ಹೊಸದುರ್ಗ: ಚಿಕ್ಕ ವಯಸ್ಸಿನಲ್ಲಿ ನೀಡುವ ಶಿಕ್ಷಣ, ಸಂಸ್ಕಾರ ಮಕ್ಕಳು ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ನೇರವಾಗುತ್ತದೆ. ಅಕ್ಷರವನ್ನು ಎಲ್ಲರೂ ಕಲಿಸುತ್ತಾರೆ ಆದರೆ ಅಭಿನಯದ ಮೂಲಕ ಕಲೆಯನ್ನು ಪ್ರದರ್ಶಿಸುವಂತೆ ಹೇಳಿಕೊಡುವುದು ಕಷ್ಟದ ಕೆಲಸ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.
ನಾಡಿನ ಸಂಸ್ಕೃತಿ, ಸಂಸ್ಕಾರ ಅನಾವರಣ ಜೊತೆಗೆ ಮಕ್ಕಳ ಪ್ರತಿಭೆ ಗುರುತಿಸುವ ಕಾರ್ಯಕ್ರಮ ಇದಾಗಿದೆ. ಇತಿಹಾಸ, ಸಂಸ್ಕೃತಿ ಗೆ ನಮ್ಮ ನಾಡು ಹೆಸರು ವಾಸಿಯಾಗಿದೆ. ಚಿಕ್ಕ ಮಕ್ಕಳಿಗೆ ನೀಡುವ ಸಂಸ್ಕಾರ ಶಾಶ್ವತವಾಗಿ ನೆಲೆಯೂರುತ್ತದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.
ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಶುಭಾಶಯ ತಿಳಿಸಿದ ಅವರು, ಚುನಾವಣೆಯಲ್ಲಿ ಸೋಲು- ಗೆಲುವು ಸಾಮಾನ್ಯ. ಸೋತವರು, ಗೆದ್ದವರು ಇಬ್ಬರು ಸರ್ಕಾರಿ ನೌಕರರು ಎಂಬುದನ್ನು ಮರೆಯಬಾರದು. ಎಲ್ಲರೂ ಒಗ್ಗಟ್ಟಾಗಿ ಸಂಘದ ಕೆಲಸ ಮಾಡಬೇಕು. ಸರ್ಕಾರದ ಆಡಳಿತ ಯಂತ್ರ ಸರ್ಕಾರಿ ನೌಕರರ ಕೈಯಲ್ಲಿದೆ. ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತರಬಹುದು. ಆದರೆ ಅವುಗಳನ್ನು ಅನುಷ್ಠಾನ ಗೊಳಿಸುವ ಜವಾಬ್ದಾರಿ ಸರ್ಕಾರಿ ನೌಕರರ ಮೇಲಿದೆ ಎಂದರು.ಇದೇ ವೇಳೆ ಸರ್ಕಾರಿ ನೌಕರರ ಚುನಾವಣೆಯಲ್ಲಿ ಆಯ್ಕೆಯಾದ ನಿರ್ದೇಶಕರುಗಳನ್ನು ಶಾಸಕರು ಸನ್ಮಾನಿಸಿದರು.ಸಂತ ಅಂಥೋನಿ ಶಾಲೆ ಆಡಳಿತ ಅಧಿಕಾರಿ ವಿಕ್ಟರ್ ಪಾಯಿಸ್, ಕ್ಷೇತ್ರ ಸಮನ್ವಯ ಅಧಿಕಾರಿ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಮೋಸಿನ್ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಾಂತಪ್ಪ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ, ಬಡ್ತಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಶೇಖರಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಹರೀಶ್, ಶಿಕ್ಷಣ ಸಂಯೋಜಕ ಶಶಿಧರ್, ಕೆಂಚಪ್ಪ, ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಪ್ರಶಾಂತ್, ಕರ್ನಾಟಕ ರಾಜ್ಯ ನೌಕರರ ಸಂಘದ ನೂತನವಾಗಿ ಆಯ್ಕೆಯಾದ ಶಾಂತಪ್ಪ, ದಿವಾಕರ್, ಬಸವರಾಜ್, ಅನಂತ ಮೂರ್ತಿ, ತಿಪ್ಪಯ್ಯ, ಮಲ್ಲೇಶಪ್ಪ, ಹೇಮಂತ್ ಹಾಜರಿದ್ದರು.