ಗ್ರಾಪಂಗೆ ಅನುದಾನ ನೀಡಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲ: ಪ್ರೇಮಕುಮಾರ್ ನಾಯ್ಕ

KannadaprabhaNewsNetwork |  
Published : Jul 04, 2025, 11:52 PM ISTUpdated : Jul 04, 2025, 11:53 PM IST
ಪೊಟೋ೩ಎಸ್.ಆರ್.ಎಸ್೨ (ತಾಲೂಕಿನ ಅಂಡಗಿ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.) | Kannada Prabha

ಸಾರಾಂಶ

ಬಿಜೆಪಿ ಶಿರಸಿ ಗ್ರಾಮೀಣ ಮಂಡಲದ ವತಿಯಿಂದ ತಾಲೂಕಿನ ಅಂಡಗಿ ಗ್ರಾಪಂ ಕಚೇರಿ ಎದುರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರೇಮಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿ, ಮನವಿ ಪತ್ರ ಸಲ್ಲಿಸಲಾಯಿತು.

ಶಿರಸಿ: ಬಿಜೆಪಿ ಶಿರಸಿ ಗ್ರಾಮೀಣ ಮಂಡಲದ ವತಿಯಿಂದ ತಾಲೂಕಿನ ಅಂಡಗಿ ಗ್ರಾಪಂ ಕಚೇರಿ ಎದುರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರೇಮಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿ, ಮನವಿ ಪತ್ರ ಸಲ್ಲಿಸಲಾಯಿತು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರೇಮಕುಮಾರ್ ನಾಯ್ಕ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ದುರಾಡಳಿತ ನಡೆಸುತ್ತಿದೆ. ಮೂಡಾ ಹಗರಣ ಮತ್ತು ವಾಲ್ಮೀಕಿ ಹಗರಣ ಮಾಡಲು ಸರ್ಕಾರದಲ್ಲಿ ಹಣವಿದೆ. ಆದರೆ ಗ್ರಾಮ ಪಂಚಾಯತಿಗಳಿಗೆ ಅನುದಾನ ನೀಡಲು ಹಣ ಇರುವುದಿಲ್ಲ ಎಂದು ಸರ್ಕಾರದ ವಿರುದ್ಧ ಗುಡುಗಿದರು.

ಗ್ರಾಮೀಣ ಮಂಡಲದ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ಸಾಮಾನ್ಯ ಜನರಿಗೆ ೨೦೨೨ ನಂತರ ಒಂದೇ ಒಂದು ಮನೆ ಬಿಡುಗಡೆ ಆಗಿಲ್ಲ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಅತಿಕ್ರಮಣದಾರರಿಗೂ ಮನೆ ನೀಡಲಾಗಿತ್ತು. ಆದರೆ ಅದರ ಹಣವನ್ನು ಈ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ತಾಲೂಕಾ ಯುವ ಮೋರ್ಚಾ ಉಪಾಧ್ಯಕ್ಷ ಮಣಿಕಂಠ ಪಾಟೀಲ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ರಸ್ತೆ ಗುದ್ದಲಿ ಪೂಜೆ ಆಗಿಲ್ಲ ರೈತರಿಗೆ ೨೫ಕೆವಿ ಟ್ರಾನ್ಸ್ ಫಾರ್ಮರ್ ಅಳವಡಿಕೆ ವೆಚ್ಚ ₹೨೫೦೦೦ ಇದ್ದಿದ್ದು ₹೩ ಲಕ್ಷ ಆಗಿದೆ. ಇದು ನಮ್ಮ ರೈತರಿಗೆ ಸರ್ಕಾರ ಮಾಡಿದ ಅನ್ಯಾಯ ಎಂದರು.

ಗ್ರಾಮೀಣ ಮಂಡಲದ ಉಪಾಧ್ಯಕ್ಷ ರಾಘು ನಾಯ್ಕ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಬಡವರಿಗೆ ಮಾಡಿದ ಜನೌಷಧದ ಕೇಂದ್ರಗಳನ್ನು ತೆರವು ಗೊಳಿಸಲಾಗುತ್ತಿದೆ. ಇದೇ ಸರ್ಕಾರ ಸಾಧನೆ ಎಂದು ಟೀಕಿಸಿದರು.

ಅಂಡಗಿ ಶಕ್ತಿ ಕೇಂದ್ರದ ಅಧ್ಯಕ್ಷ ರವಿ ದೇವಾಡಿಗ ಮಾತನಾಡಿ, ಪಂಚಾಯತ್ ನಲ್ಲಿ ಒಂದೇ ಒಂದು ಕಾಲುವೆ ಕೂಡ ಬಳೆದಿಲ್ಲ ರಸ್ತೆಯ ಗುಂಡಿ ತುಂಬುವ ಕೆಲಸ ಕೂಡ ಆಗಿಲ್ಲ ಎಂದರು.

ಅಂಡಗಿ ಶಕ್ತಿ ಕೇಂದ್ರದ ಕಾರ್ಯದರ್ಶಿ ಭೀಮಣ್ಣ ನಾಯ್ಕ್, ರಾಮಪುರ ಅಂಡಗಿ ಶಕ್ತಿ ಕೇಂದ್ರದ ವ್ಯಾಪ್ತಿಯ ಬೂತ್ ಅಧ್ಯಕ್ಷ ಸಚಿನ ಗೌಡ ಅಂಡಗಿ, ಶಿವರಾಜ್ ರಾಮಾಪುರ, ಪ್ರಭಾಕರ್ ನಾಯ್ಕ ಕಲಕರಡಿ, ರಾಜೇಶ್ ದೇವಾಡಿಗ, ಕಾರ್ಯದರ್ಶಿಗಳಾದ ನಾಗರಾಜ ನಾಯ್ಕ, ಪರಶುರಾಮ್ ಹೆಬ್ಬತ್ತಿ, ಪಕ್ಷದ ಮುಖಂಡರಾದ ಸಂತೋಷ ಗೌಡ, ಕೃಷ್ಣಪ್ಪ ನಾಯ್ಕ, ಸಾಯಿನಾಥ್ ರಾಮಾಪುರ, ಅಶೋಕ್ ವಡ್ಡರ್ ರಾಮಪುರ ರವಿ ನಾಯ್ಕ್ ಕಿರುವತ್ತಿ ಭಾಗವಹಿಸಿದ್ದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?