ರಾಜ್ಯ, ದೇಶ ದಿವಾಳಿಯತ್ತ ಕೊಂಡೊಯ್ಯುವ ಹುನ್ನಾರ

KannadaprabhaNewsNetwork | Published : May 5, 2024 2:02 AM

ಸಾರಾಂಶ

ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರವಾಗಿ ನಿಪ್ಪಾಣಿ ಕ್ಷೇತ್ರದ ಭಿವಶಿ, ಸೌಂದಲಗಾ, ನಾಗನೂರ, ಯಮಗರ್ನಿ, ಬೂದಿಹಾಳ ಕೊಡ್ನಿ, ಗಾಯಕನವಾಡಿ, ಬುದಲಮುಖ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಬಿಜೆಪಿ ಅಭಿವೃದ್ಧಿಪರ ಆಡಳಿತ ಸಹಿಸದ ಕಾಂಗ್ರೆಸ್ ರಾಜ್ಯ, ದೇಶವನ್ನು ದಿವಾಳಿಯತ್ತ ಕೊಂಡೊಯ್ಯುವ ಹುನ್ನಾರ ನಡೆಸಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಕಿಡಿಕಾರಿದರು.

ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರವಾಗಿ ನಿಪ್ಪಾಣಿ ಕ್ಷೇತ್ರದ ಭಿವಶಿ, ಸೌಂದಲಗಾ, ನಾಗನೂರ, ಯಮಗರ್ನಿ, ಬೂದಿಹಾಳ ಕೊಡ್ನಿ, ಗಾಯಕನವಾಡಿ, ಬುದಲಮುಖ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿ, ಭದ್ರತೆ, ಅಖಂಡತೆಗಾಗಿ ಬರುವ ಚುನಾವಣೆಯಲ್ಲಿ ಬಿಜೆಪಿ ಮತ ನೀಡಿ ಪ್ರಧಾನಿ ಮೋದಿ ಕೈ ಬಲಪಡಿಸೋಣ ಕೋರಿದರು.ರೈತರ ಸಂಕಷ್ಟಕ್ಕೆ ಸ್ಪಂದಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೂಲಕ ವರ್ಷಕ್ಕೆ ₹6 ಸಾವಿರ ಕೊಟ್ಟರೆ, ಯಡಿಯೂರಪ್ಪನವರು ಮುಖ್ಯಮಂತ್ರಿ ಇದ್ದಾಗ ರಾಜ್ಯ ಸರ್ಕಾರದಿಂದ ₹4 ಸಾವಿರ ಕೊಡುತ್ತಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ರೈತರಿಗೆ ನೀಡುತ್ತಿದ್ದ ₹4 ಸಾವಿರ ಬಂದ್ ಮಾಡಿತು ಎಂದು ದೂರಿದರು.ಈ ಸಂದರ್ಭದಲ್ಲಿ ಸುನೀಲ ಪಾಟೀಲ, ಶಿವಾಜಿ ಪರಿಟ, ವೈಭವ ಪಾಟೀಲ, ಧೀರಜ ಪರಿಟ, ನಿತಿನ ಪರಿಟ, ಸೂರಜ ಪರಿಟ, ದೀಪಕ ಪಾಟೀಲ, ಬಾಳಾಸೋ ಬನ್ನೆ, ರಾಣಿ ಅಜಿತ ಪರಿಟ, ಗೀತಾ ಪಾಟೀಲ, ಮಂಗಲ ಪರಿಟ, ಸ್ಥಳೀಯ ಮುಖಂಡರು, ಗಣ್ಯರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಲಜೀವನ ಮಷಿನ್ ಮೂಲಕ ಮನೆ ಮನೆಗೆ ನೀರು ಒದಗಿಸಲಾಗುತ್ತಿದೆ. ಉಜ್ವಲ ಯೋಜನೆಯಡಿ ಸುಮಾರು 13 ಕೋಟಿ ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗಿದೆ. ಆಯುಷ್ಮಾನ್‌ ಭಾರತ್ ಅಡಿಯಲ್ಲಿ ಲಕ್ಷವರೆಗೆ ಉಚಿತ ಆರೋಗ್ಯ ಚಿಕಿತ್ಸೆ, ರಾಷ್ಟ್ರೀಯ ಶಿಕ್ಷಣ ನೀತಿ ಮುಂತಾದ ಅಭಿವೃದ್ಧಿ ಕಾರ್ಯಗಳಿಂದ ದೇಶವನ್ನು ಸದೃಢಗೊಳಿಸುತ್ತಿದ್ದಾರೆ.

-ಶಶಿಕಲಾ ಜೊಲ್ಲೆ,

ಶಾಸಕಿ.

Share this article