ಸಂಸ್ಕೃತಿಯ ಬೇರು ಗಟ್ಟಿಗೊಳಿಸಬೇಕು: ಸಿ.ಟಿ.ರವಿ

KannadaprabhaNewsNetwork |  
Published : Jan 18, 2025, 12:47 AM IST
ಚಿಕ್ಕಮಗಳೂರಿನ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ’ಮಹಿಳಾ ರತ್ನ’ ಪ್ರಶಸ್ತಿಯನ್ನು ಜಿ.ಸುಧಾ ಚಂದ್ರಮೌಳಿ ಮತ್ತು ಆಶಾ ಹೇಮಂತಕುಮಾರ್ ಅವರಿಗೆ ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಅವರು ಪ್ರದಾನ ಮಾಡಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ವ್ಯಕ್ತಿಗತ ಲಾಭ ನಷ್ಟದ ಲೆಕ್ಕಚಾರದಲ್ಲಿ ಸಮಾಜ ಜೀವನ ದುರ್ಬಲಗೊಳ್ಳುತ್ತಿದೆ. ಸಂಸ್ಕೃತಿ ಬೇರುಗಳನ್ನು ಗಟ್ಟಿಗೊಳಿಸುವ ಕಾರ್‍ಯ ವ್ಯಾಪಕಗೊಳ್ಳಬೇಕೆಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.

ಸುಧಾ ಮತ್ತು ಆಶಾಗೆ ಸುವರ್ಣಾದೇವಿ ಮಹಿಳಾ ರತ್ನ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವ್ಯಕ್ತಿಗತ ಲಾಭ ನಷ್ಟದ ಲೆಕ್ಕಚಾರದಲ್ಲಿ ಸಮಾಜ ಜೀವನ ದುರ್ಬಲಗೊಳ್ಳುತ್ತಿದೆ. ಸಂಸ್ಕೃತಿ ಬೇರುಗಳನ್ನು ಗಟ್ಟಿಗೊಳಿಸುವ ಕಾರ್‍ಯ ವ್ಯಾಪಕಗೊಳ್ಳಬೇಕೆಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.

ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ, ಜಂಗಮ ಬಳಗ ಮತ್ತು ಶ್ರೀ ಪಾರ್ವತಿ ಮಹಿಳಾ ಮಂಡಳಿ ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಶ್ರೀ ಸುವರ್ಣಾದೇವಿ ಸಂಸ್ಮರಣಾ ಹಿನ್ನಲೆಯಲ್ಲಿ ಸಂಸ್ಕೃತಿ ರಕ್ಷಣೆಯಲ್ಲಿ ತೊಡಗಿರುವ ಸಾಧಕ ಮಹಿಳೆ ಯರಿಗೆ ನೀಡುವ ಮಹಿಳಾ ರತ್ನ ಪ್ರಶಸ್ತಿಯನ್ನು ಶ್ರೀದೇವಿ ಚಾರಿಟೇಬಲ್ ಟ್ರಸ್ಟ್ ಕಾರ್‍ಯದರ್ಶಿ ಜಿ.ಸುಧಾ ಚಂದ್ರಮೌಳಿ ಮತ್ತು ಅಕ್ಕನ ಬಳಗದ ಕಾರ್‍ಯದರ್ಶಿ ಆಶಾ ಹೇಮಂತಕುಮಾರ್ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆ ತರುವ ಕೆಲಸ ವೈಯಕ್ತಿಕ ನೆಲೆಯಲ್ಲಿ ಸಣ್ಣ ಪ್ರಮಾಣದಲ್ಲಾದರೂ ಆಗಬೇಕು. ಸತ್ಯ ಮತ್ತು ಸೇವೆ ತಳಹದಿಯ ಜೀವನ ಪದ್ಧತಿ ನಮ್ಮದು. ಧರ್ಮಿಷ್ಠರಾದವರು ಜಗತ್ತಿಗೆ ಒಳಿತನ್ನೆ ಮಾಡುತ್ತಾರೆ. ಪಾಶ್ಚಾತ್ಯರು ಮಾತ್ರ ಮತಾಂಧರಾಗಲು ಸಾಧ್ಯ. ಒಳಿತನ್ನು ಗುರುತಿಸಿ, ಪ್ರೇರೇಪಿಸುವ ಕಾರ್‍ಯ ಮಹಾ ತಾಯಿ ಹೆಸರಿನಲ್ಲಿ ನಿರಂತರವಾಗಿ ನಡೆಯುತ್ತಿರುವುದು ಮಾದರಿ ಎಂದರು. ಅಂಧ ಅನುಕರಣೆ, ಬೇಡದ ಆಚರಣೆ ಇಂದು ನಮ್ಮನ್ನು ಹೆಚ್ಚಾಗಿ ಆಕರ್ಷಿಸುತ್ತಿರುವುದು ಆತಂಕದಾಯಕ. ವ್ಯಕ್ತಿಗತ ಲಾಭ ನಷ್ಟವೇ ಹೆಚ್ಚಾಗಿ ಸಮಾಜ ಹಿತ ಗಮನಿಸದಿರುವ ಸಂಗತಿ ಸುತ್ತಲೂ ಕಾಣುತ್ತಿದ್ದೇವೆ. ಶುಭಾಶಯಗಳನ್ನು ಕೋರುವುದು ತಪ್ಪಲ್ಲ. ಆದರೆ ದೀಪ ಆರಿಸುವುದು ಅಮಂಗಳಕರ. ತಂದೆ ತಾಯಿಯರಿಗೆ, ಗುರು ಹಿರಿಯರಿಗೆ ನಮಸ್ಕರಿಸುವುದು ನಮ್ಮ ಸಂಪ್ರದಾಯ. ಇದರಲ್ಲಿ ನಮ್ಮ ಅಹಂಕಾರ ಕಳೆದುಕೊಳ್ಳುವ ಜೊತೆಗೆ ಆಶೀರ್ವಾದ ಪಡೆದಂತಾಗುತ್ತದೆ ಎಂದು ಹೇಳಿದರು.

ಸಂಸ್ಕೃತಿ ಹೆಸರಿನಲ್ಲಿ ವಿಕೃತಿ ವಿಜೃಂಭಿಸಬಾರದು. ಸೈನ್ಯದೊಳಗೆಲ್ಲ ಸಂಸ್ಕೃತಿನಾಶರು, ಪೊಲೀಸ್ ವ್ಯವಸ್ಥೆ ಯಲ್ಲಿ ಅನ್ಯಾಯ ಮಾಡುವವರೆ ಸೇರಿದರೆ, ಮತಾಂಧರೆ ತೀರ್ಪು ಕೊಡುವ ಸ್ಥಾನಗಳಲ್ಲಿ ನಿಂತರೆ ಭಾರತದ ತಾಲಿಬಾಲೀಕರಣ ತಡವಾಗದು ಎಂದರು.

ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ, ಗಮಕಿ ಸಾಧ್ವಿ ಸುವರ್ಣಾದೇವಿ ಸದಾಶಿವಶಾಸ್ತ್ರಿ ಅವರ ಹೆಸರಿನಲ್ಲಿ ಎಲೆಮರೆಕಾಯಿಯಂತೆ ಸಮಾಜಮುಖಿ ಕೆಲಸ ಮಾಡುವ ಮಹಿಳೆಯರನ್ನು ಕಳೆದ 10 ವರ್ಷಗಳಿಂದ ಮಹಿಳಾ ರತ್ನ ಪುರಸ್ಕಾರದೊಂದಿಗೆ ಗುರುತಿಸಿ ಗೌರವಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಜುವಳ್ಳಿ ಹಿರೇಮಠದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವದಿಸಿದರು. ಶ್ರೀದೇವಿ ಗುರು ಕುಲದ ಸಂಸ್ಥಾಪಕ ಡಾ.ದಯಾನಂದಮೂರ್ತಿ ಶಾಸ್ತ್ರಿ ಪ್ರಶಸ್ತಿ ಪತ್ರ ವಾಚಿಸಿದರು.

ಹಾಸನದ ಮಂಜುನಾಥ, ಆಲೂರಿನ ಯಶವಂತ, ಶ್ರೀಪಾರ್ವತಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಮಿತ್ರಾ ಶಾಸ್ತ್ರಿ, ಕಾರ್‍ಯದರ್ಶಿ ಭವಾನಿ ವಿಜಯಾನಂದ, ವೀರಶೈವ ಲಿಂಗಾಯತ ಜಾಗೃತ ವೇದಿಕೆ ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ಗೀತಾ ಬಾಲಿ ಉಪಸ್ಥಿತರಿದ್ದರು. 17 ಕೆಸಿಕೆಎಂ 2ಚಿಕ್ಕಮಗಳೂರಿನ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ’ಮಹಿಳಾ ರತ್ನ’ ಪ್ರಶಸ್ತಿಯನ್ನು ಜಿ.ಸುಧಾ ಚಂದ್ರಮೌಳಿ ಮತ್ತು ಆಶಾ ಹೇಮಂತಕುಮಾರ್ ಅವರಿಗೆ ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಪ್ರದಾನ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!