ನಾಡಿದ್ದು ಹಜಾರೆ ಬಜಾರ ಪ್ರಾರಂಭ

KannadaprabhaNewsNetwork | Published : Oct 5, 2024 1:32 AM

ಸಾರಾಂಶ

ಉತ್ಪಾದನಾ ಘಟಕದಿಂದ ನೇರವಾಗಿ ಖರೀದಿಸಿದ ವಸ್ತುಗಳು ನೇರವಾಗಿ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ನೀಡುವತ್ತ ಹಜಾರೆ ಬಜಾರ್ ಕಂಕಣಬದ್ಧವಾಗಿದೆ. ರಬಕವಿ-ಬನಹಟ್ಟಿ ಸುತ್ತಲಿನ ಜನರ ಸಹಕಾರ ಹಾಗು ಉತ್ತೇಜನದಿಂದ ಅ.೭ ರಂದು ೨ ಲಕ್ಷ ಚದರ ಅಡಿಯ ಬೃಹತ್ ಮಳಿಗೆ ಪ್ರಾರಂಭಗೊಳ್ಳಲಿದೆ ಎಂದು ಮಾಲೀಕ ಸತೀಶ ಹಜಾರೆ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಉತ್ಪಾದನಾ ಘಟಕದಿಂದ ನೇರವಾಗಿ ಖರೀದಿಸಿದ ವಸ್ತುಗಳು ನೇರವಾಗಿ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ನೀಡುವತ್ತ ಹಜಾರೆ ಬಜಾರ್ ಕಂಕಣಬದ್ಧವಾಗಿದೆ. ರಬಕವಿ-ಬನಹಟ್ಟಿ ಸುತ್ತಲಿನ ಜನರ ಸಹಕಾರ ಹಾಗು ಉತ್ತೇಜನದಿಂದ ಅ.೭ ರಂದು ೨ ಲಕ್ಷ ಚದರ ಅಡಿಯ ಬೃಹತ್ ಮಳಿಗೆ ಪ್ರಾರಂಭಗೊಳ್ಳಲಿದೆ ಎಂದು ಮಾಲೀಕ ಸತೀಶ ಹಜಾರೆ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಟ್ರೋ ನಗರ ನಂತರ ಬಾಗಲಕೋಟೆ ಜಿಲ್ಲೆಯ ರಬಕವಿಯಲ್ಲಿಯೇ ಅತ್ಯಂತ ಬೃಹತ್ ಮಳಿಗೆ ಹಜಾರೆ ಬಜಾರ ಶುರುವಾಗಲಿದೆ. ಗ್ರಾಹಕ ಸ್ನೇಹಿ ಮಳಿಗೆಯಾಗಿ ಎಲ್ಲ ರೀತಿಯ ವೈವಿದ್ಯತೆಯ ವಸ್ತುಗಳು ಆನ್‌ಲೈನ್ ಕಂಪನಿಗಳಿಗೂ ಸವಾಲಾಗಲಿದೆ ಎಂದರು.ಕಳೆದೆರಡು ವರ್ಷಗಳ ಪರಿಶ್ರಮ, ಛಲ ಹಾಗೂ ಈ ಭಾಗದ ಜನರ ಸಹಕಾರದಿಂದ ಜನತೆಗೆ ನೆರವಾಗುವ ಮತ್ತು ಬಡಕುಟುಂಬಗಳಿಗೂ ಗುಣಮಟ್ಟದ ಮತ್ತು ಕಡಿಮೆ ಬೆಲೆಯ ವಸ್ತುಗಳನ್ನು ಒದಗಿಸುವ ಗುರಿ ನಮ್ಮದಾಗಿದೆ ಎಂದರು.ಹಜಾರೆ ಟೆಕ್ಸಟೈಲ್‌ ಮಾಲೀಕ ಗಣಪತರಾವ್ ಹಜಾರೆ ಮಾತನಾಡಿ, ಮನೆ ಸಾಮಗ್ರಿ ಸೇರಿದಂತೆ ಸಮಾರಂಭಕ್ಕೆ ಬೇಕಾದ ವಸ್ತುಗಳಗೆ ದೂರದ ಊರುಗಳಿಗೆ ತೆರಳಬೇಕಿತ್ತು. ಅವೆಲ್ಲದಕ್ಕೂ ಕಡಿವಾಣ ಹಾಕುವಲ್ಲಿ ಹಜಾರೆ ಬಜಾರ ಕಾರಣವಾಗಿದ್ದು, ಬಂಗಾರ, ಬಾಂಡೆ, ಫರ್ನಿಚರ್, ಮಕ್ಕಳ ಆಟಿಕೆ, ಎಲೆಕ್ಟ್ರಾನಿಕ್ಸ್‌, ಸ್ಟೇಶನರಿ, ಕ್ರೀಡಾ ಸಾಮಗ್ರಿ ಸೇರಿದಂತೆ ಪ್ರಮುಖವಾಗಿ ಮನೆಗೆ ಬೇಕಾಗುವ ದೈನಂದಿನ ಕಿರಾಣಿ ಸಾಮಗ್ರಿಗಳು ದೊರೆಯಲಿದೆ ಎಂದು ವಿವರಿಸಿದರು.ಉದ್ಯಮಿ ಪ್ರಸನ್ನ ಹಜಾರೆ ಮಾತನಾಡಿ, ೨ ಎಕರೆಯಷ್ಟು ವಿಶಾಲ ಕಟ್ಟಡದ ಮೈದಾನ ಆವರಣದಲ್ಲಿ ಈ ಬಜಾರ ಇದ್ದು, ೪೦೦ ಕ್ಕಿಂತಲೂ ಅಧಿಕ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಯಲ್ಲಿ ಮಹಿಳೆಯರಿಗೇ ಆದ್ಯತೆ ನೀಡಲಾಗಿದೆ. ಅ.೭ ರಂದು ಕಾರ್ಯಕ್ರಮದಲ್ಲಿ ಸುಮಾರು ೨೫ ಸಾವಿರ ಜನರು ಸೇರುವ ನಿರೀಕ್ಷೆಯಿದ್ದು, ಅಂದು ಎಲ್ಲರಿಗೂ ಊಟದ ವ್ಯವಸ್ಥೆಗೊಳಿಸಲಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಬಾಬುರಾವ್ ಹಜಾರೆ, ಪದ್ಮೇಶ ಬಹಿರಶೇಟ, ಸುಶಾಂತ ಪೋತದಾರ, ಪ್ರವೀಣ ಹಜಾರೆ, ಪ್ರದೀಪ ಹಜಾರೆ ಉಪಸ್ಥಿತರಿದ್ದರು.

ದೇಶ-ವಿದೇಶಗಳ ಅತ್ಯುನ್ನತ ಕಂಪನಿಗಳ ಗುಣಮಟ್ಟದಾಯಕ ವಸ್ತುಗಳು ದೊರೆಯಲಿವೆ. ಸ್ಕೀಂ, ಇನ್ಸೆಂಟಿವ್ ಜೊತೆಗೆ ಇತರೆ ಲಾಭಗಳೆಲ್ಲವನ್ನೂ ಗ್ರಾಹಕರಿಗೆ ಬಿಟ್ಟುಕೊಡುವ ಮೂಲಕ ಅತ್ಯಂತ ಅಗ್ಗದ ದರದಲ್ಲಿ ಕಂಪನಿಯಿಂದ ನೇರ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಒಂದೇ ಸೂರಿನಡಿಯಾಗಲಿದೆ.

-ಸತೀಶ ಹಜಾರೆ,

ಮಾಲೀಕರು.

Share this article