ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆವರಣದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕೆ ಮಹಾತ್ಮ ಗಾಂಧಿ, ಅಂಬೇಡ್ಕರ್, ಜವಹರಲಾಲ್ ನೆಹರು ಸೇರಿದಂತೆ ಇತರ ಅನೇಕ ಮಹಾನೀಯರ ಹಗಲಿರುಳು ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಆ ವೇಳೆ ಮಾಧ್ಯಮಗಳು ಸಹ ಹೋರಾಟಗಾರ ಮಹನೀಯರ ಜೊತೆ ಇದ್ದುಕೊಂಡು ಅಪಾರ ಕೆಲಸ ಮಾಡಿರುವುದನ್ನು ಸ್ಮರಿಸಬೇಕು ಎಂದರು.
ಇದಕ್ಕೂ ಮುನ್ನ ಪ್ರಾಥಮಿಕ ಶಾಲಾ ಮಕ್ಕಳಿಂದ ದೇಶ ಭಕ್ತಿ ಗೀತೆ, ರಾಷ್ಟ್ರಗೀತೆಗಳ ಮೂಲಕ ದೇಶಕ್ಕಾಗಿ ಪ್ರಾಣ ತೆತ್ತವನ್ನನ್ನು ಸ್ಮರಿಸಲಾಯಿತು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎನ್.ರವೀಶ್ ಗೌಡ ಸೇರಿದಂತೆ ಪದಾದಿಕಾರಿಗಳು ಹಾಗೂ ಸದಸ್ಯರು ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು.ಪ್ರಾರ್ಥನ ಸ್ಕೂಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ:
ಸಬ್ ಇನ್ಸ್ ಪೆಕ್ಟರ್ ರವಿಕುಮಾರ್ ದ್ವಜಾರೋಹಣ ನೆರವೇರಿಸಿ ಮಾತನಾಡಿ, ಬ್ರಿಟಿಷರ ಗುಲಾಮಗಿರಿಯಿಂದ ನಮ್ಮ ದೇಶವನ್ನು ಬಿಡಿಸಲು ಅನೇಕ ಮಹಾನ್ ನಾಯಕರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಅಂತವರ ಹೋರಾಟದ ಫಲವಾಗಿ ಇಂದು ನಾವು ಸ್ವತಂತ್ರ ಭಾರತದಲ್ಲಿ ಉಸಿರಾಡುತ್ತಿದ್ದೇವೆ ಎಂದರು.ಮಹನೀಯರ ತ್ಯಾಗವನ್ನು ನಾವು ಎಂದಿಗೂ ಮರೆಯಬಾರದು. ಮಕ್ಕಳಿಗೆ ಶಿಕ್ಷಕರು ಮಹಾನೀಯರ ಹೋರಟ ತ್ಯಾಗ ಬಲಿದಾನದ ಬಗ್ಗೆ ಮನವರಿಕೆ ಮಾಡಿ ಕೊಡಬೇಕು ಎಂದರು. ಶಾಲಾ ಮಕ್ಕಳು ದೇಶ ಪ್ರೇಮಿಗಳ ವೇಷ ಧರಿಸಿ ಗಮನ ಸೆಳೆದರು.