ಕನ್ನಡಪ್ರಭ ವಾರ್ತೆ ಯಾದಗಿರಿ
ತಾಲೂಕಿನ ಹತ್ತಿಕುಣಿ ಗ್ರಾಮದ ಸಂಘದ ಆವರಣದಲ್ಲಿ ಭಾನುವಾರ ಹಮ್ಮಕೊಂಡಿದ್ದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಸಂಘ ಪ್ರಸಕ್ತ ಸಾಲಿನಲ್ಲಿ ರೈತರಿಗೆ 2.24 ಕೋಟಿ ರು. ಬೆಳೆ ಸಾಲ ಮತ್ತು ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ 2.14 ಕೋಟಿ ರು., ಸ್ವಸಹಾಯ ಸಂಘಗಳಿಗೆ 32 ಲಕ್ಷ ರು. ಸಾಲ ವಿತರಿಸಲಾಗಿದೆ. ಅದರಂತೆ ರೈತರು ಸಂಘದಲ್ಲಿ 9 ಲಕ್ಷ ರು. ಠೇವಣಿ ಹಣ ಇಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ನಮ್ಮ ಆಡಳಿತ ಮಂಡಳಿ ನಿರ್ದೇಶಕರು, ಸಿಬ್ಬಂದಿ ಪ್ರಮಾಣಿಕ ಪ್ರಯತ್ನದಿಂದ ಶೇ.೧೦೦ ಸಾಲ ವಸೂಲಾತಿ ಮಾಡುವ ಮೂಲಕ ಸಂಘಕ್ಕೆ 9 ಲಕ್ಷ ರು. ಲಾಭ ಬಂದಿದೆ ಎಂದು ತಿಳಿಸಿದರು.ಈ ವರ್ಷ ರೈತರು ಮುಂಗಾರು ಬಿತ್ತನೆ ಸಮಯದಲ್ಲಿ ರಸಗೊಬ್ಬರ ಖರೀದಿಸಲು ಪರದಾಡಿದ ಸ್ಥಿತಿ ಗಮನಿಸಿದ್ದೇವೆ. ನಮ್ಮ ಸಿಬ್ಬಂದಿ ಈಗಾಗಲೇ ಕೃಷಿ ಮಹಾ ವಿದ್ಯಾಲಯ ಭೀಮರಾಯನ ಗುಡಿಯಲ್ಲಿ ತರಬೇತಿ ಪಡೆದು ಬಂದಿದ್ದಾರೆ. ಸರ್ಕಾರ ಅನುಮತಿ ನೀಡಿದರೆ ಮುಂದಿನ ವರ್ಷ ಸಂಘದಿಂದಲೇ ರಸಗೊಬ್ಬರ ಪೂರೈಕೆಗೆ ಯತ್ನಿಸುತ್ತೇವೆ ಎಂದು ತಿಳಿಸಿದರು.
ಈ ಭಾಗದಲ್ಲಿ ನೀರಾವರಿ ಸೌಕರ್ಯ ಇರುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭತ್ತ, ತೊಗರಿ, ಸಜ್ಜಿ ಇತರ ಬೆಳೆಗಳನ್ನು ಬೆಳೆಯುತ್ತಾರೆ. ಸರ್ಕಾರದ ಬೆಂಬಲ ಯೋಜನೆ ಅಡಿಯಲ್ಲಿ ಧಾನ್ಯಗಳನ್ನು ಖರೀದಿಸುವ ಕೇಂದ್ರ ನಮ್ಮ ಸಂಘಕ್ಕೆ ನೀಡಲು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.ರೈತರು ಕೃಷಿ ಜೋತೆಗ ಉಪಕಸುಬುಗಳಾದ ಹೈನುಗಾರಿಕೆ, ಕುರಿ-ಮೇಕೆ, ಸಾಕಾಣಿಕೆ ಮಾಡಬೇಕು. ಇದು ಕೂಡ ಕುಟುಂಬಗಳಿಗೆ ಆರ್ಥಿಕ ಬಲ ತುಂಬುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಘದ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಪಾಟೀಲ್ ಉದ್ಘಾಟಿಸಿದರು. ಸಂಘದ ನಿರ್ದೇಶಕ ವೀರಭದ್ರಪ್ಪ ಯಡ್ಡಳ್ಳಿ, ಸಂಘದ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಸಂಜೀವಕುಮಾರ ಪುಟಗಿ ಮಾತನಾಡಿದರು.ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ ಖಂಡಪ್ಪನೋರ್, ನಿರ್ದೇಶಕರಾದ ಬೋಜಣ್ಣಗೌಡ ಯಡ್ಡಳ್ಳಿ, ಬಸವರಾಜ ಕೋಡ್ಲಾ, ಸಾಬರೆಡ್ಡಿ ತಮ್ಮಣೋರ್, ನರಸಪ್ಪ ಇದ್ಲಿ, ಸಾಬಣ್ಣ ಬೊಳೆರ್, ನರಸಪ್ಪ ಭೀಮನಳ್ಳಿ, ಯಲ್ಲಮ್ಮ ತಮ್ಮಣೋರ್, ಭೀಮವ್ವ ಸಮಣಾಪೂರ್ ಮುಂತಾದವರು ಇದ್ದರು.