ಇಳಕಲ್ಲ ಸೀರೆಯಂತೆ ಕಂಗೊಳಿಸುತ್ತಿರುವ ಸಖಿ ಮತಗಟ್ಟೆ

KannadaprabhaNewsNetwork |  
Published : May 07, 2024, 01:09 AM IST
೬ ಇಳಕಲ್ಲ ೨ ರಲ್ಲಿ | Kannada Prabha

ಸಾರಾಂಶ

ಇಳಕಲ್ಲ: ಮಂಗಳವಾರ ನಡೆಯಲಿರುವ ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಇಳಕಲ್ಲ ನಗರಸಭೆಯಲ್ಲಿ ಸ್ಥಾಪಿಸಲಾಗಿರುವ ಸಖಿ ಮತಗಟ್ಟೆ ವಿ಼ಶೇಷ ಅಲಂಕಾರದಿಂದ ಕಂಗೊಳಿಸುತ್ತಿದೆ.ಮತಗಟ್ಟೆಯನ್ನು ಇಳಕಲ್ಲ ಸೀರೆಗಳಿಂದ ಅಲಂಕಾರ ಮಾಡಲಾಗಿದ್ದು, ಇಳಕಲ್ಲ ನಗರದ ನೇಕಾರರ ಬಳಿ ಸಂಗ್ರಹಿಸಿದ ಸೀರೆಗಳನ್ನಿಟ್ಟು ಸಿಂಗಾರ ಮಾಡಿದ್ದಾರೆ. ಜೊತೆಗೆ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿ ಇಳಕಲ್ಲ ಸೀರೆಯುಟ್ಟು ಕೈ ಮುಗಿದು ಮತದಾರರನ್ನು ಸ್ವಾಗತಿಸಲಿದ್ದಾರೆ.

ಇಳಕಲ್ಲ: ಮಂಗಳವಾರ ನಡೆಯಲಿರುವ ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಇಳಕಲ್ಲ ನಗರಸಭೆಯಲ್ಲಿ ಸ್ಥಾಪಿಸಲಾಗಿರುವ ಸಖಿ ಮತಗಟ್ಟೆ ವಿ಼ಶೇಷ ಅಲಂಕಾರದಿಂದ ಕಂಗೊಳಿಸುತ್ತಿದೆ.

ಮತಗಟ್ಟೆಯನ್ನು ಇಳಕಲ್ಲ ಸೀರೆಗಳಿಂದ ಅಲಂಕಾರ ಮಾಡಲಾಗಿದ್ದು, ಇಳಕಲ್ಲ ನಗರದ ನೇಕಾರರ ಬಳಿ ಸಂಗ್ರಹಿಸಿದ ಸೀರೆಗಳನ್ನಿಟ್ಟು ಸಿಂಗಾರ ಮಾಡಿದ್ದಾರೆ. ಜೊತೆಗೆ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿ ಇಳಕಲ್ಲ ಸೀರೆಯುಟ್ಟು ಕೈ ಮುಗಿದು ಮತದಾರರನ್ನು ಸ್ವಾಗತಿಸಲಿದ್ದಾರೆ. ಮತ ಚಲಾವಣೆಗೆ ಬರುವ ಮತದಾರರಿಗೆ ತಂಪಾದ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಹಾಗೂ ವೈದ್ಯಕೀಯ ಸೇವೆಯ ವ್ಯವಸ್ಥೆಯನ್ನೂ ಮಾಡಲಾಗಿದೆ. ಇಳಕಲ್ಲ ನಗರದಲ್ಲಿ ಎರಡು ಸಖಿ ಮತಗಟ್ಟೆಗಳನ್ನು ಚುನಾವಣೆ ಆಯೋಗ ಮಾಡಿದೆ. ಒಂದು ನಗರಸಭೆಯಲ್ಲಿ ಇನ್ನೊಂದು ಸಜ್ಜನ ಶಾಲೆಯಲ್ಲಿ ಸ್ಥಾಪಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ರಮ ಡ್ರಗ್ಸ್‌ ವಾಸನೆ ತಡೆಗೆ ನಾಯಿಗಳ ಮಲಮೂತ್ರ!
ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಭರದ ಸಿದ್ಧತೆ