ಅನ್ನ, ಅಕ್ಷರ ದಾಸೋಹಕ್ಕೆ ಶ್ರೀಗಳ ಸೇವೆ ಅನನ್ಯ

KannadaprabhaNewsNetwork |  
Published : Mar 14, 2025, 12:31 AM IST
13ಎಚ್ಎಸ್ಎನ್4 : ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿಗಳಿಗೆ ಪುಷ್ಪಆರ್ಚನೆ ಮಾಡಲಾಯಿತು. | Kannada Prabha

ಸಾರಾಂಶ

ವೀರಶೈವ ಲಿಂಗಾಯಿತ ಸಮುದಾಯದಲ್ಲಿ ಗುರುವಿಗೆ ಮಹತ್ವದ ಸ್ಥಾನ ನೀಡಲಾಗಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರವೀರಶೈವ ಲಿಂಗಾಯಿತ ಸಮುದಾಯದಲ್ಲಿ ಗುರುವಿಗೆ ಮಹತ್ವದ ಸ್ಥಾನ ನೀಡಲಾಗಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯಿತ ಯುವ ಸೇನೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಾ. ಶ್ರೀ ಶಿವಕುಮಾರ್ ಸ್ವಾಮಿಗಳ 6ನೇ ಪುಣ್ಯ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.ಬದುಕು ಪಾವನಗೊಳ್ಳಬೇಕಾದರೆ ಗುರುವಿನ ಮಾರ್ಗಧರ್ಶನ ಅಗತ್ಯ. ಶ್ರೀ ಶಿವಕುಮಾರ ಸ್ವಾಮೀಜಿಗಳ ಬದುಕು ಸಮಾಜಕ್ಕೆ ಅರ್ಪಿತಗೊಂಡಿದ್ದು ಅವರ ಬದುಕನ್ನು ಕಂಡ ನಾವೇ ಪುಣ್ಯವಂತರು. ಆರೋಗ್ಯದಿಂದ ಬಹುಕಾಲ ಬದುಕಿದವರನ್ನು ಚಿರಂಜೀವಿ ಎನ್ನಲಾಗುತ್ತದೆ. ಇಂತಹ ಬದುಕನ್ನು ಬದುಕಿದ ಶ್ರೀಗಳು ಸಹ ಚಿರಂಜೀವಿಗಳು. ರಾಜ್ಯದಲ್ಲಿ ಅನಕ್ಷರತೆ ಹಾಗೂ ಬಡತನ ತಾಂಡವವಾಡುತ್ತಿದ್ದ ವೇಳೆ ಅನ್ನ ಹಾಗೂ ಅಕ್ಷರ ದಾಸೋಹ ಆರಂಭಿಸಿದ ಶ್ರೀಗಳ ಸೇವೆ ಅನನ್ಯ. ಗ್ರಾಮೀಣ ಭಾಗದಲ್ಲಿ ಶಾಲೆಗಳ ಸ್ಥಾಪನೆಯ ಉದ್ದೇಶ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶ ಅಡಗಿತ್ತು. ಉದ್ದಾನ ಸ್ವಾಮಿಜಿಗಳ ಆರಂಭಿಸಿದ ಹಾಸ್ಟೆಲ್‌ಗಳಲ್ಲಿ ಸಹ ಯಾವುದೆ ಜಾತಿ ಮತವಿರಲಿಲ್ಲ. ಇವರು ಹಾಕಿಕೊಟ್ಟ ಪಂಕ್ತಿಯಲ್ಲೆ ಸಾಗಿದ ಕೀರ್ತಿ ಶ್ರೀ ಶಿವಕುಮರ್ ಸ್ವಾಮೀಜಿಗಳಿಗೆ ಸಲ್ಲುತ್ತದೆ. ಸಂಸ್ಕಾರಯುತ ಶಿಕ್ಷಣ ನೀಡುವ ಗುರಿಯೊಂದಿಗೆ ಸಿದ್ದಗಂಗಾ ಮಠ ಕೆಲಸ ಮಾಡುತ್ತಿದೆ. ದೇಶದ ಸಂಪತ್ತು ಯುವಕರು. ಯುವಕರ ಶಕ್ತಿ ಸದೃಢ ಸಮಾಜ ನಿರ್ಮಾಣಕ್ಕೆ ವಿನಿಯೋಗವಾಗಬೇಕು ಎಂದರು.ತಾಲೂಕಿನ ವನ್ಯಜೀವಿಗಳ ಹಾಗೂ ಮಾನವ ಸಂಘರ್ಷದ ಬಗ್ಗೆ ಅರಿವಿದೆ. ಕಾಡುಪ್ರಾಣಿಗಳು ನಾಡಿಗೆ ಬರುಲಾರಂಬಿಸಿದ್ದು ಮಠದಲ್ಲೂ ಸಹ ಚಿರತೆ ಕಾಟ ಆರಂಭವಾಗಿದೆ. ಸಮಸ್ಯೆ ನೀಡುತ್ತಿರುವ ವನ್ಯಜೀವಿಗಳನ್ನು ಹಿಡಿದು ಪುನರ್ ವಸತಿ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಈ ಬಗ್ಗೆ ಸರ್ಕಾರೆದ ಗಮನ ಸೇಳೆಯಲಾಗುತ್ತಿದೆ. ವನ್ಯಜೀವಿಗಳಿಂದ ಮಾನವ ಪ್ರಾಣ ಹಾನಿಯಾಗದಂತೆ ನಿಗಾ ವಹಿಸಬೇಕು ಎಂದರು.

ಕೃತಜ್ಞತೆ ಮಾನವನಿಗೆ ಅಗತ್ಯವಾಗಿರ ಬೇಕು ಹೊರತು ಕೃತಘ್ನರಾಗ ಬಾರದು ಸಹಾಯ ಮಾಡುವುವರನ್ನು ಎಂದು ಮರೆಯಬಾರದು. ಉದ್ಯೋಗ ನಿಮಿತ್ತ ನಗರಗಳಿಗೆ ತೆರಳುವ ಯುವಕರು ಎಂದಿಗೂ ಹುಟ್ಟೂರು ಮರೆಯಬಾರದು. ಕಾಫಿಬೆಳೆಗಾರರ ಸಮಸ್ಯೆ ಸಹ ನನ್ನ ಅರವಿಗಿದ್ದು ಸಮಸ್ಯೆ ನಡುವೆ ಬದುಕುವನ್ನು ಕಲಿಯಬೇಕು. ಬೆಲೆ ಇದ್ದಾಗ ಬೆಳೆ ಇಲ್ಲದಿರುವುದು ಹಾಗೂ ಬೆಳೆ ಇದ್ದಾಗ ಬೆಲೆ ಇಲ್ಲದಿರುವುದು ಪ್ರಕೃತಿ ನಿಯಮ ಎಂದರು.ತೆಂಕಲಗಗೋಡು ಶ್ರೀ ಚನ್ನಸಿದ್ದೇಶ್ವರ ಶಿವಚಾರ್ಯ ಸ್ವಾಮಿಜಿ ಆಶೀವರ್ಚನ ನೀಡಿ, ಸರ್ಕಾರ ಶಿಕ್ಷಣ ನೀಡಬೇಕು ಎಂಬ ಆಲೋಚಿಸುವ ಮುನ್ನವೇ ಮಠಮಾನ್ಯಗಳು ಸಂಸ್ಕಾರಯುತ ಶಿಕ್ಷಣ ನೀಡುತ್ತಿದ್ದವು ಇದರಿಂದಾಗಿ ರಾಜ್ಯದ ಸಾಕಷ್ಟು ಜನರು ವಿದ್ಯಾವಂತರಾಗಲು ಸಾಧ್ಯವಾಗಿದೆ. ಯಾವುದೆ ಜಾತಿ, ಮತದ ತಾರತಮ್ಯವಿಲ್ಲದೆ ಶಿಕ್ಷಣ ನೀಡುತ್ತಿರುವ ಮಠ ಸಿದ್ದಗಂಗೆ. ಸಮಾಜಕ್ಕಾಗಿ ಬದುಕುವವರು ಮಹತ್ಮಾರಾಗುತ್ತಾರೆ. ಸ್ವಂತಕ್ಕಾಗಿ ಬದುಕುವವರ ನೆನೆಪು ನಶ್ವರವಾಗಿರಲಿದೆ. ಆದ್ದರಿಂದ, ಮರಣದ ನಂತರವು ಬದುಕ ಬೇಕು ಎಂದರೆ ನಿಶ್ವಾರ್ಥ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಸಿದ್ದಗಂಗೆ ಮಠದ ಶ್ರೀ ಶಿವಕುಮಾರಸ್ವಾಮಿಜಿಗಳ ಜೀವನವನ್ನು ವರ್ಣನೆ ಮಾಡುವುದು ಅಸಾಧ್ಯದ ಕೆಲಸ. ಧರ್ಮ ಎಂಬುದು ಕನ್ನಡಿ ಇದ್ದಂತೆ ಆದ್ದರಿಂದ ನಿತ್ಯ ಧರ್ಮ ಪರಿಪಾಲನೆಯಲ್ಲಿ ತೊಡಗಿಕೊಳ್ಳುವುದು ಅಗತ್ಯ ಎಂದರು. ಈ ವೇಳೆ ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ, ಕಲ್ಲಮಠದ ಮಹಾಂತ ಸ್ವಾಮೀಜಿ, ತಣ್ಣೀರುಹಳ್ಳ ಮಠದ ವಿಜಯಕುಮಾರ್ ಸ್ವಾಮೀಜಿ, ವೀರಶೈವ-ಲಿಂಗಾಯಿತ ಯುವ ಸೇನೆಯ ಅಧ್ಯಕ್ಷ ಜಾನೇಕೆರೆ ಸಾಗರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!