ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಜಿಲ್ಲಾ ಯೋಗಾಸನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಯೋಗಾಚಾರ್ಯ ಎಲ್.ಎಸ್.ಚಿನ್ಮಯಾನಂದ ಅವರ ನೇತೃತ್ವದಲ್ಲಿ ನಗರದ ನೀಲಕಂಠೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಗುರುಪೂರ್ಣಿಮೆಯನ್ನು ಆಚರಿಸಲಾಯಿತು.ಗುರು ಮತ್ತು ಪೂರ್ಣಿಮೆಯ ಔಚಿತ್ಯ ಕುರಿತು ಆಂಗ್ಲ ಭಾಷಾ ನಿವೃತ್ತ ಉಪನ್ಯಾಸಕರು ಹಾಗೂ ಕವಯತ್ರಿಯೂ ಆದ ಸಿ.ಬಿ.ಶೈಲಾ ಜಯಕುಮಾರ್ ಮಾತನಾಡಿ, ಗುರುಪೂರ್ಣಿಮೆಯನ್ನು ವ್ಯಾಸ ಪೂರ್ಣಿಮೆ ಎಂತಲೂ ಸಹ ಕರೆಯುತ್ತೇವೆ. ಏಕೆಂದರೆ ವ್ಯಾಸಮುನಿಗಳ ಶ್ರೇಷ್ಠತೆ ಅಂತಹದ್ದು ಎಂಬ ಅನೇಕ ಅಂಶಗಳಿವೆ. ಕುರುವಂಶದ ಅಭಿವೃದ್ಧಿಗಾಗಿ ವಿಚಿತ್ರವೀರ್ಯನ ವಂಶವನ್ನು ಬೆಳೆಸುವುದರಲ್ಲಿ ವ್ಯಾಸ ಮಹರ್ಷಿಗಳ ಪಾತ್ರ ತುಂಬಾ ದೊಡ್ಡದು. ಮಹಾಭಾರತದ ಯುದ್ಧ 11 ದಿನಗಳು ಏನು ನಡೆಯಿತು, ಅದರ ಪ್ರತಿಯೊಂದು ದಿನದ ವೈಶಿಷ್ಟ್ಯವನ್ನು ಅವರು ತಿಳಿಸಿದ್ದಾರೆ ಎಂದರು.ಅಂತಃಕರಣದಲ್ಲಿ ಅಂಧನಾಗಿ, ಬಾಹ್ಯದಲ್ಲೂ ಸಹ ಅಂಧತೆಯನ್ನು ಹೊಂದಿರುವಂತಹ ದೃತರಾಷ್ಟ್ರನಿಗೆ ಕುರುಕ್ಷೇತ್ರ ಯುದ್ಧ ಮುಗಿಯುವ ದಿನಗಳವರೆಗೆ ದೃಷ್ಟಿಯನ್ನು ನೀಡುವಂತಹ ಸಾಮರ್ಥ್ಯವುಳ್ಳಂತಹ ಗುರುವಾಗಿ ವ್ಯಾಸರಾಯರನ್ನು ನೋಡಬಹುದು. ಯಾವಾಗ ದೃತರಾಷ್ಟ್ರ ತನಗೆ ದೃಷ್ಟಿ ಬೇಡ ಅದನ್ನು ಸಹಚರನಾದ ಸಂಜಯನಿಗೆ ನೀಡುವಂತೆ ಕೇಳಿಕೊಂಡಾಗ ಈಗಿನ ಕಾಲದ ಲೈವ್ ಟೆಲಿಕಾಸ್ಟ್ ಅಂತ ಏನ್ ಹೇಳ್ತಿವಿ ಅದನ್ನ ಅವತ್ತಿನ ದಿನಗಳಲ್ಲಿ ನೀಡಿದಂತಹವರು ಮಹಾನ್ ಋಷಿ ವ್ಯಾಸರು. ಹಾಗೆ ಕುರುಕ್ಷೇತ್ರದ ಕೊನೆಯ ದಿನ ದುರ್ಯೋಧನ ಪಾಂಡವ ವಂಶದ ನಾಶವನ್ನು, ವಿನಾಶವನ್ನು ತಾನು ನೋಡಬೇಕು ಅಂತ ಅಂದುಕೊಂಡು ಅಶ್ವತ್ಥಾಮನಲ್ಲಿ ಕೇಳಿಕೊಂಡಾಗ ಅಶ್ವತ್ಥಾಮ ಪಾಂಡವರ ಸಂತಾನದ ವಿನಾಶಕ್ಕಾಗಿ ಹೂಡಿದ ಬ್ರಹ್ಮಾಸ್ತ್ರವನ್ನು ತಡೆಯುವಂತ ಶಕ್ತಿ ಮತ್ತು ಬ್ರಹ್ಮ ವಿಷ್ಣು ಮಹೇಶ್ವರರ ಶಕ್ತಿ ವ್ಯಾಸಮುನಿಗಳಲ್ಲಿತ್ತು. ಜೇಡರ ಹುಳು ಸಹ ಗುರುವಾಗಿ ಪರಿಣಮಿಸಬಲ್ಲದು ಎಂಬುದಕ್ಕೆ ಕಿಂಗ್ ವುಡ್ ಹಾಗೂ ಸ್ಪೈಡರ್ ಎನ್ನುವ ಚುಟುಕು ಕಥೆಗಳೇ ಸಾಕ್ಷಿ. ಸತತ ಆರು ಬಾರಿ ತನ್ನ ಶತ್ರುಗಳೊಂದಿಗೆ ಸೋತ ಕಿಂಗ್ಸ್ ಗುಡ್ ಒಂದು ಗುಹೆಯಲ್ಲಿ ತನ್ನ ಆಪ್ತ ಸೈನಿಕರೊಂದಿಗೆ ಅವಿತುಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ಅಲ್ಲಿ ಒಂದು ಜೇಡರ ಹುಳು ಬಲೆಯನ್ನು ಹೆಣೆಯುತ್ತಿರುವಂತ ಸಂದರ್ಭದಲ್ಲಿ ಪ್ರತಿ ಬಾರಿಯೂ ಬಲೆ ತುಂಡಾಗಿ ಬೀಳುತ್ತಿತ್ತು. ಆದರೆ ಜೇಡ ಆ ಬಲೆಯನ್ನು ಪುನಃ ಪುನಃ ಹೆಣೆಯೋ ಪ್ರಯತ್ನವನ್ನು ಬಿಡುತ್ತಿರಲಿಲ್ಲ. ಆರು ಬಾರಿ ಪ್ರಯತ್ನದ ನಂತರ 7ನೇ ಬಾರಿ ಬಲೆ ಹೆಣೆಯುವ ಪ್ರಯತ್ನದಲ್ಲಿ ಜೇಡರ ಹುಳು ಯಶಸ್ವಿಯಾಗುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಕಿಂಗ್ಸ್, ಜೇಡರ ಹುಳು ನಡೆಸುತ್ತಿದ್ದ ಪ್ರಯತ್ನ ಹಾಗೂ ಕೆಲಸವನ್ನು ಗಮನಿಸಿ ತನ್ನ ಕಾರ್ಯದಲ್ಲಿ ತಾನು ಸಹ ಪ್ರಯತ್ನಪೂರ್ವಕವಾಗಿ ಶ್ರಮವಹಿಸಿ ಪ್ರಯತ್ನಿಸಿ ಶತ್ರುಗಳ ವಿರುದ್ಧ ಹೋರಾಡಿ ತನ್ನ ಸಾಮ್ರಾಜ್ಯವನ್ನು ಕಾಪಾಡಿಕೊಳ್ಳುತ್ತಾನೆ. ಹೀಗೆ ಒಂದು ಜೇಡರ ಹುಳು ಸಹ ಒಂದು ಗುರುವಾಗಿ ಪರಿಣಮಿಸಬಲ್ಲದು ಎನ್ನುವುದನ್ನು ದೃಷ್ಟಾಂತದ ಮೂಲಕ ತಿಳಿಸಿದರು ಎಂದರು.
ಯೋಗಚಾರ್ಯ ಎಲ್.ಎಸ್.ಚಿನ್ಮಯಾನಂದರು ಮಾತನಾಡಿ, ಇವತ್ತಿನ ಕಾಲಕ್ಕೆ ನಾವು ಹೋಲಿಸಿಕೊಂಡರೆ ಮೊದಲೆಲ್ಲ ಗುರುಕುಲ ಪದ್ಧತಿ ಇತ್ತು. ಅದೇ ರೀತಿ ಶಿಷ್ಯ ಬಳಗ ಕೂಡ ಗುರುವಿಗೆ ಭಕ್ತಿ ಪೂರ್ವಕವಾದ ಗೌರವವನ್ನು ಕೊಡುತ್ತಿದ್ದರು. ಶಿಷ್ಯ ಬೆಳಗ್ಗೆ ಎದ್ದು ಗುರುವಿನ ಹತ್ತಿರ ಹೋಗಿ ವಿದ್ಯೆಯನ್ನು ಕಲಿಯುತ್ತಿದ್ದರು. ಆದರೆ ಇವತ್ತಿನ ದಿನ ಗುರುಗಳೇ ಶಿಷ್ಯರ ಬಳಿ ಹೋಗಿ ವಿದ್ಯೆಯನ್ನು ಕಲಿಸುವಂತಹ ಕಾಲ ಬಂದೊದಗಿದೆ. ಆದ್ದರಿಂದ ಪ್ರತಿಯೊಂದು ಕೆಲಸಕ್ಕೂ ಸಹ ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು, ಗುರು ಇಲ್ಲದ ಕೆಲಸ ಯಾವತ್ತೂ ಸಹ ಪೂರ್ಣಗೊಳ್ಳಲ್ಲ. ಅದೇ ರೀತಿ ಗುರುವಾದವನಿಗೆ ಶಿಸ್ತು, ಸಂಯಮ, ಸಮಯ ಪಾಲನೆ, ಕಲಿಸುವ ವಿಷಯದಲ್ಲಿ ಆಸಕ್ತಿ ಹಾಗೂ ವಿಷಯಜ್ಞಾನ ಮತ್ತು ಅಂದಿನ ತರಗತಿಗೆ ಬೇಕಾಗುವ ಪೂರ್ವ ಸಿದ್ಧತೆ ಇರುವುದು ಅತ್ಯವಶ್ಯಕ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಯೋಗ ಕ್ರೀಡಾ ಸಾಂಸ್ಕೃತಿಕ ಸಂಸ್ಥೆಯ ನಿರ್ದೇಶಕ ರೋಟೇರಿಯನ್ ಟಿ. ವೀರಭದ್ರಸ್ವಾಮಿ, ಭಾವಸಾರ ಕ್ಷತ್ರಿಯ ಮಹಿಳಾ ಸಮಾಜದ ಜಿಲ್ಲಾ ಅಧ್ಯಕ್ಷರಾದ ಮಮತಾ,ಪರಶುರಾಮ್ ಬೇದ್ರೆ, ಕೋಕಿಲಾ ರುದ್ರಮೂರ್ತಿ, ಸುನಿತಾ ಮುರುಳಿ, ನಾಗಚೇತನ್, ವಿಮಲಾಕ್ಷಿ ಮುಂತಾದವರು .