ನಾಡಿಗೆ ಮುಂಡರಗಿ ಶ್ರೀಮಠದ ಸೇವೆ ಅಪಾರ- ಮಹಾದೇವ ಸ್ವಾಮೀಜಿ

KannadaprabhaNewsNetwork |  
Published : Nov 13, 2024, 12:07 AM IST
11ಕೆಪಿಎಲ್25 ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮದ ನೂತನ ಅನ್ನದಾನೀಶ್ವರ ಶಾಖಾಮಠದ ಉದ್ಘಾಟನಾ ಅಂಗವಾಗಿ ಪ್ರವಚನ ಕಾರ್ಯಕ್ರಮ | Kannada Prabha

ಸಾರಾಂಶ

ಮುಂಡರಗಿ ಶ್ರೀಮಠದ ಸೇವೆ ಈ ನಾಡಿಗೆ ಅಪಾರವಾಗಿದೆ.

ನೂತನ ಅನ್ನದಾನೀಶ್ವರ ಶಾಖಾಮಠದ ಉದ್ಘಾಟನಾ ಅಂಗವಾಗಿ ಪ್ರವಚನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಪ್ಪಳ

ಈ ನಾಡಿನ ವೀರಶೈವ ಮಠಗಳು ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕವಾಗಿ ಸಾಕಷ್ಟು ಸೇವೆ ನೀಡಿವೆ, ಆ ಮಠಗಳ ಸಾಲಿನಲ್ಲಿ ಮುಂಡರಗಿ ಅನ್ನದಾನೀಶ್ವರ ಮಠ ಕೂಡ ಒಂದು ಎಂದು ಕುಕನೂರು-ಬೆಟಗೇರಿ ಶ್ರೀ ಶಾಖಾಮಠದ ಮಹಾದೇವ ಸ್ವಾಮೀಜಿ ಹೇಳಿದರು.

ತಾಲೂಕಿನ ಬೆಟಗೇರಿ ಗ್ರಾಮದ ನೂತನ ಅನ್ನದಾನೀಶ್ವರ ಶಾಖಾಮಠದ ಉದ್ಘಾಟನಾ ಅಂಗವಾಗಿ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಮುಂಡರಗಿ ಶ್ರೀಮಠದ ಸೇವೆ ಈ ನಾಡಿಗೆ ಅಪಾರವಾಗಿದೆ. ಸದ್ಯದ ಜಗದ್ಗುರು ಮಹಾಸನ್ನಿಧಿಯವರು ಈ ನಾಡು ಕಂಡ ಅಪರೂಪದ ಶಿವಯೋಗಿ ಮತ್ತು ಪೂಜ್ಯರು ತಮ್ಮ‌ ಮಠದ ಮೂಲಕ 250ಕ್ಕೂ ಹೆಚ್ಚು ಕೃತಿಗಳನ್ನ ಈ ನಾಡಿಗೆ ನೀಡಿದ್ದಾರೆ, ಈ ನಾಡೆ ಗೌರವಿಸುವಂತಿದೆ ಎಂದರು.

ನಂತರ ಮಾತನಾಡಿದ ಗ್ರಾಮದ ಹಿರಿಯ ಗುರುಬಸಯ್ಯ ಬಿ.ಎಂ., ಗ್ರಾಮಗಳ ಜನರು ಸಂಸ್ಕಾರವಂತರಾಗಲು ಪುರಾಣ, ಪುಣ್ಯ ಕಥೆಗಳು ಅವಶ್ಯ. ಎಲ್ಲ ವರ್ಗದ ಜನರನ್ನ ಒಂದೆಡೆ ಸೇರಿಸುವ ಕಾರ್ಯಗಳನ್ನು ಪುರಾಣ ಮಾಡುತ್ತದೆ ಎಂದರು.

ಕುಮಾರ ಶಾಸ್ತ್ರೀ ತೊಳಲಿ ಪ್ರವಚನ ಸೇವೆ ಮಾಡಿದರು.

ಈ ಸಂದರ್ಭ ಹಿರೇಸಿಂದೋಗಿ ಚಿದಾನಂದ ಮಹಾಸ್ವಾಮಿಗಳು, ಗ್ರಾಪಂ ಅಧ್ಯಕ್ಷ ದುರುಗಪ್ಪ ಭಜಂತ್ರಿ, ಸದಸ್ಯ ನವೀನ ಮಾದಿನೂರು, ವೀರಣ್ಣ ಬಳ್ಳೊಳ್ಳಿ, ಮಲ್ಲಪ್ಪ ಗದ್ದಿ, ಮುತ್ತಯ್ಯ ಹಿರೇಮಠ, ಸೋಮಪ್ಪ ಮತ್ತೂರು, ಚನ್ನಬಸಪ್ಪ ಕೊಪ್ಪಳ, ಶರಣಪ್ಪ ಹಿಕ್ಕೆರಿ, ಮೇಘರಾಜ ಚಿಂಚಳಿ, ಮಲ್ಲಪ ಶಿವಶಿಂಪರ, ಬಸವರಾಜ ನಾಗರಡ್ಡಿ ಮತ್ತು ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ