ಜಾರಕಿಹೊಳಿ ಕುಟುಂಬದ ಸಮಾಜಮುಖಿ ಸೇವೆ ಸ್ಮರಣೀಯ

KannadaprabhaNewsNetwork | Published : Oct 3, 2024 1:16 AM

ಸಾರಾಂಶ

ಬುದ್ದ, ಬಸವ, ಅಂಬೇಡ್ಕರ್ ವಿಚಾರ ಧಾರೆಗಳನ್ನು ಮೈಗೂಡಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿರು ಜಾರಕಿಹೊಳಿ ಕುಟುಂಬದ ಸಮಾಜಮುಖಿ ಸೇವೆ ಸ್ಮರಣೀಯ ಎಂದು ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮಿಗಳು ನುಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಬುದ್ದ, ಬಸವ, ಅಂಬೇಡ್ಕರ್ ವಿಚಾರ ಧಾರೆಗಳನ್ನು ಮೈಗೂಡಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿರು ಜಾರಕಿಹೊಳಿ ಕುಟುಂಬದ ಸಮಾಜಮುಖಿ ಸೇವೆ ಸ್ಮರಣೀಯ ಎಂದು ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮಿಗಳು ನುಡಿದರು.

ಪಟ್ಟಣದ ಆರ್‌.ಡಿ ಹೈಸ್ಕೂಲ್‌ ಮೈದಾನದಲ್ಲಿ ರಾಹುಲ್‌ ಜಾರಕಿಹೊಳಿ ಜನ್ಮದಿನಾಚರಣೆ ನಿಮಿತ್ತ ರಾಹುಲ್‌ ಅಭಿಮಾನಿ ಬಳಗ ಬುಧವಾರ ಹಮ್ಮಿಕೊಂಡಿದ್ದ ಜನ್ಮದಿನಾಚರಣೆ ಹಾಗೂ ಉಚಿತ ರಕ್ತದಾನ, ಕಣ್ಣು ಚಿಕಿತ್ಸಾ ಶಿಬಿರ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸತೀಶ ಜಾರಕಿಹೊಳಿ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಅಥಣಿ ಮೊಟಗಿ ಮಠದ ಪ್ರಭುಚನ್ನಬಸವ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಜಾರಕಿಹೊಳಿ ಮನೆತನ ಮಾಡುವ ಸಮಾಜ ಸೇವೆಗೆ ಸಾಕಷ್ಟು ಸ್ವಾಮೀಜಿಗಳು ಅವರ ಬೆನ್ನೆಲುಬಾಗಿ ನಿಂತಿದ್ದಾರೆ. ಅವರ ಸಮಾಜಮುಖಿ ಕೆಲಸಗಳಿಗೆ ಪ್ರತಿಯೊಬ್ಬರು ಧ್ವನಿ ಯಾಗಬೇಕು ಎಂದರು.ಬೆಳವಿ ಚರಮೂರ್ತಿ ಚರಂತೇಶ್ವರ ಮಠದ ಶರಣ ಬಸವ ದೇವರು ಮಾತನಾಡಿ, ಬುದ್ದ, ಬಸವ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ದಾರಿಯಲ್ಲಿ, ಸಚಿವ ಸತೀಶ್ ಜಾರಕಿಹೊಳಿ ಮಾರ್ಗದಲ್ಲಿ ಚಿಕ್ಕ ವಯಸ್ಸಿನಲ್ಲೇ ರಾಜಕೀಯವಾಗಿ, ಸಾಮಾಜಿಕವಾಗಿ ಬೆಳೆಯಲಿ, ದೀನ, ದಲಿತರ ಸೇರಿದಂತೆ ಸರ್ವ ಸಮಾಜದ ಪ್ರಗತಿಗೆ ಶ್ರಮಿಸಲೆಂದು ಆಶೀರ್ವದಿಸಿ, ತಂದೆಯಂತೆಯೇ ತಾವು ಕೂಡ ಜನರ ಸರ್ವ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ಆಶೀರ್ವದಿಸಿದರು.ಸಂಸದೆ ಪ್ರಿಯಂಕಾ ಜಾರಕಿಹೊಳಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ಹೊತ್ತು ಸಹೋದರ ರಾಹುಲ್ ಜಾರಕಿಹೊಳಿ ನಿಭಾಯಿಸುತ್ತಿದ್ದಾರೆ. ಶೀಘ್ರವೇ ಸತೀಶ್ ಶುಗರ್ಸ್ ಅವಾರ್ಡ್ ಕಾರ್ಯಕ್ರಮ ಚಿಕ್ಕೋಡಿಯಲ್ಲಿ ಚಾಲನೆ ನೀಡಲಿದ್ದೇವೆ. ಅದರಲ್ಲೂ ಮುಖ್ಯವಾಗಿ ಈ ಭಾಗದ ಸಮಸ್ಯೆಗಳನ್ನು, ನಿಮ್ಮ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಈಡೇಸಿಸುತ್ತೇನೆ ಎಂದು ಭರವಸೆ ನೀಡಿದರು.ಯುವ ನಾಯಕ ರಾಹುಲ್ ಜಾರಕಿಹೊಳಿ ಮಾತನಾಡಿ, ಡಾ.ಅಂಬೇಡ್ಕರ್ ಕಾಲಿಟ್ಟ ಚಿಕ್ಕೋಡಿಯಲ್ಲಿ ನನ್ನ ಅಭಿಮಾನಿಗಳು ನನ್ನ ಜನ್ಮ ದಿನವನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದು ನನಗೆ ಸಂತಸ ತಂದಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ನನ್ನನ್ನು ಆಶೀರ್ವದಿಸಿದ ಸಕಲ ಪೂಜ್ಯರಿಗೆ, ಅಭಿಮಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು. ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ರಾಹುಲ್ ಜಾರಕಿಹೊಳಿ ಅವರ ಜನ್ಮದಿನದ ನಿಮಿತ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅತೀವ ಸಂತಸವಾಗಿದೆ. ಸದೃಢ ಸಮಾಜ ನಿರ್ಮಾಣವಾಗಬೇಕಾದರೇ ಯುವಕರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಈ ಭಾಗದ ಪ್ರಗತಿಪರ- ಚಿಂತಕ ಸಮಾಜ ಸೇವೆ ಉಸಿರಾಗಿಸಿಕೊಂಡಿರುವ ಸರಳ ನಾಯಕ ಸತೀಶ ಜಾರಕಿಹೊಳಿ ಅವರ ಮೇಲಿನ ಪ್ರೀತಿಯಿಂದ ಶ್ರೀಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಮುಂದಿನ ದಿನಗಳಲ್ಲಿ ರಾಹುಲ್ ಜಾರಕಿಹೊಳಿ ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ. ಅವರಿಗೆ ದೇವರು ಒಳ್ಳೆಯ ಆರೋಗ್ಯ, ಆಯುಷ್ಯ ನೀಡಲೆಂದು ಶುಭಾಶಯ ಕೋರಿದರು.ಮಹಾತ್ಮಾ ಗಾಂಧೀಜಿ, ಮಾಜಿ ಪ್ರಧಾನಿ ಲಾಲ್‌ ಬಹಾದ್ದೂರ ಶಾಸ್ತ್ರಿ ಭಾವಚಿತ್ರಕ್ಕೆ ನಮನ ಸಲ್ಲಿಸುವ ಮೂಲಕ ಮಹಾತ್ಮಾ ಗಾಂಧೀಜಿ ಹಾಗೂ ಲಾಲ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು.ನಿಪ್ಪಾಣಿ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ, ಕಕಮರಿ ರಾಯಲಿಂಗೇಶ್ವರ ಮಠದ ಅಭಿನವ ಗುರುಲಿಂಗ ಜಂಗಮ ಮಹಾಸ್ವಾಮೀಜಿ, ನಂದಿಕುರಳಿ ಪಂಚಲಿಂಗೇಶ್ವರ ಮಠದ ವೀರಭದ್ರೇಶ್ವರ ಸ್ವಾಮೀಜಿ, ಬಾ ಸವದತ್ತಿ ಅನಂತಶ್ರಮಮಠ ಶಿವಶಂಕರ ಸ್ವಾಮೀಜಿ, ಪರಮಾನಂದವಾಡಿ ಅಭಿನವ ಬ್ರಹ್ಮಮಾನಂದ ಸ್ವಾಮೀಜಿ, ಸಂಕೇಶ್ವರ ಶಂಕರಲಿಂಗ ಸ್ವಾಮೀಜಿ, ಶರಣ ಬಸವ ದೇವರು ಸ್ವಾಮೀಜಿ, ಹುಕ್ಕೇರಿಯ ಕ್ಯಾರಗುಡ್ಡ ಔಜಿಕರ ಸ್ವಾಮೀಜಿ, ಘೋಡಗೇರಿ ಕಾಶಿನಾಥ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಬುಡಾ ಅಧ್ಯಕ್ಷ ಹಾಗೂ ಚಿಕ್ಕೋಡಿ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ, ಚಿಕ್ಕೋಡಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷ ನಿರ್ಮಲಾ ಪಾಟೀಲ್‌, ಕಾಂಗ್ರೆಸ್‌ ಮುಖಂಡರಾದ ಪ್ರಭಾಕರ ಕೋರೆ, ಶಿವು ಪಾಟೀಲ್‌, ಕೆಪಿಸಿಸಿ ಸದಸ್ಯ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಒಬಿಸಿ ಅಧ್ಯಕ್ಷ ಅರ್ಜುನ್‌ ನಾಯಕವಾಡಿ ಸೇರಿದಂತೆ ಕಾಂಗ್ರೆಸ್‌ ಗಣ್ಯರು, ಕಾರ್ಯಕರ್ತರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದರು.ಸಕಲ ಪೂಜ್ಯರು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರಿಗೆ ಸತ್ಕರಿಸಿ, ಆಶೀರ್ವಾದಿಸಿದರು. ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಪೂಜ್ಯರಿಗೆ ಸತ್ಕರಿಸಿ, ಆಶೀರ್ವಾದ ಪಡೆದರು.

ಶೈಕ್ಷಣಿಕ, ಸಾಮಾಜಿಕ ಪ್ರಗತಿಗೆ ಯಾವಾಗಲೂ ನಾನು ಶ್ರಮಿಸುತ್ತಿದ್ದು, ತಂದೆಯವರ ಮಾರ್ಗದರ್ಶನದಲ್ಲಿ ನಿರಂತರ ಜನ ಸೇವೆ ಮಾಡುತ್ತೇನೆ. ತಮ್ಮ ಪ್ರೀತಿ, ವಿಶ್ವಾಸಕ್ಕೆ ಚಿರ ಋಣಿಯಾಗಿರುತ್ತೇನೆ. ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದು, ನನಗೆ ಹೆಚ್ಚು ಸಹಕಾರ ನೀಡಿದ ಸರ್ವರಿಗೂ ಧನ್ಯವಾದಗಳು.

-ರಾಹುಲ್ ಜಾರಕಿಹೊಳಿ, ಯುವ ನಾಯಕ.

Share this article