ರಾಮನಗರ: ಬಿಡದಿ ಟೌನ್ ಶಿಪ್ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೈತರ ಪರವಾದ ತೀರ್ಮಾನ ಕೈಗೊಂಡಿರುವುದನ್ನು ಸ್ವಾಗತಿಸುತ್ತೇವೆ ಎಂದು ತಾಪಂ ಮಾಜಿ ಸದಸ್ಯರಾದ ರೈತ ಮುಖಂಡ ಹೊಸೂರು ರಾಜಣ್ಣ ತಿಳಿಸಿದರು.
ಕಳೆದ 18 ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ರೈತರ ಪರವಾಗಿ ಉತ್ತಮ ತೀರ್ಮಾನ ತೆಗೆದುಕೊಳ್ಳಲು ಕಾರಣರಾದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಮಾಜಿ ಸಂಸದ ಡಿ.ಕೆ.ಸುರೇಶ್, ಶಾಸಕ ಬಾಲಕೃಷ್ಣ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
2006ರಲ್ಲಿ ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ಘೋಷಣೆ ಮಾಡಿದರು.ಡಿಎಲ್ ಎಫ್ 500 ಕೋಟಿ ಹೂಡಿಕೆ ಕೂಡ ಮಾಡಿತು. ಇದರಿಂದ ಆತಂಕಕ್ಕೊಳಗಾದ ರೈತರು ಪ್ರತಿರೋಧ ವೊಡ್ಡಿದರಲ್ಲದೆ ನಿರಂತರವಾಗಿ ಹೋರಾಟ ನಡೆಸಿದೇವು. ನ್ಯಾಯಾಲಯ ಮೊರೆ ಹೋದರು ತಡೆಯಾಜ್ಞೆ ತರಲು ಸಾಧ್ಯವಾಗಲಿಲ್ಲ.ಟೌನ್ ಶಿಪ್ ಗೆ ಗುರುತಿಸಿದ್ದ ಭೂಮಿಯನ್ನು ರೆಡ್ ಜೋನ್ ಅಂತ ಘೋಷಣೆ ಮಾಡಲಾಗಿತ್ತು. ಈ ಕಾರಣದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯಲಿಲ್ಲ. 2020ರಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾದಾಗ ಕುಮಾರಸ್ವಾಮಿರವರು ಟೌನ್ ಶಿಪ್ ತಮ್ಮ ಕನಸಿನ ಕೂಸು ಎಂದಿದ್ದರು. ಆಗಲೂ ಟೌನ್ ಶಿಪ್ ಯೋಜನೆ ಕೈಬಿಡುವಂತೆ ಹೋರಾಟ ಮಾಡಿದಾಗ ಒಪ್ಪಲಿಲ್ಲ ಎಂದರು.
ಟೌನ್ ಶಿಪ್ ಯೋಜನೆ ಕೈ ಬಿಡುವ ಅಥವಾ ಒಳ್ಳೆಯ ಪರಿಹಾರ ಕೊಡಿಸುವ ಭರವಸೆಯನ್ನು ಬಾಲಕೃಷ್ಣ ನೀಡಿದ್ದರು. ಅದರಂತೆ ರೈತರಿಗೆ ನ್ಯಾಯಯುತವಾದ ಪರಿಹಾರ ಕೊಡಿಸಿದ್ದಾರೆ ಎಂದು ಹೇಳಿದರು.
ರೈತರ ಹೋರಾಟವನ್ನು ನಾವು ಗೌರವಿಸುತ್ತೇವೆ. ಟೌನ್ ಶಿಪ್ ಯೋಜನೆಯಲ್ಲಿ ಅರ್ಧ ಎಕರೆ ಭೂಮಿ ಕಳೆದುಕೊಳ್ಳುವ ರೈತನು ನೆಮ್ಮದಿಯ ಜೀವನ ನಡೆಸಬೇಕು. ಕಟ್ಟ ಕಡೆಯ ರೈತನಿಗೂ ನ್ಯಾಯ ಸಿಗುವ ವಿಶ್ವಾಸವಿದೆ. ಆದರೆ, ರಾಜಕೀಯ ಕಾರಣಕ್ಕಾಗಿ ಚಳವಳಿ ನಡೆಸುತ್ತಿರುವ ಹೋರಾಟಗಾರರು ರೈತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಹೊಸೂರು ರಾಜಣ್ಣ ಟೀಕಿಸಿದರು.
ಕೋಟ್ .................
- ಸಿದ್ದರಾಜು, ರೈತ, ಬೈರಮಂಗಲ
ತಾಪಂ ಮಾಜಿ ಸದಸ್ಯರಾದ ರೈತ ಮುಖಂಡ ಹೊಸೂರು ರಾಜಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.