ರಾಜ್ಯ ಸರ್ಕಾರವು ರೈತ ಪರ ಕೆಲಸ ಮಾಡಲಿದೆ

KannadaprabhaNewsNetwork |  
Published : Oct 01, 2026, 03:00 AM IST
30ವದನವನನದ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಹುನಗುಂದನಮ್ಮ ರಾಜ್ಯ ಸರ್ಕಾರವು ರೈತ ಪರವಾಗಿದೆ, ರೈತರ ಬೆನ್ನೆಲುಬಾಗಿ ನಿಂತಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು.

ಕನ್ನಡಪ್ರಭ ವಾರ್ತೆ ಹುನಗುಂದ

ನಮ್ಮ ರಾಜ್ಯ ಸರ್ಕಾರವು ರೈತ ಪರವಾಗಿದೆ, ರೈತರ ಬೆನ್ನೆಲುಬಾಗಿ ನಿಂತಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಳದಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ಕೃಷಿ ಇಲಾಖೆ ಹಾಗೂ ತಾಲೂಕಾ ಕೃಷಿಕ ಸಮಾಜದ ಸಹಯೋಗದಲ್ಲಿ ರೈತರಿಗೆ ಬೀಜ ವಿತರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯ ಸರ್ಕಾರವು ಕಡಲೆ, ತೋಗರಿ, ಸೂರ್ಯಕಾಂತಿಯ ಬೆಳೆಗಳಿಗೆ ಬೆಂಬಲ ಬೆಲೆಯನ್ನು ನೀಡಿದೆ ಆದರೆ, ಕೇಂದ್ರ ಸರ್ಕಾರ ರೈತರಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತಿದೆ, ಕೇಂದ್ರ ಸರ್ಕಾರ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆಯನ್ನು ರೈತರಿಗೆ ನೀಡುವ ಕೆಲಸ ಇದುವರೆಗೂ ಮಾಡುತ್ತಿಲ್ಲ 2022-23ರಲ್ಲಿ ನಮ್ಮ ಇಡೀ ರಾಜ್ಯವು ಬರ ಎದುರಿಸಿದರು. ಕೇಂದ್ರ ಸರ್ಕಾರವು ಯಾವುದೇ ಪರಿಹಾರ ನೀಡಿಲಿಲ್ಲ, ಇಡೀ 134 ಜನ ಶಾಸಕರು ದೆಹಲಿಗೆ ತೆರಳಿ ಪ್ರಧಾನಿಗಳಿಗೆ ಭೇಟಿಯಾಗಿ ನಮ್ಮ ರಾಜ್ಯ ಸರ್ಕಾರಕ್ಕೆ ಪರಿಹಾರ ಹಣ ನೀಡಿ ಮನವಿ ಮಾಡಿಕೊಂಡರು ನೀಡಲಿಲ್ಲ. ನಮ್ಮ ರಾಜ್ಯಕ್ಕೆ ಬರುವಂತಹ ಜಿಎಸ್‌ಟಿ ತೆರಿಗೆ ಹಣ, ರೈತರಿಗೆ ಎಂಆರ್‌ಪಿ ಹಣ ಪಿಕ್ಸ್ ಮಾಡಲಿಲ್ಲ. ಕಬ್ಬು ಬೆಳೆಹಾರರಿಗೆ ಕನಿಷ್ಠ ಬೆಲೆಯನ್ನು ಕೇಂದ್ರ ಸರ್ಕಾರ ಮಾಡಿಲ್ಲ ಕೇಂದ್ರದ ವಿರುದ್ಧ ಆರೋಪಿಸಿದರು.

ನಮ್ಮ ಸರ್ಕಾರವು ರೈತರಿಗೆ ಎರಡು ಹೊಸ ಯೋಜನೆಯನ್ನು ಜಾರಿಗೆ ತಂದಿದು. ಮುಖ್ಯಮಂತ್ರಿ ನೇಗಿಲು ಯೋಗಿ ಯೋಜನೆ ಈ ಯೋಜನೆ ಸಣ್ಣಪುಟ್ಟ ರೈತರಿಗೆ ಅನುಕೂಲವಾಗಲಿದೆ, ಟ್ರ್ಯಾಕ್ಟರ್ ಮೂಲಕ ಉಚಿತವಾಗಿ ಉಳುಮೆ ಮಾಡಿಕೊಡುವ ಯೋಜನೆ. ನಗರದ ಯುವಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ರೈತರ ಪರಸ್ಥಿತಿ ಅನುಭವದ ಅರಿವು ಮೂಡಿಸಲು ರೈತರಿಗೆ ಗ್ರಾಮ ಅನುಭವ ಕಾರ್ಯಕ್ರಮ ಜಾರಿಗೆ ತರಲಾಯಿತು. ರೈತರ ಪರವಾಗಿ ಅನೇಕ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಪ್ರಜಾಸೇವಾ ಯೋಜನೆಯಿಂದ ಎಲ್ಲ ಇಲಾಖೆಯ ಅಧಿಕಾರಿಗಳು ನಿಮ್ಮ ಮನೆಗೆ ಆಗಮಿಸಿ ತಕ್ಷಣವೇ ಅಲ್ಲಿ ನಿಮ್ಮ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಭಾರತ ಜೋಡೋ ಯೋಜನೆ ಕಬ್ಬಡಿ, ಖೋ ಖೋ ಆಟಗಳಿಗೆ ಸೇರಿದಂತೆ ಯುವಕರಿಗೆ ಉತ್ತೇಜನ ನೀಡಲು ನಗರ, ಗ್ರಾಮಗಳಲ್ಲಿ ನೇರವಾಗಿ ಸರ್ಕಾರದಿಂದ ₹10 ಲಕ್ಷ ಅನುದಾನ ಬರಲಿದೆ ಎಂದರು.

ರೈತರು ಸಂಕಷ್ಟದಲ್ಲಿದ್ದು ಉತ್ತಮ ಮಳೆಯನ್ನು ನೀರಿಕ್ಷೆಯನ್ನು ಮಾಡುತ್ತಿದ್ದಾರೆ. ನಾನು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ವಿತರಿಸಿದ ಬೀಜ ಉತ್ತಮ ಮಳೆಯಾಗಿ ಒಳ್ಳೆಯ ಬೆಳೆಬಂದು ರೈತರು ಹರ್ಷ ಉಂಟು ಮಾಡಲಿ ಎಂದರು.

ಅಧ್ಯಕ್ಷ ಸಂಜೀವ ಜೋಷಿ, ನಿರ್ದೇಶಕರಾದ ಪ್ರಭು ಇದ್ದಲಗಿ, ಜಯಮಹಾಂತೇಶ ಮಲಗಿಹಾಳ, ಬಸವರಾಜ ಹೊಸಮನಿ, ಶರಣಪ್ಪ ಅರಸಿಬೀಡಿ, ನಾಗಪ್ಪ ಬೀಳಗಿ, ಶಿವಾನಂದ ಕಂಠಿ, ರೈತ ಮುಖಂಡರಾದ ಗುರು ಗಾಣೀಗೇರ, ಮಲ್ಲಣ್ಣ ತುಂಬದ, ರಸುಲಸಾಬ ತಹಸೀಲ್ದಾರ, ಬಸವರಾಜ ಪೈಲ, ಚನ್ನಪ್ಪ ಕರಂಡಿ, ಮಲ್ಲಪ್ಪ ಸುಂಕದಕಟ್ಟಿ, ಜಿಲ್ಲಾ ಕೃಷಿ ಜಿಂಟಿ ನಿರ್ದೇಶಕ ದೇವೆಂದ್ರಪ್ಪ, ತಾಂತ್ರಿಕ ಸಹಾಯಕ ಬಸವರಾಜ ಟಕ್ಕಳಕಿ, ರೈತ ಸಂಪರ್ಕ ಅಧಿಕಾರಿ ಮಹೇಶ ಕಟಗೇರಿ ಸೇರಿದಂತೆ ಇತರರು ಇದ್ದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಕಂದಾಯ ಸಚಿವ ಜಿ.ಪರಮೇಶ್ವರ ಕೇಂದ್ರಕ್ಕೆ ಸಾಕಷ್ಟು ಪತ್ರ ಬರೆದಿದ್ದು, ಆದ್ದರಿಂದ ತಕ್ಷಣ ಕೇಂದ್ರ ಸರ್ಕಾರ ಪರಿಶೀಲನೆ ಮಾಡಿ ರೈತರಿಗೆ ನ್ಯಾಯಯುತವಾದ ಪರಿಹಾರ ನೀಡಬೇಕು.

-ವಿಜಯಾನಂದ ಕಾಶಪ್ಪನವರ, ಸಚಿವರು, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾಸೋಹ ಪ್ರೀತಿ, ಸಹಬಾಳ್ವೆ ಬೆಳೆಸುವ ಸಾಧನ
ಪುಟ..2ಕ್ಕೆ ಕಟ್‌ ಲೀಡ್ಮೂರು ವರ್ಷವಾದರೂ ಮುಗಿಯದ ಜಲಧಾರೆ