ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಹೊಸೂರನ ಪದ್ಮಾವತಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾ, ವೈದ್ಯರ ಮತ್ತು ಲೆಕ್ಕ ಪರಿಶೋಧರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೈದ್ಯರು ತಮ್ಮ ವೃತ್ತಿಯ ಮೂಲಕ ಜನರ ಆರೋಗ್ಯ ಕಾಪಾಡಿದರೆ, ಲೆಕ್ಕ ಪರಿಶೋಧಕರು ದೇಶದ ಆರ್ಥಿಕ ಪರಿಸ್ಥಿತಿ ನಿರ್ಹಹಿಸುವ ಮಹತ್ವದ ಹೊಣೆ ಹೊತ್ತಿದ್ದಾರೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಂವಿಧಾನದ 3 ಅಂಗಗಳಾದರೆ ಪತ್ರಿಕಾರಂಗ 4ನೇ ಅಂಗವಾಗಿದೆ. ಸಾಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಮತ್ತು ಕಾರ್ಯಾಂಗ ಮತ್ತು ಶಾಸಕಾಂಗದ ಕನ್ನಡಿಯಾಗಿ ಪತ್ರಿಕೆಗಳು ಕಾರ್ಯ ಮಾಡುತ್ತವೆ ಎಂದರು.ಪ್ರಾಂಶುಪಾಲ ಬಸವರಾಜ ಕಲಾದಗಿ ಮಾತನಾಡಿ, ವೈದ್ಯರನ್ನು, ಲೆಕ್ಕ ಪರಿಶೋಧಕರನ್ನು ಮತ್ತು ಪತ್ರಕರ್ತರನ್ನು ನಮ್ಮ ವಿದ್ಯಾರ್ಥಿಗಳಿಗೆ ಪರಿಚಯಿಸುವುದರ ಜತೆಗೆ ಅವರು ಸಲ್ಲಿಸುತ್ತಿರುವ ಸೇವೆ ಮಹತ್ವನ್ನು ತಿಳಿಸುವುದು ದಿನಾಚರಣೆ ಉದ್ದೇಶವಾಗಿದೆ ಎಂದರು.
ವೈದ್ಯರಾದ ಡಾ.ಎಸ್.ಡಿ.ಮಾಳಿ, ಡಾ.ಮಹಾಲಿಂಗಪ್ಪ ಪೂಜೇರಿ, ಶಿವಾಣಿ ಕರಿಜಾಡರ, ಡಾ.ಅಭಿಲಾಷ ಜುಂಜಪ್ಪನವರ, ಡಾ.ಚೈತ್ರಾ ಜುಂಜಪ್ಪನವರ, ಪತ್ರಕರ್ತರಾದ ಮಲ್ಲಿಕಾರ್ಜುನ ತುಂಗಳ, ಯಶವಂತ ವಾಜಂತ್ರಿ, ಕಿರಣ ಆಳಗಿ ಮತ್ತು ಶಾಲೆ ಶಿಕ್ಷಕರು ಇದ್ದರು.