ದೇಶದ ಸದೃಢ ಅರ್ಥವ್ಯವಸ್ಥೆಗೆ ಮಹಿಳೆಯ ಪಾತ್ರ ಮಹತ್ವದ್ದು

KannadaprabhaNewsNetwork |  
Published : Jun 09, 2026, 01:45 AM IST
8ಎಚ್ಎಸ್ಎನ್7 :  | Kannada Prabha

ಸಾರಾಂಶ

ರೈತರಿಗೆ ೧೩.೫ ಕೋಟಿ ರು. ಕೆಸಿಸಿ ಬೆಳೆ ಸಾಲ, ೨೩ ಮಹಿಳಾ ಸ್ವಸಹಾಯ ಸಂಘಗಳಿಗೆ ೧.೩೮ ಕೋಟಿ ರು. ಸಾಲ, ೨.೬೫ ಕೋಟಿ ರು. ಮಧ್ಯಮಾವಧಿ ಸಾಲ, ೨ ಲಕ್ಷ ರು. ಹೈನುಗಾರಿಕೆ ಸಾಲ ನೀಡಲಾಗಿದ್ದು, ಈಗ ಹೆಚ್ಚುವರಿಯಾಗಿ ೩೦೦ ಜನ ರೈತರಿಗೆ ೮೨ ಲಕ್ಷ ರು. ಸಾಲ ಸೇರಿದಂತೆ ಒಟ್ಟು ೧೮ ಕೋಟಿ ರು. ಸಾಲ ನೀಡಲಾಗಿದೆ ಎಂದು ಮಾಹಿತಿ ನೀಡದರು. ಸಹಕಾರ ಸಂಘದಿಂದ ಪಡೆದ ಸಾಲವನ್ನು ಸಕಾಲದಲ್ಲಿ ಕಟ್ಟಬೇಕು. ಆಗ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ. ಈ ಹಿಂದೆ ಹಾಸನ ಜಿಲ್ಲಾ ಕೇಂದ್ರ ಸಹಕಾರ ಸಂಘದಿಂದ ತಾಲೂಕಿನಲ್ಲಿ ಕೇವಲ ೬ರಿಂದ ೭ ಸಾವಿರ ರೈತರಿಗೆ ಮಾತ್ರ ಸಾಲ ನೀಡಲಾಗಿತ್ತು. ನಾನು ನಿರ್ದೇಶಕನಾದ ಬಳಿಕ ೫೧ ಸಾವಿರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗಿದೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ದೇಶದ ಆರ್ಥಿಕ ವ್ಯವಸ್ಥೆ ಸದೃಢವಾಗಿರಲು ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಹೇಳಿದರು.

ತಾಲೂಕಿನ ಶ್ರವಣಬೆಳಗೊಳ ಹೋಬಳಿ ಸುಂಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಯೋಜಿಸಿದ್ದ ರೈತರಿಗೆ ಸಾಲದ ಚೆಕ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರಲ್ಲಿರುವ ಉಳಿತಾಯದ ಮನೋಭಾವನೆ ದೂರದೃಷ್ಟಿ ಹಾಗೂ ತಾಳ್ಮೆಯಿಂದ ಕುಟುಂಬ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಆದ್ದರಿಂದ ಸ್ತ್ರೀಶಕ್ತಿ ಸಂಘಗಳ ಮೂಲಕ ಪ್ರತಿಸಂಘಕ್ಕೆ ೭ ಲಕ್ಷ ರು. ಸಾಲ ಸೌಲಭ್ಯ ನೀಡಿ ಮಹಿಳಾ ಸಬಲೀಕರಣಕ್ಕೆ ಕ್ರಮವಹಿಸಲಾಗಿದೆ ತಿಳಿಸಿದರು. ಮೀಟರ್‌ ಬಡ್ಡಿಯಿಂದ ಜನರು ತತ್ತರಿಸಿದ್ದರು. ಇದನ್ನು ಮನಗಂಡು ಸಹಕಾರ ಸಂಘಗಳಿಂದ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಿದ್ದರಿಂದ ರೈತರಿಗೆ ಅನುಕೂಲವಾಗಿದೆ ಎಂದರು.

ಈ ಸಂಘದಿಂದ ೨೨೨೫ ರೈತರಿಗೆ ೧೩.೫ ಕೋಟಿ ರು. ಕೆಸಿಸಿ ಬೆಳೆ ಸಾಲ, ೨೩ ಮಹಿಳಾ ಸ್ವಸಹಾಯ ಸಂಘಗಳಿಗೆ ೧.೩೮ ಕೋಟಿ ರು. ಸಾಲ, ೨.೬೫ ಕೋಟಿ ರು. ಮಧ್ಯಮಾವಧಿ ಸಾಲ, ೨ ಲಕ್ಷ ರು. ಹೈನುಗಾರಿಕೆ ಸಾಲ ನೀಡಲಾಗಿದ್ದು, ಈಗ ಹೆಚ್ಚುವರಿಯಾಗಿ ೩೦೦ ಜನ ರೈತರಿಗೆ ೮೨ ಲಕ್ಷ ರು. ಸಾಲ ಸೇರಿದಂತೆ ಒಟ್ಟು ೧೮ ಕೋಟಿ ರು. ಸಾಲ ನೀಡಲಾಗಿದೆ ಎಂದು ಮಾಹಿತಿ ನೀಡದರು. ಸಹಕಾರ ಸಂಘದಿಂದ ಪಡೆದ ಸಾಲವನ್ನು ಸಕಾಲದಲ್ಲಿ ಕಟ್ಟಬೇಕು. ಆಗ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ. ಈ ಹಿಂದೆ ಹಾಸನ ಜಿಲ್ಲಾ ಕೇಂದ್ರ ಸಹಕಾರ ಸಂಘದಿಂದ ತಾಲೂಕಿನಲ್ಲಿ ಕೇವಲ ೬ರಿಂದ ೭ ಸಾವಿರ ರೈತರಿಗೆ ಮಾತ್ರ ಸಾಲ ನೀಡಲಾಗಿತ್ತು. ನಾನು ನಿರ್ದೇಶಕನಾದ ಬಳಿಕ ೫೧ ಸಾವಿರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗಿದೆ.

ಜಿಲ್ಲಾ ಸಹಕಾರ ಬ್ಯಾಂಕ್ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಬ್ಯಾಂಕನ್ನು ಸದೃಢಗೊಳಿಸಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕೊಡುಗೆ ಅಪಾರವಾಗಿದೆ. ಅವರು ಲೋಕೋಪಯೋಗಿ ಸಚಿವರಾಗಿದ್ದ ಸಂದರ್ಭದಲ್ಲಿ ಪೈಲೆಟ್ ಯೋಜನೆಯಿಂದ ೩ ಕೋಟಿ ರು. ಸಹಾಯಧನ ನೀಡಿದರ ಫಲವಾಗಿ ಇಂದು ಕೋಟ್ಯಂತರ ರು. ವಹಿವಾಟು ನಡೆಸಲು ಸಾಧ್ಯವಾಗಿದೆ. ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ ೧೫೦ ಕೋಟಿ ರು.ಇದ್ದ ಠೇವಣಿಯನ್ನು ೫೦೦ ಕೋಟಿ ರು. ಠೇವಣಿ ಸಂಗ್ರಹಿಸಲಾಯಿತು. ಪ್ರಸ್ತುತ ೧೩೦೦ ಕೋಟಿ ರು. ಠೇವಣಿ ಸಂಗ್ರಹವಾಗಿದ್ದು, ಎಲ್ಲರ ಸಹಕಾರದಿಂದ ೨೦೨೫-೨೬ನೇ ಸಾಲಿನಲ್ಲಿ ೧೪ ಕೋಟಿ ರು. ಲಾಭಗಳಿಸಿದೆ ಎಂದು ತಿಳಿಸಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಪರಮ ದೇವರಾಜೇಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಪರಮ ಕೃಷ್ಣೇಗೌಡ, ತಾ.ಪಂ. ಮಾಜಿ ಸದಸ್ಯ ಎಸ್.ಎನ್. ಜಯರಾಮ್ ಸಂಘದ ಅಧ್ಯಕ್ಷ ಹರೀಶ್, ಉಪಾಧ್ಯಕ್ಷ ಎಸ್.ಎಚ್. ಮಂಜುನಾಥ್, ಬಿ. ಕೃಷ್ಣಮೂರ್ತಿ, ಎಚ್.ಎಸ್. ದಿವಾಕರ್‌, ಎಸ್.ಬಿ. ನಂದಕುಮಾರ್, ಅಣ್ಣಯ್ಯ, ಮಾಜಿ ಅಧ್ಯಕ್ಷರಾದ ರಮೇಶ್ ಹೊಸಹಳ್ಳಿ, ರಾಮಸ್ವಾಮಿ, ನಂಜೇಗೌಡ, ಶಾಂತರಾಜ್, ಮಂಜಣ್ಣ, ಶಿವಕುಮಾರ್‌, ಮಂಜೇಗೌಡ, ರವಿಕುಮಾರ್, ಪಾಲಾಕ್ಷ, ಸೋಮೇಗೌಡ, ಬ್ಯಾಂಕ್ ಮೇಲ್ವಿಚಾರಕರು ಎಸ್‌.ಆರ್‌. ಮಧು, ಎಸ್. ಎಂ. ಮಧು, ಪವಿತ್ರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿ ಸುಧಾಕರ್ ಮಾನವೀಯ ವ್ಯಕ್ತಿತ್ವ ಅಜರಾಮರ: ಡಾ.ಸಿ ಶಿವಲಿಂಗಪ್ಪ
ಎಸ್‌ಐಆರ್ ಮ್ಯಾಪಿಂಗ್ ಕುರಿತು ತರಬೇತಿ