ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಕೌಶಲಗಳನ್ನು ವೃದ್ಧಿಸುವುದರ ಜೊತೆಗೆ ಸಾಮಾಜಿಕ, ಮಾನವೀಯ, ಹಾಗೂ ನೈತಿಕ ಮೌಲ್ಯಗಳನ್ನು ವರ್ಧಿಸುವುದರ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಅವರ ಕೊಡುಗೆ ಅನನ್ಯವಾದದ್ದು ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.ಪಟ್ಟಣದ ಹೊರವಲಯದ ಎಸ್ ಎನ್ ರೆಸಾರ್ಟ್ ನಲ್ಲಿ ರಾಷ್ಪ್ರಿಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗುರುಭವನಕ್ಕೆ ಭೂಮಿ ಶಿಕ್ಷಕರ ಆಶಯದಂತೆ ಗುರುಭವನ ನಿರ್ಮಾಣಕ್ಕೆ 10 ಗುಂಟೆ ಜಮೀನನ್ನು ನೀಡಲಾಗಿತ್ತು. ಆದರೆ ಶಿಕ್ಷಕರ ಸಂಘಟನಾತ್ಮಕ ಕೊರತೆ ಮತ್ತು ನಿರಾಸಕ್ತಿಯ ಫಲವಾಗಿ ಇಂದು ಇತರರು ಆ ಸ್ಥಳವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಶೀಘ್ರದಲ್ಲಿ ತಹಸೀಲ್ದಾರ್ ಮುಖೇನ ತೆರವುಗೊಳಿಸಿ ಶಿಕ್ಷಕ ರ ಭವನ ನಿರ್ಮಾಣಕ್ಕೆ ಮೀಸಲಿಡಲಾಗುವುದು ಎಂದರು.ಇನ್ನು ಒಂದು ತಿಂಗಳ ಒಳಗಾಗಿ ಬಿಇಒ ಕಚೇರಿಯನ್ನು ಹಳೆ ಪುರಸಭೆ ಕಚೇರಿಗೆ ಸ್ಥಳಾಂತರ ಮಾಡಲಾಗುವುದು ಮತ್ತು ಮೂರು ತಿಂಗಳ ಒಳಗಾಗಿ ನೂತನ ಬಿಇಒ ಕಚೇರಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಸುತ್ತೇನೆ ಇದರೊಟ್ಟಿಗೆ ಎಂಟಿಜಿಎಂ ಶಾಲೆಯ ಕಟ್ಟಡವನ್ನು ಪುನಶ್ಚೇತನಗೊಳಿಸಲಾಗುವುದು ಎಂದರು.
ಬದುಕಿನ ಪಾಠ ಕಲಿಸುವ ಗುರುಬಿಇಒ ಸುಕನ್ಯ ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೆ ವಿದ್ಯಾರ್ಥಿಗಳ ಏಳಿಗೆಯನ್ನೇ ಸದಾ ಬಯಸುತ್ತಾ, ಪುಸ್ತಕದ ಅಕ್ಷರ ಜ್ಞಾನವನ್ನು ಮಸ್ತಕದಲ್ಲಿ ಉಳಿಸುವಂತೆ ಮಾಡಿ ಶಿಕ್ಷಣದ ಮೌಲ್ಯಗಳೊಂದಿಗೆ ಬದುಕಿನ ಪಾಠಗಳನ್ನು ಕಲಿಸುವ ನಿಸ್ವಾರ್ಥ ಸೇವಕರು ಶಿಕ್ಷಕರಾಗಿದ್ದಾರೆ ಎಂದರು,
ಪುರಸಭಾ ಅಧ್ಯಕ್ಷ ಗೋವಿಂದ, ತಹಸಿಲ್ದಾರ್ ವೆಂಕಟೇಶಪ್ಪ, ಇಓ ರವಿಕುಮಾರ್ , ಸಮಾಜ ಕಲ್ಯಾಣ ಅಧಿಕಾರಿ ಅಂಜಲಿದೇವಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಪ್ಪಯ್ಯಗೌಡ, ಉಪಾಧ್ಯಕ್ಷ ರವಿಕುಮಾರ್ , ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಅಂಜಿನಯ್ಯ ಗೌಡ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಅಧ್ಯಕ್ಷ ರಾಜಪ್ಪ, ಅಕ್ಷರ ದಾಸೋಹ ನಿರ್ದೇಶಕ ಯುವರಾಜ್, ಆದರ್ಶ ಶಾಲೆ ಮುಖ್ಯೋಪಧ್ಯಾಯರಾದ ಶಶಿಕಲಾ, ಶಿಕ್ಷಕರಾದ ಸಂಜೀವಪ್ಪ, ಪುರಸಭಾ ಸದಸ್ಯರು ಇದ್ದರು.