ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಆರಂಭದಲ್ಲಿ ಹಿನ್ನಡೆ:
ಮಾರ್ಚ್ ಕೊನೆಯಲ್ಲಿ ಅಥವಾ ಏಪ್ರಿಲ್ ತಿಂಗಳಲ್ಲಿ ಮಳೆ ಬಂದರೆ ಮುಂಗಾರಿನ ಬಿತ್ತನೆಗೆ ರೈತರು ಸಿದ್ಧತೆ ಮಾಡಿ ಕೊಳ್ಳುತ್ತಾರೆ. ಅದಕ್ಕೂ ಮುನ್ನ ಎಣ್ಣೆ ಕಾಳು ಬಿತ್ತನೆ ಮಾಡಿ ಒಂದಿಷ್ಟು ಹಣಕಾಸಿನ ತೊಂದರೆ ಸರಿದೂಗಿಸಿಕೊಳ್ಳುತ್ತಾರೆ. ಆದರೆ, ಈ ಬಾರಿ ಮಾರ್ಚ್ ಕೊನೆಯಲ್ಲಿ ಮಲೆನಾಡಿನ ಕೆಲವೆಡೆ ಮಳೆ ಬಂದಿತ್ತು. ಎನ್.ಆರ್.ಪುರ, ಕೊಪ್ಪ, ಶೃಂಗೇರಿ ಹಾಗೂ ಚಿಕ್ಕಮಗಳೂರು ತಾಲೂಕಿನ ಕೆಲವೆಡೆ ವಾಡಿಕೆ ಮಳೆ ಬಂದಿತು.ಆದರೆ, ಮಳೆ ಆಶ್ರಿತ ಬೆಳೆಯನ್ನು ಬೆಳೆಯುವ ಅಜ್ಜಂಪುರ, ತರೀಕೆರೆ, ಕಡೂರು ಹಾಗೂ ಚಿಕ್ಕಮಗಳೂರು ತಾಲೂಕಿನ ಅಂಬಳೆ, ಲಕ್ಯಾ ಹೋಬಳಿಯಲ್ಲಿ ಮಳೆ ಕೈಕೊಟ್ಟಿತ್ತು. ಅದ್ದರಿಂದ ರೈತರು ಹೊಲ ಹಸನು ಮಾಡುವ ಕೆಲಸಕ್ಕೆ ಕೈ ಹಾಕ ಲಿಲ್ಲ, ಮೇ ಮಾಹೆ ಆರಂಭದಿಂದ ಈವರೆಗೆ ಬಹುತೇಕ ಎಲ್ಲಾ ತಾಲೂಕುಗಳಲ್ಲಿ ದಾಖಲೆ ಮಳೆಯಾಗಿದೆ. ನೀರಿನ ಕೊರತೆ ಎದುರಿಸುತ್ತಿರುವ ಕಡೂರು, ಅಜ್ಜಂಪುರ ತಾಲೂಕಿನ ಕೆಲವೆಡೆ ಮಲೆನಾಡಿಗಿಂತಲೂ ಹೆಚ್ಚು ಮಳೆ ಬರುತ್ತಿದೆ. ವರುಣನ ಅರ್ಭಟ ಜೋರಿದ್ದು ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗಿರುವುದು ದಾಖಲಾಗಿದೆ.ಪೂರ್ವ ಮುಂಗಾರು:
--
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ತಾಲೂಕಿನ ಕಡಹಿನ ಬೈಲು ಗ್ರಾಮ ಪಂಚಾಯಿತಿಗೆ ಸೇರಿದ ಕಡಹಿನಬೈಲು ಗ್ರಾಮದ ಶೆಟ್ಟಿಕೊಪ್ಪದ ಜನತಾ ಕಾಲೋನಿ- ಚನಮಣಿ ಸಂಪರ್ಕ ರಸ್ತೆಯಲ್ಲಿ ಬರುವ ಸೇತುವೆಯೊಂದು ಕಳೆದ 3 ದಿನದ ಹಿಂದೆ ಸುರಿದ ಬಾರೀ ಮಳೆಗೆ ಕುಸಿದಿದೆ.ಶೆಟ್ಟಿಕೊಪ್ಪದ ಜನತಾ ಕಾಲೋನಿ-ಚನಮಣಿಯ 3 ಕಿ.ಮೀ.ದೂರದ ಸಂಪರ್ಕ ರಸ್ತೆಯಲ್ಲಿ ಮಾರ್ಗ ಮದ್ಯೆ ಬರುವ ಭೀಮನರಿ ಹಳ್ಳಕ್ಕೆ ಕಿರಿದಾದ ಸೇತುವೆ ನಿರ್ಮಿಸಲಾಗಿದೆ. ಕಳೆದ 3 ದಿನಗಳ ಹಿಂದೆ ಭಾರೀ ಮಳೆಗೆ ಹಳ್ಳದ ನೀರು ದೊಡ್ಡದಾಗಿ ಸೇತುವೆ ಒಂದು ಭಾಗದ ರಿವಿಂಟ್ಮೆಂಟ್ ಕುಸಿದಿದೆ. ಇದರಿಂದ ಸೇತುವೆಗೂ ಹಾನಿಯಾಗಿದೆ. ಸಂಬಂಧ ಪಟ್ಟವರು ತಕ್ಷಣ ಈ ಸೇತುವೆ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ಚನಮಣಿ, ಭೀಮನರಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮೋರಿ ಕುಸಿತ: ಕಡಹಿನಬೈಲು ಗ್ರಾಮದ ವ್ಯಾಪ್ತಿಯಲ್ಲೇ ಬರುವ ನರಸಿಂಹರಾಜಪುರ-ಶಿವಮೊಗ್ಗ ಮುಖ್ಯರಸ್ತೆಯಿಂದ ದೊಡ್ಡಿ ಹಟ್ಟಿ- ಭದ್ರಾ ಕಾಲೋನಿ ಸಂಪರ್ಕ ರಸ್ತೆಗೆ ಕಳೆದ 1 ತಿಂಗಳ ಹಿಂದೆ ಲೋಕೋಪಯೋಗಿ ಇಲಾಖೆಯವರು ಟಾರು ರಸ್ತೆ ನಿರ್ಮಿಸಿದ್ದರು. ಈ ರಸ್ತೆ ಮಾರ್ಗದಲ್ಲಿ ಬರುವ ದೊಡ್ಡಿ ಹಟ್ಟಿ ಸಮೀಪ 2 ಮೋರಿ ನಿರ್ಮಿಸಲಾಗಿದ್ದು ಭಾರೀ ಮಳೆಗೆ ಮೋರಿಗಳ ಒಂದು ಭಾಗದ ಮಣ್ಣು ತೊಳೆದುಕೊಂಡು ಹೋಗಿದೆ.ಮೋರಿ ಪಕ್ಕದಲ್ಲಿ ಕಲ್ಲಿನಿಂದ ರಿವಿಟ್ ಮೆಂಟ್ ಕಟ್ಟಿ ದುರಸ್ತಿ ಮಾಡಿಸಬೇಕಾಗಿದೆ. ಇಲ್ಲದಿದ್ದರೆ ಈ ವರ್ಷ ಮಳೆಗಾಲದಲ್ಲಿ ಮೋರಿ ಪೂರ್ತಿ ಕಿತ್ತು ಹೋಗಲಿದೆ ಎನ್ನುತ್ತಾರೆ ಆ ಭಾಗದ ಗ್ರಾಮಸ್ಥರು.
--
ತರೀಕೆರೆಯಲ್ಲಿ ಮುುಂದುವರಿದೆ ಮಳೆ ಅಬ್ಬರಕನ್ನಡಪ್ರಭ ವಾರ್ತೆ, ತರೀಕೆರೆಎರಡು ದಿನಗಳ ಬಿಡುವು ನೀಡಿದ್ದ ಮಳೆ ಪಟ್ಟಣ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ಗುರುವಾರ ಬಿರುಸಿನ ಮಳೆ ಸುರಿದಿದೆ.
ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಗಣಪತಿ ಪೆಂಡಾಲ್ ಬಳಿ ರಸ್ತೆಗಳಲ್ಲಿ ಹೊಳೆಯಂತೆ ನೀರು ಹರಿಯಿತು, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಪ್ರಕಾಶಮಾನವಾದ ಹೆಡ್ ಲೈಟ್. ಗಳನ್ನು ಹಾಕಿಕೊಂಡು ನಿಧಾನ ಗತಿಯಲ್ಲಿ ವಾಹನಗಳು ಸಂಚರಿಸಿತು.ಕೃತಜ್ಞತೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಣಪತಿ ಪೆಂಡಾಲಿನ ಮುಂಭಾಗದಲ್ಲಿ ಈ ಮುಂಚೆ ಧಟ್ಟ ಮಳೆ ಬಂದಾಗ ರಸ್ತೆ ಬದಿಯಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಸಂಗ್ರಹವಾದ ಮಳೆ ನೀರು ಸಂಚಾರ ವ್ಯವಸ್ಥೆ, ಪಾದಚಾರಿಗಳಿಗೆ ಹಾಗೂ ರಸ್ತೆ ಪಕ್ಕದ ಅಂಗಡಿಗಳಿಗೆ ನೀರು ನುಗ್ಗಿ ಉಂಟಾಗುತ್ತಿದ್ದ ಅನಾನುಕೂಲವನ್ನು ಗಮನಿಸಿದ ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ಅತಿ ಶೀಘ್ರದಲ್ಲಿ ತುರ್ತು ಕ್ರಮ ಕೈಗೊಂಡು ಎರಡು ವರೆ ಅಡಿ ಅಗಲ ವ್ಯಾಸದ ಸುಮಾರು ನೂರು ಅಡಿ ಉದ್ದದ ದೊಡ್ಡ ಪೈಪ್‌ಗಳನ್ನು ಅಳವಡಿಸಿದ್ದರಿಂದ ಇದೀಗ ಮಳೆ ನೀರು ರಸ್ತೆಯಲ್ಲಿ ನಿಲ್ಲದೆ ಸರಾಗವಾಗಿ ಪೈಪಿನ ಮೂಲಕ ಹರಿದುಹೋಗುತ್ತಿದೆ. ಸಾರ್ವಜನಿಕರು ಪುರಸಭೆ ಮುಖ್ಯಾದಿಕಾರಿ ಎಚ್.ಪ್ರಶಾಂತ್ ಮತ್ತು ಸಿಬ್ಬಂದಿಗೆ ಕೃತಜ್ಞತೆ ತಿಳಿಸಿದ್ದಾರೆ ಎಂದು ಕಲ್ಯಾಣ್ ಕುಮಾರ್ ನವಲೆ ತಿಳಿಸಿದ್ದಾರೆ.
23ಕೆಟಿಆರ್.ಕೆ.10ಃ ತರೀಕೆರೆಯಲ್ಲಿ ದಟ್ಟ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಹೊಳೆಯಂತಾಗಿರುವುದು23ಕೆಟಿಆರ್.ಕೆ.11ಃ ರಾಷ್ಟ್ರೀಯ ಹೆದ್ದಾರಿ ರಸ್ತೆ ಪಕ್ಕದಲ್ಲಿ ಪುರಸಭೆ ಸುಮಾರು ನೂರು ಅಡಿ ಉದ್ದದ ದೊಡ್ಡ ಪೈಪು ಅಳವಡಿಸಿರುವುದರಿಂದ ಇದೀಗ ನೀರು ಸರಾಗವಾಗಿ ಹರಿದುಹೋಗುತ್ತಿರುವುದು.