶಾಲೆಗಳ ವ್ಯಾಮೋಹದಡಿ ಕನ್ನಡ ಶಾಲೆಗಳು ಹಿಂದುಳಿದಿಲ್ಲ. ಕನ್ನಡದಲ್ಲಿ ಐಎಎಸ್, ಐಪಿಎಸ್ ಮಾಡಿರುವ ನಿದರ್ಶನಗಳು ನಮ್ಮ ಮುಂದಿವೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಇದು ಭವಿಷ್ಯದ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯಗಳ ಶಾಲೆಯಾಗಿದೆ. ಶ್ರೀಗಳು ಶಿಕ್ಷಣಕ್ಕೆ ಆದ್ಯತೆ ಕೊಡುವುದರ ಜೊತೆಗೆ ಶಿಸ್ತು ಮತ್ತು ಸನ್ನಡತೆ ಕಲಿಸುತ್ತಿದ್ದಾರೆ. ಅನನ್ಯ ಕಾರ್ಯಗಳನ್ನು ಮಾಡುವ ಮೂಲಕ ಜಗದಗಲದಲ್ಲಿ ನಾಡಿನ ಕೀರ್ತಿಯನ್ನು ಬೆಳಗಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಎಂ.ಬಸವರಾಜಪ್ಪ, ಗ್ರಾಪಂ ಅಧ್ಯಕ್ಷರಾದ ವಿನೋದ ದೇವರಾಜು, ಮುಖಂಡರಾದ