ಜಗದ್ಗುರು ಕೊಟ್ಟೂರು ಶ್ರೀವಿರಕ್ತಮಠ ಬೂದಗುಂಪಾ ಶಾಖಾ ಮಠದ ಶ್ರೀ
ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಿಗೆ ಮಾತ್ರ ಕ್ರೀಡಾಕೂಟಗಳು, ಕ್ರೀಡಾ ಶಾಲೆಗಳು ಸೀಮೀತವಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಅತೀ ಹೆಚ್ಚು ಪ್ರತಿಭೆಗಳಿದ್ದು, ಇಂಥ ಪ್ರತಿಭೆಗಳು ಹೊರಹೊಮ್ಮಲು ಹಳ್ಳಿಗಳಲ್ಲಿ ಕ್ರೀಡಾಕೂಟಗಳನ್ನು ನಡೆಸುವುದು ಅಗತ್ಯ ಎಂದು ಜಗದ್ಗುರು ಕೊಟ್ಟೂರು ಶ್ರೀವಿರಕ್ತಮಠ ಬೂದಗುಂಪಾ ಶಾಖಾ ಮಠದ ಸಿದ್ದೇಶ್ವರ ದೇವರು ಹೇಳಿದರು.
ಸಮೀಪದ ಬೂದುಗುಂಪಾ ಗ್ರಾಮದ ಶ್ರೀ ಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ತೀರ್ಪುಗಾರರು ಮಕ್ಕಳಿಗೆ ಅನ್ಯಾಯವಾಗದ ರೀತಿ ತೀರ್ಪು ನೀಡಬೇಕು. ಮುಖ್ಯವಾಗಿ ಮಕ್ಕಳು ಸೋಲು-ಗೆಲುವನ್ನು ಬದಿಗಿಟ್ಟು ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳಬೇಕು. ಸೋತ ಮಕ್ಕಳು ನಿರಾಶರಾಗುವ ಅಗತ್ಯವಿಲ್ಲ. ಗೆದ್ದ ಮಕ್ಕಳು ಬೀಗುವ ಅಗತ್ಯವೂ ಇಲ್ಲ. ಕ್ರೀಡೆ ಮುಗಿದ ಮೇಲೆ ಆ ಗುಂಗಿನಿಂದ ಹೊರಬನ್ನಿ ಎಂದರು.
ಗ್ರಾಮದ ಹಿರಿಯರಾದ ಬಸವರಾಜಪ್ಪ ಕುಲಕರ್ಣಿ, ಕರಿಸಿದ್ದನಗೌಡ ಮಾಲಿ ಪಾಟೀಲ್, ಮುತ್ತಣ್ಣ, ಸಿಆರ್‌ಪಿ ಮಂಜುನಾಥ್ ಚಿಕೇನಕೊಪ್ಪ, ಎನ್‌ಪಿಎಸ್ ಸಂಘದ ಅಧ್ಯಕ್ಷ ವೀರನಗೌಡ, ಶಂಕ್ರಮ್ಮ ಜಟಿಂಗರಾಯ ದಳವಾಯಿ, ಬಸವರಾಜ ಅವರಾದಿ, ಚಂದ್ರಶೇಖರ ಜಾಪಾಳ, ಪುನೀತ್ ಹಿರೇಮಠ, ರಾಚಯ್ಯ ಹಿರೇಮಠ, ಸಂತೋಷ್ ಯರಕಲ್ ಇದ್ದರು