ಧಾರವಾಡ: ಪ್ರಜ್ಞಾವಂತ ಸಮಾಜ ನಿರ್ಮಾಣಕ್ಕೆ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಪಾತ್ರ ಪ್ರಮುಖ. ಅವರು ಪ್ರಸ್ತುತ ವ್ಯವಸ್ಥೆಯಿಂದ ಉತ್ತಮವಾಗಿ ಕೆಲಸ ಮಾಡಲಾಗುತ್ತಿಲ್ಲ. ಪಾಲಕರು ಅರಿತು ಶಿಕ್ಷಕರಿಗೆ ಉತ್ತಮ ವಾತಾವರಣ ನಿರ್ಮಿಸಲು ಸಹಕರಿಸಬೇಕು ಎಂದು ಐಐಐಟಿಯ ಆಡಳಿತ ಹಾಗೂ ವಿದ್ಯಾರ್ಥಿ ಡೀನ್ ಡಾ. ಕೆ. ಗೋಪಿನಾಥ ಹೇಳಿದರು.
ರಂಗನಟ, ನಿರ್ದೇಶಕ ಡಾ. ಶಶಿಧರ ನರೇಂದ್ರ ಮಾತನಾಡಿ, ಗುರುಕುಲ ಪದ್ಧತಿಯು ಮತ್ತೆ ಮರಳಿ ಬರುತ್ತಿರುವುದರಿಂದ ಗುರು ಪರಂಪರೆಗೆ ಗೌರವ ಬರುತ್ತಿದೆ. ಅಲ್ಲದೇ, ಶಿಕ್ಷಕ ಪಾಠವನ್ನಷ್ಟೇ ಮಾಡುವುದಿಲ್ಲ ಗುರುವಾಗಿ ಮುಂದೆ ನಡೆಸುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿವಿಲ್ ಎಂಜಿನಿಯರ್ ಸಂಘದ ಅಧ್ಯಕ್ಷ ಸುನೀಲ್ ಬಾಗೇವಾಡಿ, ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಣ ಸಂಬಂಧ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಮತ್ತೆ ಅದನ್ನು ಬಲಪಡಿಸುವ ಮೂಲಕ ಸ್ವಸ್ಥ್ಯ ಸಮಾಜ ರೂಪಿಸಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್‌ಕೆಜಿಯಿಂದ ಹಿಡಿದು ಪಿಜಿ ವರೆಗಿನ ಶಿಕ್ಷಕರನ್ನು ಗೌರವಿಸುವ ಕಾರ್ಯ ಸಂಘದಿಂದ ಮಾಡಲಾಗಿದೆ ಎಂದರು.ವಿಜೇಂದ್ರಗೌಡ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಅರುಣಕುಮಾರ ಶೀಲವಂತ ಸ್ವಾಗತಿಸಿದರು. ದಾಮೋದರ್ ಜಿ. ಹೆಗಡೆ ನಿರೂಪಿಸಿದರು. ಪವನ್ ಕುಮಾರ್ ವಂದಿಸಿದರು. ಸಿದ್ದನಗೌಡ ಕೆ ಪಾಟೀಲ, ಕಬೀರ ನದಾಫ್, ಮಾರ್ತಾಂಡಪ್ಪ ಕತ್ತಿ ಇದ್ದರು.