ಮಗ್ಗಗಳ ಸದ್ದಿನ ನಡುವೆ ರೊಟ್ಟಿ ಸಪ್ಪಳ!

KannadaprabhaNewsNetwork |  
Published : Sep 28, 2026, 02:30 AM IST
ಇ-ಸೇವಾ ಕೇಂದ್ರವನ್ನು ಉದ್ಘಾಟಿಸಿದ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಇ.ಎಸ್. ಇಂದಿರೇಶ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿದಿನಂಪ್ರತಿ ಮಗ್ಗಗಳ ಸಪ್ಪಳದಲ್ಲಿಯೇ ಕಾಲ ನಿರ್ವಹಿಸುತ್ತಿದ್ದ ರಬಕವಿ-ಬನಹಟ್ಟಿ ಅವಳಿ ನಗರ ಇದೀಗ ಬನಹಟ್ಟಿ ಆರಾಧ್ಯದೈವ ಕಾಡಸಿದ್ಧೇಶ್ವರ ಜಾತ್ರೆ ನಿಮಿತ್ತ ಪ್ರಥಮ ಬಾರಿಗೆ ರೊಟ್ಟಿ ನೀಡುವ ಭರಾಟೆಯಲ್ಲಿ ಎಲ್ಲೆಂದರಲ್ಲಿ ರೊಟ್ಟಿಗಳ ಗುಡಿ ಕೈಗಾರಿಕೆ ಬಲು ಜೋರಾಗಿದ್ದು, ಮಗ್ಗಗಳಷ್ಟೇ ಸಪ್ಪಳ ರೊಟ್ಟಿ ಬಡಿಯುವ ಶಬ್ದ ಕಂಡು ಬರುತ್ತಿರುವದು ಸಾಮಾನ್ಯವಾಗಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ದಿನಂಪ್ರತಿ ಮಗ್ಗಗಳ ಸಪ್ಪಳದಲ್ಲಿಯೇ ಕಾಲ ನಿರ್ವಹಿಸುತ್ತಿದ್ದ ರಬಕವಿ-ಬನಹಟ್ಟಿ ಅವಳಿ ನಗರ ಇದೀಗ ಬನಹಟ್ಟಿ ಆರಾಧ್ಯದೈವ ಕಾಡಸಿದ್ಧೇಶ್ವರ ಜಾತ್ರೆ ನಿಮಿತ್ತ ಪ್ರಥಮ ಬಾರಿಗೆ ರೊಟ್ಟಿ ನೀಡುವ ಭರಾಟೆಯಲ್ಲಿ ಎಲ್ಲೆಂದರಲ್ಲಿ ರೊಟ್ಟಿಗಳ ಗುಡಿ ಕೈಗಾರಿಕೆ ಬಲು ಜೋರಾಗಿದ್ದು, ಮಗ್ಗಗಳಷ್ಟೇ ಸಪ್ಪಳ ರೊಟ್ಟಿ ಬಡಿಯುವ ಶಬ್ದ ಕಂಡು ಬರುತ್ತಿರುವದು ಸಾಮಾನ್ಯವಾಗಿದೆ.

ಮಾರುಕಟ್ಟೆಯಲ್ಲಿ ಹೊಸ ಹವಾ: ಅವಳಿ ನಗರಾದ್ಯಂತ ಮಾರುಕಟ್ಟೆಯಲ್ಲಿ ರೊಟ್ಟಿ ವ್ಯಾಪಾರ ಬಲು ಜೋರಾಗಿದೆ. ಅಷ್ಟಕಷ್ಟೇ ರೊಟ್ಟಿ ಮಾರಾಟವಾಗುತ್ತಿದ್ದ ವ್ಯಾಪಾರಿಗಳಿಗೆ ಇದೀಗ ಮೂಲ ವ್ಯಾಪಾರವನ್ನಾಗಿಸಿಕೊಂಡು ₹5 ದಿಂದ ₹12 ಗಳವರೆಗೆ ಮಾರಾಟ ಮಾಡುತ್ತಿದ್ದಾರೆ.

ಇತ್ತ ಹಲವು ಭಕ್ತರು ರೊಟ್ಟಿ ಖರೀದಿ ಮುಗಿ ಬಿದ್ದಿದ್ದು, ಜಾತ್ರೆಗೆ ವಿಶೇಷವಾಗಿ ದೇವರಿಗೆ ಅರ್ಪಿಸುತ್ತಿರುವದರಿಂದ ಒಂದು ವಾರ ಮೊದಲೇ ಜಾತ್ರೆಗೆ ಮೆರಗು ನೀಡಿದೆ. ಪಟಾಕಿಯಷ್ಠೇ ಮಹತ್ವ ಪಡೆದ ರೊಟ್ಟಿ: ಜಾತ್ರೆಯಲ್ಲಿ ಸುಮಾರು 70 ರಿಂದ 80 ಲಕ್ಷದವರೆಗೆ ಪಟಾಕಿ ಮದ್ದು ಸುಡುವ ಕಾರ್ಯಕ್ರಮದಿಂದ ಉತ್ತರ ಕರ್ನಾಟಕದಲ್ಲಿಯೇ ವಿಶೇಷತೆ ಪಡೆದಿದ್ದು, ಪ್ರಸಕ್ತ ವರ್ಷ ಒಂದುವರೆ ಲಕ್ಷದಷ್ಟು ರೊಟ್ಟಿ ಸಂಗ್ರಹವಾಗಿರುವುದು ವಿಶೇಷವಾಗಿದೆ.

ಮಹಿಳೆರಿಂದ ರೊಟ್ಟಿ ಬುತ್ತಿ: ಕಳೆದೊಂದು ವಾರದಿಂದ ಸರದಿಯಲ್ಲಿ ಗುಂಪು-ಗುಂಪಾಗಿ ಸಾವಿರಾರು ಮಹಿಳೆಯರು ತಲೆ ಮೇಲೆ ರೊಟ್ಟಿ ಬುತ್ತಿಗಳನ್ನು ಹೊತ್ತು ದೇವಾಲಯ ಆವರಣದೊಳಗೆ ತಂದು ಕೊಡುತ್ತಿದ್ದಾರೆ. ಈ ಬಾರಿ ಪ್ರಥಮ ಬಾರಿಗೆ ವಿಶೇಷ ಹರಕೆ ಹೊತ್ತುಕೊಂಡವರು ಸಾವಿರಾರು ರೊಟ್ಟಿಗಳನ್ನು ತರುತ್ತಿರುವದು ಗಮನೀಯ ಅಂಶ.

ಇಂದಿನಿಂದ ರೊಟ್ಟಿ ಊಟ: ಸೋಮವಾರ ಬೆಳಗ್ಗೆ 9ಗಂಟೆಗೆ ಊರಿನ ಕಾಡಸಿದ್ಧೇಶ್ವರ ದೇವಾಲಯದಿಂದ ಸಾವಿರಾರು ಮಹಿಳೆಯರೊಂದಿಗೆ ಮತ್ತೇ ರೊಟ್ಟಿ ಬುತ್ತಿ ಹೊತ್ತು ಆರಾಧ್ಯದೈವ ಕಾಡಸಿದ್ಧೇಶ್ವರ ದೇವಾಲಯದವರೆಗೆ ಮೆರವಣಿಗೆ ಜರುಗಲಿದ್ದು, ಮಧ್ಯಾಹ್ನದಿಂದಲೇ ರೊಟ್ಟಿ ಊಟ ಶುರುವಾಗಲಿದೆ ಎಂದು ಜಾತ್ರಾ ಕಮಿಟಿಯ ಶ್ರೀಶೈಲ ದಭಾಡಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಜಿಬಿವಿ ಶಾಲೆ ಶೈಕ್ಷಣಿಕ, ಸ್ವಚ್ಛತಾ ವ್ಯವಸ್ಥೆಗೆ ಅಧಿಕಾರಿಗಳ ಮೆಚ್ಚುಗೆ
ನಾಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮನೆಗೆ ಮುತ್ತಿಗೆ