ಸಾಮಾಜಿಕ ಅಭಿವೃದ್ಧೀಲಿ ಸ್ವಯಂ ಸೇವಾ ಸಂಸ್ಥೆ ಪಾತ್ರ ಅಪಾರ

KannadaprabhaNewsNetwork |  
Published : Aug 31, 2025, 01:09 AM IST
ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಕರ್ನಾಟಕ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ( ಫೆವಾರ್ಡ್-ಕ) ದ ವತಿಯಿಂದ  ಮೈಸೂರು ವಿಭಾಗದ ಆರು ಜಿಲ್ಲೆಗಳ ಸ್ವಯಂ ಸೇವಾ ಸಂಸ್ಥೆಗಳ ಐದು ವರ್ಷಗಳ (೨೦೨೫-೩೦ ರ) ಕಾರ್ಯತಂತ್ರ, ನೀತಿ- ನಿರೂಪಣ ಕಾರ್ಯಗಾರವನ್ನು  ಉದ್ಘಾಟಿಸಿ | Kannada Prabha

ಸಾರಾಂಶ

ಸಾಂಸ್ಕೃತಿಕ, ಸಾಮಾಜಿಕ ಅಭಿವೃದ್ಧಿಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಅಪಾರವಾಗಿದೆ ಎಂದು ಚಾಮರಾಜನಗರ ಹಿರಿಯ ಸಿವಿಲ್ ನ್ಯಾಯಾಧೀಶ ಕೆ. ಈಶ್ವರ್ ಹೇಳಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಸಾಂಸ್ಕೃತಿಕ, ಸಾಮಾಜಿಕ ಅಭಿವೃದ್ಧಿಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಅಪಾರವಾಗಿದೆ ಎಂದು ಚಾಮರಾಜನಗರ ಹಿರಿಯ ಸಿವಿಲ್ ನ್ಯಾಯಾಧೀಶ ಕೆ. ಈಶ್ವರ್ ಹೇಳಿದರು.

ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ( ಫೆವಾರ್ಡ್-ಕ) ವತಿಯಿಂದ ಆಯೋಜಿಸಿದ್ದ ಮೈಸೂರು ವಿಭಾಗದ ಆರು ಜಿಲ್ಲೆಗಳ ಸ್ವಯಂ ಸೇವಾ ಸಂಸ್ಥೆಗಳ ಐದು ವರ್ಷಗಳ (೨೦೨೫-೩೦ ರ) ಕಾರ್ಯತಂತ್ರ, ನೀತಿ- ನಿರೂಪಣಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಅಭಿವೃದ್ಧಿ ಬಡತನ, ಶಿಕ್ಷಣ, ಪರಿಸರ ಸಂರಕ್ಷಣೆ, ಆರೋಗ್ಯ ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಹಿಳೆಯರ ಆರ್ಥಿಕ ಸಬಲೀಕರಣ, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಬೆಂಬಲಿಸುವುದು, ಸಾಂಸ್ಕೃತಿಕ ಕ್ಷೇತ್ರವನ್ನು ಉನ್ನತೀಕರಿಸುವುದು ಹಾಗೂ ಇನ್ನಿತರೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ೫ ವರ್ಷಗಳ ಅವಧಿಯಲ್ಲಿ ಹೇಗೆ ಕೆಲಸಮಾಡಬೇಕು ಎಂದು ಪೇವಾರ್ಡ್-ಕ ಕಾರ್ಯತಂತ್ರ ರೂಪಿಸುತ್ತಿದೆ. ಸಾರ್ವಜನಿಕರಿಗೆ ಹಾಗೂ ನಿರ್ಗತಿಕರಿಗೆ ಸಂಘಟನೆ ಸಹಕಾರಿಯಾಗಲಿ ಎಂದರು.

ನಬಾರ್ಡ್ ಜಿಲ್ಲಾ ಅಭಿವೃದ್ದಿ ವ್ಯವಸ್ಥಾಪಕಿ ಹಿತಾ.ಜಿ.ಸುವರ್ಣ ಮಾತನಾಡಿ, ಸ್ವಯಂ ಸೇವಾ ಸಂಸ್ಥೆಗಳು ಒಗ್ಗೂಡಿ ಸರ್ಕಾರಿ ಯೋಜನೆಗಳು ತಳಮಟ್ಟದಲ್ಲಿ ವಿಸ್ತರಣೆ ಮಾಡಲು ಸ್ವಯಂ ಸೇವಾ ಸಂಸ್ಥೆಗಳು ಸಹಕಾರಿಯಾಗಿದೆ. ಇಂತಹ ಉತ್ತಮ ಕೆಲಸಗಳನ್ನು ಮಾಡಲು ಚಿಂತನೆ ನಡೆಸುತ್ತಿರುವುದು ಅತ್ಯುತ್ತಮ ನಡೆಯಾಗಿದೆ ಎಂದು ಹೇಳಿದರು.

ಫೆವಾರ್ಡ್ -ಕ ಜಿಲ್ಲಾಧ್ಯಕ್ಷ ಕೆ.ಎನ್. ಮಂಟೇಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಫೆವಾರ್ಡ-ಕ.ರಾಜ್ಯಾಧ್ಯಕ್ಷ ಮಹೇಶ್ ಚಂದ್ರಗುರು, ಫೆವಾರ್ಡ್ -ಕ ಕಾರ್ಯಕ್ರಮ ವ್ಯವಸ್ಥಾಪಕಕೃಷ್ಣ ಮೂರ್ತಿ ಎ.ಎಸ್. ಪ್ರೇಮ, ಮೈಸೂರು ವಿಭಾಗೀಯ ನಿರ್ದೇಶಕ ವಿ.ಎನ್. ಮೂರ್ತಿ ಮಾತನಾಡಿದರು.

ಜಿಲ್ಲಾ ಉಪಾಧ್ಯಕ್ಷ ಕದಂಬ.ನಾ.ಅಂಬರೀಷ್, ಫೆವಾರ್ಡ್-ಕ ಸದಸ್ಯೆ ಸುಶೀಲಾ, ಚಾಮರಾಜನಗರ ಗಂಗಾಧರಸ್ವಾಮಿ, ಕಾರ್ಯದರ್ಶಿ ಮುತ್ತುರಾಜ್, ರಮೇಶ್ ಪ್ರಭು, ಡಿ.ಎಸ್ ತಿವಾರಿ, ಶಾಂತರಾಜು, ನಾಗರಾಜು ಸೇರಿದಂತೆ ಮೈಸೂರುವಿಭಾಗದ ೬ ಜಿಲ್ಲೆಗಳ ಅಧ್ಯಕ್ಷರು. ನಿರ್ದೇಶಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಟ್ಟುನಿಟ್ಟು ಮಾಡಿದರೂ ನಿಲ್ಲದ ಪರಪ್ಪನ ಅಗ್ರಹಾರ ಪವಾಡ
ಬೆಂಗಳೂರು : ನಗರದಲ್ಲಿ ನ್ಯಾಯರಥ-ಸಂಚಾರಿ ಕಾನೂನು ಸೇವಾ ಕ್ಲಿನಿಕ್‌